ವಿಜಯಪುರದ ಶ್ರೀ ಸಿದ್ಧರಾಮೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಹೋಮ ಹವನ ಕಾರ್ಯಕ್ರಮಗಳಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭಾಗಿಯಾಗಿ ಪೂಜೆ ನೆರವೇರಿಸಿದರು. ಪಕಿರಯ್ಯಾ ಶಾಸಿöÃಗಳು, ಸಿದ್ಧರಾಮಯ್ಯ ಶಾಸಿöಗಳು, ಸಂ.ಗು. ಸಜ್ಜನ ಮತ್ತಿತರಿದ್ದಾರೆ.
ವಿಜಯಪುರ: ನಗರದ ಆರಾಧ್ಯ ದೈವ ಶ್ರೀ ಸಿದ್ಧೇಶ್ವರ ದೇವಸ್ಥಾನದಲ್ಲಿ ಬುಧವಾರ ಸಂಕ್ರಮಣ ಆಚರಣೆ, ಹೋಮ ಹವನ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.
ಸಂಕ್ರಮಣ ಎಂದರೆ ಕೂಡಿ ಬಾಳುವುದು ಎಂದರ್ಥ. ಇಂದು ಎಳ್ಳು ಬೆಲ್ಲವನ್ನು ಸಂಬAಽಕರು, ಮಿತ್ರರೊಡನೆ ಪರಸ್ಪರ ವಿನಿಮಯ ಮಾಡುವ ಮೂಲಕ ಸ್ನೇಹ ಬಾಂಧವ್ಯ ಬೆಳೆಸಿಕೊಳ್ಳುವ ಅರ್ಥ ಹೊಂದಿದೆ. ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಮಧ್ಯಾಹ್ನ 12.45ಕ್ಕೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಹೋಮ ನೆರವೇರಿಸಲಾಯಿತು.
ಶುದ್ಧೋದಕರಿಂದ ಶುಚಿಗೊಳಿಸಿದ ಹೋಮ ಕಟ್ಟೆಯಲ್ಲಿ ಧಾರ್ಮಿಕ ವಿಽ-ವಿಧಾನಗಳಿಂದ ಸಿಂಗಾರಗೊಂಡಿತ್ತು. ಆರ್ಘ್ಯ, ಪಾದ್ಯ ಆಚಮನಗಳೊಂದಿಗೆ ಅಭಿಷೇಕ ಸಲ್ಲಿಸಲಾಯಿತು. ಚಂದನದ ಕಟ್ಟಿಗೆ ಎಳ್ಳುಧಾನ್ಯಗಳಿಂದ ಕೂಡಿದ ಕಟ್ಟೆ ಮೇಲೆ ಹಾವೇರಿ ಜಿಲ್ಲೆಯ ಪಕಿರಯ್ಯಾ ಶಾಸ್ತ್ರೀಗಳ ನೇತೃತ್ವದಲ್ಲಿ ಹೋಮ ಹವನಗಳು ನೆರೆವೇರಿದವು. ಹಾವೇರಿ ಜಿಲ್ಲೆಯ ಪಕಿರಯ್ಯಾ ಶಾಸಿöÃಗಳು, ಸಿದ್ಧರಾಮಯ್ಯಾ ಶಾಸಿöಗಳು, ಬಸಯ್ಯಾ ಶಾಸಿöಗಳು, ಬೂದಯ್ಯ ಹಿರೇಮಠ, ಷಢಕ್ಷರಯ್ಯ ಹಿರೇಮಠ ನೇತೃತ್ವದಲ್ಲಿ ಹೋಮ ಹವನ ಕಾರ್ಯಕ್ರಮ ನಡೆಯಿತು.
ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಉತ್ಸವ ಮೂರ್ತಿ, ಅಲಂಕೃತ ನಂದಿ ಧ್ವಜಗಳ ಮೆರವಣಿಗೆ ನಡೆಯಿತು. ಸಂಜೆ ನಗರದ ಹಲವು ಬಡಾವಣೆಯಗಳಲ್ಲಿ ಜನರು ಹೊಸ ಬಟ್ಟೆ ತೊಟ್ಟು ಸಂಬAಽಕರ, ಸೇಹಿತರ ಮನೆಗಳಿಗೆ ತೆರಳಿ ಎಳ್ಳು ಬೆಲ್ಲ ನೀಡಿ ಶುಭಾಶಯ ವಿನಿಮಯಿಸಿಕೊಂಡರು.
ಸಂಸ್ಥೆ ಉಪಾಧ್ಯಕ್ಷ ಸಂ.ಗು. ಸಜ್ಜನ, ಚೇರ್ಮನ್ ಬಸಯ್ಯಾ ಹಿರೇಮಠ, ಕಾರ್ಯದರ್ಶಿಗಳಾದ ಸದಾನಂದ ದೇಸಾಯಿ, ಬಿ.ಎಸ್. ಸುಗೂರ, ಜಂಟಿ ಕಾರ್ಯದರ್ಶಿ ಎಂ.ಎಂ. ಸಜ್ಜನ, ಕೋಶ್ಯಾಧ್ಯಕ್ಷ ಶಿವಾನಂದ ನೀಲಾ, ಜಾತ್ರಾ ಸಮಿತಿಯ ಗುರು ಗಚ್ಚಿನಮಠ, ಎಸ್.ಎಚ್. ನಾಡಗೌಡ, ಸುನೀಲ ಉಕಮನಾಳ, ಎಂ.ಎಸ್. ರುದ್ರಗೌಡರ, ಸಾಯಿಬಣ್ಣ ಭೋವಿ, ನಾಗಪ್ಪ ಗುಗ್ಗರಿ, ಉಮಾಕಾಂತ ವಣರೊಟ್ಟಿ, ಬಸವರಾಜ ಕೋರಿ, ಚಿಂಚಲಿ, ರಾಜಶೇಖರ ಮಗಿಮಠ, ರಾಹುಲ್ ಜಾಧವ, ಶಿವರುದ್ರ ಬಾಗಲಕೋಟ, ಪ್ರೇಮಾನಂದ ಬಿರಾದಾರ, ಎಸ್.ಎಂ. ಪಾಟೀಲ ಬಬಲಾದಿ, ರಮೇಶ ಹಳ್ಳದ, ಶ್ರೀಮಂತ ಜಂಬಗಿ, ಎಂ.ಎಸ್. ಕರಡಿ, ಸಂತೋಷಕುಮಾರ ತಳಕೇರಿ, ಬಸವರಾಜ ಕಂದಗಲ್ಲ, ಈರಣ್ಣ ಪಾಟೀಲ, ಮಹಾದೇವ ಜಂಗಮಶೇಟ್ಟಿ, ಅಮೃತ ತೋಶ್ನಿವಾಲ, ಹಾಗೂ ಭಕ್ತಾದಿಗಳಿದ್ದರು.
ನಂತರ ಅರುಣ ಹುಂಡೇಕಾರ ಅವರಿಂದ ಪ್ರಸಾದ ಸೇವೆ ನೆರವೇರಿತು.