ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆ ಆವರಣದಲ್ಲಿ ಬಾಂಬ್ ಬ್ಲಾಸ್ಟ್ ಸಂದರ್ಭದಲ್ಲಿ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆಗಳ ಕ್ರಮಗಳ ಕುರಿತು ಹಮ್ಮಿಕೊಂಡಿದ್ದ ಅಣುಕು ಕಾರ್ಯಕ್ರಮ ದೃಶ್ಯ.
ವಿಜಯಪುರ: ಅಗ್ನಿ ಶಾಮಕ ಇಲಾಖೆ, ಗೃಹ ರಕ್ಷದ ದಳ, ಬಿಎಲïಡಿಇ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ತಂಡ ಮತ್ತು ಎನ್‌ಎನ್‌ಸಿ ಘಟಕಗಳಿಂದ (ಏರ್ ರೈಡ್) ಬಾಂಬ್ ಬ್ಲಾಸ್ಟ್ ಸಂದರ್ಭದಲ್ಲಿ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರದ ಬಿಎಲ್‌ಡಿಇ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಅಣುಕು ಕಾರ್ಯಕ್ರಮ ನಡೆಯಿತು.
ಬಾಂಬ್ ಬ್ಲಾಸ್ಟ್ ಸಮಯದಲ್ಲಿ ಕೈಗೊಳ್ಳಬೇಕಾದ ಪ್ರಾಥಮಿಕ ಉಪಚಾರಗಳ ಕುರಿತು ಅಣುಕು ಪ್ರದರ್ಶನದ ಮೂಲಕ ಒಳಗೆ ಸಿಲುಕೊಂಡಿರುವ ಸಾರ್ವಜನಿಕರನ್ನು ತುರ್ತಾಗಿ ರಕ್ಷಿಸಲು ಕ್ರಮ ವಹಿಸುವುದು. ಜತೆಗೆ ಕಪ್ಪು ಬಣ್ಣದ ಗುರುತು ಮರಣ ಹೊಂದಿದವರೆAದು ಗುರುತಿಸಲಾಗುವುದು. ಕೆಂಪು ತೀವ್ರತರವಾಗಿ ಗಾಯಗೊಂಡಿವರೆAದು, ಹಳದಿ ಬಣ್ಣ ಕಡಿಮೆ ಗಾಯಗೊಂಡವರೆAದು ಹಾಗೂ ಹಸಿರು ಬಣ್ಣ ಅಪಾಯದಿಂದ ಪಾರಾದವರೆಂದು ಪರಿಗಣಿಸುವಂತೆ ಅಣುಕು ಪ್ರದರ್ಶನದಲ್ಲಿ ಯಶಸ್ವಿಯಾಗಿ ನಡೆಸಿಕೊಡಲಾಯಿತು.
ಅಲ್ಲದೆ, ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಘಟನೆ ಸಂಭವಿಸಿದ ಸಂದರ್ಭದಲ್ಲಿ ಸಾರ್ವಜನಿಕರು ಕೂಡ ಮುನ್ನೆಚ್ಚರಿಕೆ ಕ್ರಮ ವಹಿಸಬಹುದಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಇಲಾಖೆ ಅಽಕಾರಿಗಳು ಅಣುಕು ಪ್ರದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸಿದರು.
ಜಿಲ್ಲಾ ಅಗ್ನಿ ಶಾಮಕ ಅಽಕಾರಿ ಶಶಿಧರ ನೀಲಗರ, ಅಗ್ನಿ ಶಾಮಕ ಠಾಣಾಽಕಾರಿ ಉಮೇಶ ತಳಕೇರಿ, ಸಹಾಯಕ ಅಗ್ನಿ ಶಾಮಕ ಠಾಣಾಽಕಾರಿ ಅಶೋಕ ಜಡ್ಡೆನ್ನವರ, ಅಶೋಕ ರಾಠೋಡ, ಗೃಹ ರಕ್ಷದ ಕಮಾಡೆಂಟ್ ಶಿವಾನಂದ ಶಿವೂರ, ಡೆಪ್ಯೂಟಿ ಕಮಾಡೆಂಟ್ ಮಹಾದೇವ ಪೂಜಾರ, ಬಿಎಲ್‌ಡಿಇ ಡೀಮ್ಡï ವಿವಿ ಡೀನ್ ತೇಜಸ್ವಿನಿ ವಲ್ಲಭ, ಉಪ ಪ್ರಾಚಾರ್ಯ ವಿಜಯಕುಮಾರ ಟಿ.ಕೆ., ಆನಂದ ಅಂಬಲಿ, ಎನ್.ಎಸ್. ಬೆಂತೂರ, ರವಿಕುಮಾರ ಬಿರಾದಾರ, ಐ.ಎಸ್. ಧಾರವಾಡಕರ, ಎಸ್.ಎಸ್. ಕಟ್ಟಿ, ವಿನೋದ ಜಾಧವ, ಶಾಂತೇಶ ಸಲಗರೆ, ಶಶಿಕಲಾ ತೇರದಾಳ, ಮಂಗಲಾ ಕೋಳಿ, ಜಯಂತಿ ಆರ್., ಚೇತನ ಜೋರಾಪುರ, ಸುಧಾರಕರ ಸಮಗೊಂಡ, ಪ್ರಕಾಶ ಜಕ್ಕೊಂಡಿ, ಅಶ್ವತಾ ಕೆ., ಮಲ್ಲಿಕಾರ್ಜುನ ಮೇತ್ರಿ, ವಿಶ್ವನಾಥ ಬಿರಾದಾರ, ಆನಂದ ಪಾಟೀಲ, ಏಕನಾಥ ಜಾಧವ, ರಾಕೇಶ ಜೈನಾಪುರ ಮತ್ತಿತರರಿದ್ದರು.