ಸಿಂದಗಿ ತಾಲೂಕಿನ ಆಹೇರಿ ಗ್ರಾಮದಲ್ಲಿ ಜಾತ್ರಾ ವಿಶೇಷವಾಗಿ 150ಕ್ಕೂ ಹೆಚ್ಚು ತಾಮ್ರದ ಹಂಡೆಗಳಲ್ಲಿ ಸಿದ್ಧ ಪಡೆಸಿದ ವಿಶೇಷ ಖಾದ್ಯ ಭಜ್ಜಿ ಪಲ್ಯೆ.
ಸಿಂದಗಿ: ತಾಲೂಕಿನ ಆಹೇರಿ ಗ್ರಾಮದಲ್ಲಿನ ಗುರು ಮಲ್ಲಯ್ಯ(ಶಿವ) ಹಾಗೂ ಶಿಷ್ಯ ಗಂಗಾಧರೇಶ್ವರರ ಬಾಂಧವ್ಯದ ಹಂಡೆ-ಭಜ್ಜಿ ಜಾತ್ರೆ ಬುಧವಾರ ಸಾವಿರಾರು ಭಕ್ತರ ಏಳು ಕೋಟಿ ಉಘೇಯಲ್ಲಿ ಮೊಳಗಿತು.
ಯಾವುದೇ ಜಾತಿ-ಧರ್ಮವಿಲ್ಲದೆ, ಗುರು-ಶಿಷ್ಯ ಪರಂಪರೆಯ ಅವಿನಾಭಾವ ಸಂಬAಧ ಸಾರುವ ಈ ಜಾತ್ರೆಯಲ್ಲಿನ ವಿಶೇಷ ನೂರಾರು ಹಂಡೆಗಳಲ್ಲಿ ಖಾದ್ಯ ಭಜ್ಜಿ ಜತೆಗೆ ಸಜ್ಜೆ ರೊಟ್ಟಿಯ ಸವಿಯಾಗಿದ್ದು, ಗ್ರಾಮದ ಸುತ್ತಮುತ್ತಲಿನ ಜನರು ಬಂದು ಭಜ್ಜಿ ಸವಿಯುವುದು ಇಲ್ಲಿನ ವಾಡಿಕೆಯಾಗಿದೆ.
ಈ ವರ್ಷವೂ 150ಕ್ಕೂ ಹೆಚ್ಚು ಹಂಡೆಗಳಲ್ಲಿ ಭಕ್ತರಿಗಾಗಿ ಸಿದ್ಧಪಡಿಸಿದ್ದ ಭಜ್ಜಿ ಪಲ್ಯ ಹಾಗೂ ಸಜ್ಜೆ ರೊಟ್ಟಿಯೊಂದಿಗೆ ಪ್ರಸಾದವಾಗಿ ಸಾವಿರಾರು ಜನರು ಬಾಯಿ ಚಪ್ಪರಿಸಿ, ಶ್ರೀ ಗುರು ಗಂಗಾಧರರ ಹಾಗೂ ಶ್ರೀ ಮಲ್ಲಯ್ಯ ದೇವರಿಗೆ ತಮ್ಮ ಭಕ್ತಿ ಸಮರ್ಪಿಸಿದರು.
ಬೆಳಗ್ಗೆ ಪಲ್ಲಕ್ಕಿಯೊಂದಿಗೆ ಮಲ್ಲಯ್ಯ ದೇವಸ್ಥಾನದಲ್ಲಿ ಅಗ್ನಿ ಪ್ರವೇಶ ನಡೆಯಿತು. ನಂತರ ಚರಗದ ಕಟ್ಟೆಯಲ್ಲಿ ಚರಗ ಚೆಲ್ಲುವ ಸಂಪ್ರದಾಯ, ಹೇಳಿಕೆ ಹೇಳುವ ಕಾರ್ಯ ನೆರವೇರಿತು.
ದೇವಸ್ಥಾನದ ಹಿಂದಿನ ಆವರಣದಲ್ಲಿ ಶಾಸಕ ಅಶೋಕ ಮನಗೂಳಿ ಭಜ್ಜಿ ಪ್ರಸಾದಕ್ಕೆ ಚಾಲನೆ ನೀಡಿದರು.
ಸೊನ್ನ ಗ್ರಾಮದ ವಿರಕ್ತಮಠದ ಸಿದ್ಧರಾಮ ಮಹಾಸ್ವಾಮಿಗಳು, ಆಸಂಗಿಹಾಳ ಆರೂಢ ಆಶ್ರಮದ ಶಂಕರಾನAದ ಮಹಾರಾಜರು, ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮದ ಭಕ್ತರು ಮತ್ತಿತರರಿದ್ದರು.