ಸಿಂದಗಿ ನಗರದ ಸಾರಂಗಮಠದಲ್ಲಿ ಆಯೋಜಿಸಿದ್ದ ಸದ್ವಿಚಾರಗೋಷ್ಠಿಯಲ್ಲಿ ಪ್ರೊ. ದಾನಯ್ಯ ಮಠಪತಿ ಅವರು ಆದಿ ಜಗದ್ಗುರು ರೇಣುಕಾಚಾರ್ಯರ ಬದುಕು ಮತ್ತು ತತ್ವಗಳ ಕುರಿತು ಮಾತನಾಡಿದರು. ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಮತ್ತಿತರರಿದ್ದರು. 
ವಿಜಯಪುರ

ರೇಣುಕರು ಮಾನವ ಕುಲಕ್ಕೆ ಆಧ್ಯಾತ್ಮಿಕ ಶಕ್ತಿಯ ದಿಕ್ಸೂಚಿ

ಸಿಂದಗಿ: ಭಾರತೀಯ ಆಧ್ಯಾತ್ಮಿಕ ಪರಂಪರೆಯ ಆದಿ ಜಗದ್ಗುರು ರೇಣುಕಾಚಾರ್ಯರು ಶಕ್ತಿ ವಿಶಿಷ್ಟಾಧ್ವೆÊತ ಸಿದ್ಧಾಂತ ಪ್ರತಿಪಾದಿಸಿದ ತತ್ವಜ್ಞಾನಿಗಳಾಗಿದ್ದರು ಎಂದು ಪದ್ಮರಾ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಪ್ರೊ. ದಾನಯ್ಯ ಮಠಪತಿ ಹೇಳಿದರು.
ನಗರದ ಸಾರಂಗಮಠದ ಲಿಂ. ಸಿದ್ಧಲಿಂಗ ಮಹಾಸ್ವಾಮೀಜಿ ಕಾನರೆನ್ಸ್ ಹಾಲ್‌ನಲ್ಲಿ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನದ ವತಿಯಿಂದ ಹೋಳಿ ಹುಣ್ಣಿಮೆ ನಿಮಿತ್ತ ಇತ್ತೀಚೆಗೆ ಹಮ್ಮಿಕೊಂಡಿದ್ದ ಸದ್ವಿಚಾರ ಗೋಷ್ಠಿ-352ರ ಕಾರ್ಯಕ್ರಮದಲ್ಲಿ ಆದಿ ಗುರು ರೇಣುಕಾಚಾರ್ಯರ ಜಯಂತಿ ಪ್ರಯುಕ್ತ ಆದಿ ಜಗದ್ಗುರು ರೇಣುಕಾಚಾರ್ಯರು ಕುರಿತು ಅವರು ಉಪನ್ಯಾಸ ನೀಡಿದರು.
ಚಾರ್ಯರು ಒಂದು ಧರ್ಮ, ಪಂಥದ ಗುರುವಾಗಿರದೇ, ಶಾಂತಿ, ಸೌಹಾರ್ದತೆ ಮತ್ತು ಭಕ್ತಿ ಪಥವನ್ನು ತೋರಿ, ಸತ್ಯ, ಧರ್ಮ ಮತ್ತು ಜೀವನದ ನೈತಿಕ ಮೌಲ್ಯಗಳ ಮಹತ್ವ ಸಾರಿ, ಭಕ್ತಿ, ಜ್ಞಾನ ಮತ್ತು ಸತ್ಕರ್ಮಗಳ ತತ್ವಗಳೊಂದಿಗೆ ಅವರು ಮಾನವ ಕುಲಕ್ಕೆ ಆಧ್ಯಾತ್ಮಿಕ ಶಕ್ತಿಯ ದಿಕ್ಸೂಚಿಯಾಗಿದ್ದರು ಎಂದರು.
ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆ ರಾಷ್ಟಿçÃಯ ಅಧ್ಯಕ್ಷ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಜಗತ್ತಿಗೆ ಶಾಂತಿ ಮತ್ತು ಭಕ್ತಿ ಮಾರ್ಗವನ್ನು ಸೂಚಿಸಿದ ಆದಿ ಜಗದ್ಗುರು ರೇಣುಕಾಚಾರ್ಯರು,
ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದರು. ಇಂದಿನ ಯುವ ಪೀಳಿಗೆ ಅವರ ಜೀವನ ತತ್ವಗಳನ್ನು ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದರು.
ಕಲಬುರಗಿಯ ಶಿಕ್ಷಕ ಕುಮಾರಸ್ವಾಮಿ ಜಾಗೀರದಾರ, ಇಂಡಿಯ ಶ್ವೇತಾ ಸಿಂದಗಿ ಅವರನ್ನು ಸನ್ಮಾನಿಸಲಾಯಿತು.
ಸಾರಂಗಮಠದ ಉತ್ತರಾಽಕಾರಿ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು, ಸಂಸ್ಥೆಯ ವಿವಿಧ ಕಾಲೇಜ್ ವಿಭಾಗಗಳ ಪ್ರಾಚಾರ್ಯರು, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ಮತ್ತಿತರರಿದ್ದರು.
ದೆಹಲಿಯ ಕಲಾವಿದ ಈರಣ್ಣ ಜಿ.ಆರ್., ಮಹಾದೇವಪ್ಪ ಮುಂಡೇವಾಡಗಿ ಸಿ.ಎಂ. ಹೂಗಾರ, ವಿವೇಕಾನಂದ ಅರಳಗುಂಡಗಿ ಅವರ ಕುಟುಂಬಸ್ಥರಿAದ ದಾಸೋಹ ಸೇವೆ ನೆರವೇರಿತು.