ತಾಳಿಕೋಟೆಯ ಮಾರುಕಟ್ಟೆ ಆವರಣದಲ್ಲಿ ಶಾಸಕ ಸಿ.ಎಸ್.ನಾಡಗೌಡ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಲಾದ ಸೌಹಾರ್ದ ಇಫ್ತಿಯಾರ್ ಕೂಟದಲ್ಲಿ ಶಾಸಕ ಸಿ.ಎಸ್.ನಾಡಗೌಡ ಮಾತನಾಡಿದರು. ಗನಿಸಾಬ ಲಾಹೋರಿ, ಅಬ್ದುಲ್ ರಹಮಾನ ಎಕೀನ, ಸಿಕಂದರ ವಠಾರ ಮತ್ತಿತರರಿದ್ದರು. 
ವಿಜಯಪುರ

ರಂಜಾನ್ ಸೌಹಾರ್ದತೆಯ ಪ್ರತೀಕ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಎಸ್. ನಾಡಗೌಡ ಅಭಿಮತ
  • ಎಲ್ಲ ಧರ್ಮಗಳ ಮೂಲ ಮಂತ್ರ ಶಾಂತಿ
ತಾಳಿಕೋಟೆ: ಪವಿತ್ರ ರಂಜಾನ್ ಶಾಂತಿ, ಸಹನೆ ತಾಳ್ಮೆ, ಪ್ರೀತಿ ಹಾಗೂ ಕರುಣೆಯ ತಿಂಗಳಾಗಿದೆ. ಇಂತಹ ಮಾಸದಲ್ಲಿ ಇರಾನ್ ಮತ್ತು ಅಮೇರಿಕಾ-ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ದ ನಿಲ್ಲಬೇಕಾಗಿದೆ. ಯುದ್ದದ ಪರಿಣಾಮ ಕೆಲ ದೇಶಗಳ ಮೇಲೆ ವ್ಯವಹಾರಿಕ ಸರಕು ಸಾಗಾಣಿಕೆ ಅಲ್ಲದೇ ಆರ್ಥಿಕವಾಗಿ ಪರಿಣಾಮ ಬೀರುತ್ತಿದೆ ಎಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದರು.
ಪಟ್ಟಣದ ಹಳೆಯ ಮಾರುಕಟ್ಟೆ ಆವರಣದಲ್ಲಿ ನಾಡಗೌಡ ಅಭಿಮಾನಿ ಬಳಗದ ವತಿಯಿಂದ ಶನಿವಾರ ರಂಜಾನ್ ಹಬ್ಬದ ನಿಮಿತ್ತ ಸೌಹಾರ್ದ ಇಫ್ತಿಯಾರ್ ಕೂಟದಲ್ಲಿ ಮಾತನಾಡಿದರು.
ಯುದ್ಧ ನಡೆಯುತ್ತಿರುವುದು ನೋವಿನ ಸಂಗತಿ. ಆದಷ್ಟು ಬೇಗ ಶಾಂತಿ ನೆಲಸುವಂತಾಗಬೇಕಿದೆ, ಭೂಮಿಯ ಮೇಲೆ ಬದುಕಿರುವಷ್ಟು ದಿನ ಒಳ್ಳೆಯ ಕಾರ್ಯಗಳನ್ನು ಮಾಡಬೇಕು. ಎಲ್ಲ ಧರ್ಮಗಳ ಮೂಲ ಮಂತ್ರ ಶಾಂತಿ ಮತ್ತು ಪ್ರೀತಿಯೇ ಆಗಿದೆ ಅದನ್ನು ತಿಳಿದುಕೊಳ್ಳುವ ಪ್ರಯತ್ನ ನಾವೆಲ್ಲರೂ ಮಾಡಬೇಕಾಗಿದೆ ಎಂದರು.
ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ, ಮುಖಂಡರಾದ ರೋಷನ್ ಡೋಣಿ, ಶಿವರಾಜ ಗುಂಡಕನಾಳ, ಕೆ.ಐ. ಸಗರ ಹಾಗೂ ಇಬ್ರಾಹಿಂ ಮನ್ಸೂರ ಮಾತನಾಡಿ ಶಾಸಕರ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.
ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರಘೇಶ ವಿರಕ್ತಮಠ, ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ, ವಿವಿ ಸಂಘದ ಅಧ್ಯಕ್ಷ ವಿ.ಸಿ.ಹಿರೇಮಠ ಸಾನ್ನಿಧ್ಯ ವಹಿಸಿದ್ದರು.
ಗನಿಸಾಬ ಲಾಹೋರಿ, ಅಬ್ದುಲ್ ರಹಮಾನ ಎಕೀನ, ಸಿಕಂದರ ವಠಾರ, ನಿರಂಜನಶಾ ಮಕಾಂದಾರ, ಶಮ್ಶುದ್ದೀನ ನಾಲಬಂದ, ಆರೀಫ ಹೊನುಟಗಿ, ಫಯಾಜ ಉತ್ನಾಳ, ಹಸನಸಾಬ ಮನಗೂಳಿ, ಕಾಶೀಮಪಟೇಲ ಮೂಕಿಹಾಳ, ಎ.ಎಸ್.ನಮಾಜಕಟ್ಟಿ, ಡಾ.ನಜೀರ ಕೋಳ್ಯಾಳ, ಡಾ.ಎ.ಎ.ನಾಲಬಂದ, ಎಂ.ಎ.ಮೇತ್ರಿ, ಸಿಕಂದರ ಡೋಣಿ, ಮಂಜೂರ ಬೇಪಾರಿ, ಮಹೆಬೂಬ ಕೆಂಭಾವಿ, ಮುನ್ನಾ ಅರ್ಜುಣಗಿ, ಅಕ್ಕಮಹಾದೇವಿ ಕಟ್ಟಿಮನಿ, ನೀಲಮ್ಮಗೌಡತಿ ಪಾಟೀಲ, ಸುರೇಶಧಣಿ ನಾಡಗೌಡ, ಸಿದ್ದನಗೌಡ ಪಾಟೀಲ, ಪ್ರಭುಗೌಡ ಮದರಕಲ್ಲ, ಬಿ.ಎನ್.ಹಿಪ್ಪರಗಿ, ಗುರು ಗೌಡ ಗುರಡ್ಡಿ, ವೀರೇಶ ಬಾಗೇವಾಡಿ, ಶರಣು ದೇಶಮುಖ, ಸಂಗನಗೌಡ ಅಸ್ಕಿ, ಆಸೀಫ ಕೆಂಭಾವಿ ಇತರರಿದ್ದರು.