ವಿಜಯಪುರದ ಆರ್‌ಕೆಎಂ ಆರ್ಯುವೇದ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟಿçÃಯ ಕುಷ್ಠರೋಗ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶಂಭುಲಿAಗಯ್ಯ ಕರ್ಪೂರಮಠ, ಎನ್.ಎಂ. ರುದ್ರಗೌಡ, ಬಸವರಾಜೇಶ್ವರಿ ಪಾಟೀಲ ಮತ್ತಿತರರಿದ್ದಾರೆ.
ವಿಜಯಪುರ: ನಗರದ ಆರ್‌ಕೆಎಂ ಆರ್ಯುವೇದ ಆಸ್ಪತ್ರೆಯ ಕಾಯ ಚಿಕಿತ್ಸಾ ವಿಭಾಗದ ವತಿಯಿಂದ ರಾಷ್ಟೀಯ ಕುಷ್ಠರೋಗ ದಿನಾಚರಣೆ ಅಂಗವಾಗಿ ಇತ್ತೀಚೆಗೆ ಕುಷ್ಠರೋಗ ಜಾಗೃತಿ ಕಾರ್ಯಕ್ರಮ ನಡೆಯಿತು.
ಕುಷ್ಠರೋಗದ ತ್ವರಿತ ಪತ್ತೆ, ಪರಿಣಾಮಕಾರಿ ಚಿಕಿತ್ಸೆ ಹಾಗೂ ರೋಗದ ಕುರಿತು ಸಮಾಜದಲ್ಲಿರುವ ತಪ್ಪು ಕಲ್ಪನೆಗಳು ಮತ್ತು ಕಳಂಕ ನಿವಾರಿಸುವ ಸದುದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದರೆ ಕುಷ್ಠರೋಗವು ಸಂಪೂರ್ಣವಾಗಿ ಗುಣಮುಖವಾಗುವ ರೋಗ ಎಂಬುವುದರ ಕುರಿತು ಅರಿವು ಮೂಡಿಸಲಾಯಿತು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಂಭುಲಿAಗಯ್ಯ ಕರ್ಪೂರಮಠ ಕಾರ್ಯಕ್ರಮ ಉದ್ಘಾಟಿಸಿ, ಸದ್ಯ ಹಮ್ಮಿಕೊಂಡಿರುವ ಜಾಗೃತಿ ಜಾಥಾವು ಸಮುದಾಯ ಆರೋಗ್ಯದ ಮೇಲಿನ ಕಾಳಜಿ, ಕರುಣೆ ಮತ್ತು ಜವಾಬ್ದಾರಿಯ ಸಂಕೇತವಾಗಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಎನ್.ಎಂ. ರುದ್ರಗೌಡ, ಉಪ ಪ್ರಾಚಾರ್ಯ ಎಸ್.ಬಿ. ಹಿರೇಮಠ, ಪ್ರಾಧ್ಯಾಪಕರಾದ ಡಾ. ಪ್ರಫೀನ್‌ಕುಮಾರ ಬಗಲಿ, ಬಸವರಾಜೇಶ್ವರಿ ಪಾಟೀಲ ಮತ್ತಿತರರಿದ್ದರು.
ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳು ವೈದ್ಯಕೀಯ ಉಪಕರಣಗಳ ಜತೆಗೆ ಕುಷ್ಠರೋಗ ಪೀಡಿತರಿಗೆ ಮೀಸಲಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಆರೋಗ್ಯ ಶಿಬಿರ ನಡೆಸಿದರು. ಶಿಬಿರದಲ್ಲಿ ಆರೋಗ್ಯ ತಪಾಸಣೆ ನಡೆಸಿದರು. ಅಲ್ಲದೆ, ಸ್ವಚ್ಛತೆ, ಪೌಷ್ಟಿಕ ಆಹಾರ ಹಾಗೂ ನಿರಂತರ ವೈದ್ಯಕೀಯ ಆರೈಕೆಯ ಮಹತ್ವದ ಕುರಿತು ಅರಿವು ಮೂಡಿಸಿದರು. ಹಣ್ಣು ಮತ್ತು ಆಹಾರ ಪೊಟ್ಟಣಗಳನ್ನು ವಿತರಿಸಿದರು.
ಕಾಯಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ರಾಹುಲ್ ಕುಲಕರ್ಣಿ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು.