ಎಸ್.ಬಿ.ಪಾಟೀಲ ಗುಂದಗಿ 
ವಿಜಯಪುರ

ವಕೀಲ ಸಂಘಕ್ಕೆ ಪಾಟೀಲ ಅವಿರೋಧ ಆಯ್ಕೆ

ಸಿಂದಗಿ: ತಾಲೂಕು ವಕೀಲರ ಸಂಘದ ಕಾರ್ಯಾಲಯದಲ್ಲಿ ಸೋಮವಾರ ಜರುಗಿದ ಸಭೆಯಲ್ಲಿ ತಾಲೂಕು ವಕೀಲರ ಸಂಘಕ್ಕೆ 2026-2028ನೇ ಸಾಲಿನ ಅಧ್ಯಕ್ಷರಾಗಿ ಎಸ್.ಬಿ.ಪಾಟೀಲ ಗುಂದಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎ.ಜಿ. ಮಸರಕಲ್ ಉಪಾಧ್ಯಕ್ಷರಾಗಿ, ಸಿ.ಎಂ. ಸೂರ್ಯವಂಶಿ ಪ್ರಧಾನ ಕಾರ್ಯದರ್ಶಿಯಾಗಿ, ಪಿ.ಎಂ. ಬಡಿಗೇರ ಸಹ ಕಾರ್ಯದರ್ಶಿಯಾಗಿ, ಎ.ಎಸ್. ದಂಗಾಪುರ ಖಜಾಂಚಿಯಾಗಿ, ಎಸ್.ಎಂ. ಕಾಚೂರ ಮಹಿಳಾ ಪ್ರತಿನಿಽಯಾಗಿ ಆಯ್ಕೆಯಾಗಿದ್ದಾರೆ.
ಆರ್.ಎಂ. ಯಾಳಗಿ, ಎಸ್.ಎಸ್. ಬೊಮ್ಮನ ಜೋಗಿ, ಪಿ.ಸಿ. ಬಿರಾದಾರ, ಬಿ.ಎಸ್. ಚಾವರ, ಬಿ.ವೈ. ಧಾಳಿ ಸಲಹಾ ಸಮಿತಿ ಸದಸ್ಯರಾಗಿ ಅವಿರೋಧ ಆಯ್ಕೆ ಮಾಡಲಾಗಿದೆ.