ಸಮೀರ್ ಅಲಿಯಾಸ್ ಪಿಕೆ ಇನಾಮದಾರ್, ಮೃತ ವ್ಯಕ್ತಿ
- ಲಿವಿಂಗ್ ಟು ಗೆದರ್’ ಸಂಬಂಧ
- ಬಾಡಿಗೆ ಮನೆಯಲ್ಲಿ ಶವ ಪತ್ತೆ
- ಕುಟುಂಬಸ್ಥರಿಂದ ಕೊಲೆಯ ಶಂಕೆ
'Living to Get Together'ವಿಜಯಪುರ: ‘ಲಿವಿಂಗ್ ಟು ಗೆದರ್’ ಎಂಬ ಸಂಬಂಧವೊಂದು ರೌಡಿಶೀಟರ್‌ನ ಜೀವಕ್ಕೆ ಎರವಾಗಿದ್ದು, ಆತನ ಕುಟುಂಬಸ್ಥರಿಂದ ಕೊಲೆಯ ಶಂಕೆ ವ್ಯಕ್ತವಾಗಿದೆ.
ಇಲ್ಲಿನ ಕೆಎಚ್‌ಬಿ ಕಾಲನಿಯ ಮನೆಯೊಂದರಲ್ಲಿ ಸೋಮವಾರ ಬೆಳಗ್ಗೆ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಸಮೀರ್ ಅಲಿಯಾಸ್ ಪಿಕೆ ಇನಾಮದಾರ್ (26) ಹತ್ಯೆಯಾದ ಯುವಕ. ಕಳೆದ ನ ಆಲ್ಕು ವರ್ಷಗಳಿಂದ ತಯ್ಯಬಾ ಬಾಗವಾನ ಎಂಬ ಮಹಿಳೆಯೊಂದಿಗೆ ‘ಲಿವಿಂಗ್ ಟು ಗೆದರ್’ ಎಂಬ ಸಂಬಂಧದಲ್ಲಿದ್ದ ಈತ ಸೋಮವಾರ ತಯ್ಯಬಾಳ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಆದರೆ, ಇದೊಂದು ಸಹಜ ಸಾವಲ್ಲ; ಕೊಲೆ ಎಂದು ಸಮೀರ್‌ನ ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆ ವಿವರ:
ರೌಡಿಶೀಟರ್ ಆಗಿದ್ದ ಸಮೀರ್ ಜೊತೆ ತಯ್ಯಬಾ ಕೆಎಸ್‌ಬಿ ಕಾಲನಿಯಲ್ಲಿ ಬಾಡಿಗೆ ಮನೆ ಮಾಡಿ ವಾಸವಾಗಿದ್ದಳು. ಏಕಾಏಕಿ ಸಮೀರ್ ಸಾವಿಗೀಡಾಗಿದ್ದು, ತಯ್ಯಬಾ ಹಾಗೂ ಆಕೆಯ ಸಹೋದರ ಅಸ್ಲಂ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆಂದು ಸಮೀರ್‌ನ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೇ, ಈ ಸಮೀರ್ ಆಗಾಗ ಕುಡಿದು ಬಂದು ತಯ್ಯಬಾಳೊಂದಿಗೆ ಜಗಳ ಮಾಡುತ್ತಿದ್ದನೆಂದು ತಿಳಿದು ಬಂದಿದೆ. ಕೊಲೆ ಮಾಡಿದವರೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಮೀರ್ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಪೊಲೀಸರು ಸಮೀರ್‌ನ ಕಳೆಬರವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.