ಎಸ್‌ಎಸ್‌ಎಂ ಕಾಲೇಜ್ ಆ-ï -Áರ್ಮಸಿ ಆ್ಯಂಡ್ ರಿಸರ್ಚ್ ಕಾಲೇಜು.
ವಿಜಯಪುರ : ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್‌ಎಸ್‌ಎಂ ಕಾಲೇಜ್ ಆ-ï -Áರ್ಮಸಿ ಆ್ಯಂಡ್ ರಿಸರ್ಚ್ ಕಾಲೇಜು ರಾಷ್ಟಿçÃಯ ಅತ್ಯುತ್ತಮ -Áರ್ಮಸಿ ಕಾಲೇಜುಗಳಲ್ಲಿ 2ನೇ ಸ್ಥಾನ ಪಡೆದಿದೆ.
ದೇಶದ ಹೆಸರಾಂತ ನಿಯತಕಾಲಿಕ ಔಟಲುಕ್ ಐಸಿಎಆರ್‌ಇ-2026 ನಡೆಸಿದ ರಾಷ್ಟಿçÃಯ ಸಮೀಕ್ಷೆಯಲ್ಲಿ ಈ ರ‍್ಯಾಂಕ್ ಲಭಿಸಿದ್ದು, ಕಳೆದ ವರ್ಷ ಕಾಲೇಜಿಗೆ 3ನೇ ರ‍್ಯಾಂಕ್ ಲಭಿಸಿತ್ತು. ಸದ್ಯ ಒಂದು ಸ್ಥಾನ ಹೆಚ್ಚಿಗೆ ಬಂದಿದ್ದು 2ನೇ ರ‍್ಯಾಂಕ್ ಸಿಕ್ಕಿದೆ.
ಈಗಾಗಲೇ ನ್ಯಾಕ್ ನಿಂದ ಅ++ ಮಾನ್ಯತೆ ಪಡೆದ ಮೊದಲ ಕಾಲೇಜು ಎಂಬ ಹೆಗ್ಗಳಿಕೆ ಹೊಂದಿರುವ ಈ ಕಾಲೇಜಿನ ಕಿರೀಟಕ್ಕೆ ಈಗ ಮತ್ತೊಂದು ಗರಿ ಸಿಕ್ಕಂತಾಗಿದೆ. ಕಾಲೇಜಿನಲ್ಲಿ ಬೋಧನೆ, ಕಲಿಕಾ ವಾತಾವರಣ, ವಿದ್ಯಾರ್ಥಿಗಳಿಗೆ ಪಠ್ಯ, ಪ್ರಾಯೋಗಿ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ನೀಡಲಾಗಿರುವ ಸೌಲಭ್ಯಗಳನ್ನು ಪರಿಗಣಿಸಿ ಈ ರ‍್ಯಾಂಕ್ ನೀಡಲಾಗಿದೆ.
ಕಾಲೇಜಿನ ಸಾಧನೆಗೆ ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷ, ಸಚಿವ ಎಂ.ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ, ಡೀಮ್ಡ್ ವಿವಿ ರಿಜಿಸ್ಟಾçರ್ ಆರ್.ವಿ. ಕುಲಕರ್ಣಿ ಸಂತಸ ವ್ಯಕ್ತಪಡಿಸಿದ್ದು, ಕಾಲೇಜಿನ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿz್ದÁರೆ ಎಂದು ಕಾಲೇಜಿನ ಪ್ರಾಚಾರ್ಯ ಸಿ. ಮಲ್ಲಿಕಾರ್ಜುನ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿz್ದÁರೆ.