ಬನಹಟ್ಟಿಯ ಜನತಾ ಶಿಕ್ಷಣ ಸಂಘದ ಸಂಸ್ಥಾಪಕ ತಮ್ಮಣ್ಣಪ್ಪ ಚಿಕ್ಕೋಡಿಯವರ 92ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಅವರ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ರಬಕವಿ-ಬನಹಟ್ಟಿ : ಬನಹಟ್ಟಿ ನಗರದ ಜನತಾ ಶಿಕ್ಷಣ ಸಂಘದ ಸಂಸ್ಥಾಪಕ ತಮ್ಮಣ್ಣಪ್ಪ ಚಿಕ್ಕೋಡಿಯವರ 92ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಭಾವಚಿತ್ರದ ಮೆರವಣಿಗೆ ಮತ್ತು ಪಲ್ಲಕ್ಕಿ ಉತ್ಸವ ಶನಿವಾರ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಬೆಳಗ್ಗೆ ಸಂಘದ ಆವರಣದಲ್ಲಿರುವ ಗದ್ದುಗೆಗೆ ಸಂಘದ ಕಾರ್ಯಾಧ್ಯಕ್ಷ ಬಸವಂತ ಜಾಡಗೌಡ ಮತ್ತು ಆಡಳಿತ ಮಂಡಳಿ ಸದಸ್ಯರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಅಲಂಕಾರಗೊAಡ ರಥದಲ್ಲಿ ತಮ್ಮಣ್ಣಪ್ಪ ಚಿಕ್ಕೋಡಿಯವರ ಬೃಹತ್ ಭಾವಚಿತ್ರ ಮತ್ತು ಅವರ ಪಲ್ಲಕ್ಕಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ನೇತೃತ್ವದಲ್ಲಿ ಜರುಗಿತು. ನಾವಲಗಿ ಜೈ ಹನುಮಾನ ಸಂಘದ ಸಂಬಾಳ ಮತ್ತು ಕರಡಿ ವಾದನದ ಕಲಾವಿದರು ಮೆರವಣಿಗೆಗೆ ಕಳೆ ತಂದರು.
ಸAಘದ ಗೌರವ ಕಾರ್ಯದರ್ಶಿ ರಾಜಶೇಖರ ಸೋರಗಾವಿ, ರಾಮಣ್ಣ ಭದ್ರನವರ, ಗಂಗಾಧರ ಕೊಕಟನೂರ, ಮಹಾದೇವಿ ಶ್ರೀಶೈಲ ಕೊಳಕಿ, ಸುರೇಶ ಕೋಲಾರ, ಬಸವರಾಜ ಕೊಣ್ಣೂರ, ಬಿ.ಆರ್. ಗೊಡ್ಡಾಳೆ, ಜಿ.ಆರ್. ಜುನ್ನಾಯ್ಕರ, ಬಸವರಾಜ ಪಟ್ಟಣ, ಎನ್.ಎಸ್. ಕಂಕಣಮೇಲಿ, ಬ್ರಿಜ್ಮೋಹನ ಚಿಂಡಕ, ಶಂಕರ ಅರಬಳ್ಳಿ, ವಿಶ್ವಜ ಕಾಡದೇವರ, ಬಿ.ನಾಗರಾಜ, ಪ್ರಕಾಶ ಕೆಂಗನಾಳ ಇದ್ದರು.