ವಿಜಯಪುರದ ಆರ್‌ಕೆಎಂ ಪಿಯು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಶಂಭುಲಿAಗಯ್ಯ ಕರ್ಪೂರಮಠ, ಕಲ್ಮೇಶ ಅಸಂಗಿ, ಮೇಧಾ ಹಿರೇಮಠ ಮತ್ತಿತರರಿದ್ದಾರೆ.
ವಿಜಯಪುರ: ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ ಉದ್ಯೋಗ ನೆಪದಲ್ಲಿ ಪೋಷಕರನ್ನು ನಿರ್ಲಕ್ಷಿಸದೇ ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಆರ್‌ಕೆಎಂ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಂಭುಲಿAಗಯ್ಯ ಕರ್ಪೂರಮಠ ಹೇಳಿದರು.
ನಗರದ ಆರ್‌ಕೆಎಂ ಪಿಯು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಉದ್ಯೋಗದ ನೆಪದಲ್ಲಿ ಪೋಷಕರನ್ನು ನಿರ್ಲಕ್ಷಿಸಬಾರದು. ತಂದೆ ತಾಯಿಯ ಋಣ ಮತ್ತು ಅವರು ನಮಗಾಗಿ ಮಾಡಿದ ತ್ಯಾಗಗಳಿಗೆ ನಾವು ಎಂದಿಗೂ ಸಂಪೂರ್ಣ ಪ್ರತಿ-ಫಲ ನೀಡಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳುವ ಜತೆಗೆ ಇತರರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿ ಕಲ್ಮೇಶ ಆಸಂಗಿ ಅವರು ರಕ್ಷಣಾ ಸೇವೆಗಳಲ್ಲಿ ಲಭ್ಯವಿರುವ ವಿವಿಧ ವೃತ್ತಿ ಅವಕಾಶಗಳ ಕುರಿತು ಮಾಹಿತಿ ನೀಡಿ, ರಕ್ಷಣಾ ಸೇವೆಗಳ ಪ್ರವೇಶ ಮಾರ್ಗಗಳು, ಆಯ್ಕೆ ಪ್ರಕ್ರಿಯೆಗಳು ಹಾಗೂ ರಾಷ್ಟçಸೇವೆಯ ಮಹತ್ವವನ್ನು ವಿವರಿಸಿದರಲ್ಲದೆ, ಶಿಸ್ತು, ಸಮರ್ಪಣೆ ಮತ್ತು ದೇಶಭಕ್ತಿಯೊಂದಿಗೆ ರಾಷ್ಟç ಸೇವೆಗೆ ಮುಂದಾಗುವAತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪ್ರಾಚಾರ್ಯೆ ಮೇಧಾ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಪೃಥ್ವಿ, ಡಾ. ಎನ್.ಎಂ. ರುದ್ರಗೌಡರ, ಅಮಿತ ಎಚ್. ವೇದಿಕೆಯಲ್ಲಿದ್ದರು.
ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಭವಿಷ್ಯದ ವಿದ್ಯಾಭ್ಯಾಸ ಮತ್ತು ವೃತ್ತಿ ಜೀವನಕ್ಕೆ ಶುಭಾಶಯ ತಿಳಿಸುವ ಜತೆಗೆ ಆತ್ಮವಿಶ್ವಾಸ, ನಿಷ್ಠೆ ಮತ್ತು ಮೌಲ್ಯಗಳೊಂದಿಗೆ ಮುಂದುವರಿಯಲು ಪ್ರೋತ್ಸಾಹ ನೀಡಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.