ವಿಜಯಪುರದ ಬಿಎಲ್‌ಡಿಇ ಡೀಮ್ಡï ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಅಂಗಾAಗ ದಾನದ ಮಹತ್ವ ಕುರಿತು ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾಗೆ ಗಣ್ಯರು ಚಾಲನೆ ನೀಡಿದರು. ಅರುಣ ಇನಾಮದಾರ, ವಿಜಯಕುಮಾರ ಕಲ್ಯಾಣಪಗೋಳ ಮತ್ತಿತರರಿದ್ದಾರೆ. 
ವಿಜಯಪುರ

ಅಂಗಾAಗದಾನ ಸಾರ್ವಜನಿಕ ತಿಳಿವಳಿಕೆ ಅಗತ್ಯ

ವಿಜಯಪುರ;

ಪ್ರಸ್ತುತ ದಿನಗಳಲ್ಲಿ ಅಂಗಾAಗ ದಾನದ ಮಹತ್ವದ ಸಂದೇಶವನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ಅಗತ್ಯವಿದ್ದು, ಯುವ ಜನತೆ ಈ ಮಹತ್ವದ ಮಾನವೀಯ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಬಿಎಲ್‌ಡಿಇ ಡೀಮ್ಡï ವಿವಿಯ ಕುಲಪತಿ ಡಾ. ಅರುಣ ಇನಾಮದಾರ ಕರೆ ನೀಡಿದರು.

ನಗರದ ಬಿಎಲ್‌ಡಿಇ ಡೀಮ್ಡï ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಬಿ.ಎಂ. ಪಾಟೀಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಅಂಗಾAಗ ದಾನ ದಿನಾಚರಣೆ ಅಂಗವಾಗಿ ಅಂಗಾAಗ ದಾನದ ಮಹತ್ವ ಕುರಿತು ಸಾರ್ವಜನಿಕರಲ್ಲಿ ಜÁಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡ ಜನಜಾಗೃತಿ ಜಾಥಾ ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಅಂಗಾAಗ ದಾನ ಕುರಿತು ಅರಿವು ಮೂಡಿಸುವುದು ಹಾಗೂ ದಾನಕ್ಕೆ ನೋಂದಣಿ ಮಾಡಿಕೊಳ್ಳಲು ಸಾರ್ವಜನಿಕರನ್ನು ಪ್ರೇರೇಪಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಬಿಎಲï‌ಡಿಇ ಅಸೋಸಿಯೇಷನ್‌ನ ಅಧ್ಯಕ್ಷ ಎಂ.ಬಿ. ಪಾಟೀಲ ಹಾಗೂ ಡೀಮ್ಡ್ ವಿವಿಯ ಕುಲಾಽಪತಿ ಬಿ.ಎಂ. ಪಾಟೀಲರು ಅಂಗಾAಗ ದಾನದ ಮಹತ್ವದ ಕುರಿತು ತಿಳಿಸಿದರು. ಸಮ ಕುಲಾಽಪತಿ ವೈ.ಎಂ. ಜಯರಾಜ ಹಾಗೂ ಕುಲಸಚಿವ ಆರ್.ವಿ. ಕುಲಕರ್ಣಿ ಅಂಗಾAಗ ದಾನದ ಕುರಿತು ಸಾರ್ವಜನಿಕರಲ್ಲಿ ಜÁಗೃತಿ ಮೂಡಿಸುವ ಕಾರ್ಯಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಜಾಥಾವು ಬಿಎಲï‌ಡಿಇ ಡೀಮ್ಡï ವಿವಿಯ ಆವರಣದಿಂದ ಆರಂಭಗೊAಡು ಸಿದ್ಧೇಶ್ವರ ದೇವಸ್ಥಾನದವರೆಗೆ ಸಾಗಿತು. ಜಾಥಾದಲ್ಲಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಅಲೈಡ್ ಹೆಲ್ತï ಸೈನ್ಸಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಂಗಾಗ ದಾನದ ಮಹತ್ವ ಸಾರುವ ಬ್ಯಾನರ್‌ಗಳು, ಹೋರ್ಡಿಂಗ್‌ಗಳು ಹಾಗೂ ಜಾಗೃತಿ -Àಲಕಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ನಂತರ ಸಿದ್ಧೇಶ್ವರ ದೇವಸ್ಥಾನ ಬಳಿ ನಡೆದ ಸಮಾರೋಪದಲ್ಲಿ ವೈದ್ಯಕೀಯ ನಿರ್ದೇಶಕ ವಿಜಯಕುಮಾರ ಕಲ್ಯಾಣಪಗೋಳ ಅವರ ಉಪಸ್ಥಿತಿಯಲ್ಲಿ ಎಸ್.ಬಿ. ಪಾಟೀಲ ಮಾತನಾಡಿ, ಅಂಗಾAಗ ದಾನದ ಮಹತ್ವ, ಅಂಗಾAಗ ಕಸಿ ಚಿಕಿತ್ಸೆಗಾಗಿ ಕಾಯುತ್ತಿರುವ ರೋಗಿಗಳಿಗೆ ಅಂಗಾAಗಗಳ ಅಗತ್ಯತೆ ಹಾಗೂ ಅಂಗಾAಗ ದಾನದಲ್ಲಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಕುರಿತು ವಿವರಿಸಿದರು.
ಡಾ. ವಿನಯ ಕುಂದರಗಿ ಅಂಗಾAಗ ದಾನದ ಕಾನೂನುಬದ್ಧ ಹಾಗೂ ನೈತಿಕ ಅಂಶಗಳ ಕುರಿತು ಉಪನ್ಯಾಸ ನೀಡಿದರು. ವೈದ್ಯರಾದ ಸಂತೋಷ ಪಾಟೀಲ, ಬಸವರಾಜ್ ಎಸ್., ಕಾರ್ತಿಕ ಸಿ. ಸೇರಿ ಮತ್ತಿತರರಿದ್ದರು. ಕಸಿ ಸಂಯೋಜಕ ಶಾಂತೇಶ ಸಲಗರೆ ವಂದಿಸಿದರು.