ಇಂಡಿ ಪಟ್ಟಣದಲ್ಲಿ ಕಂದಾಯ ಉಪ ವಿಭಾಗಽಕಾರಿ ಚಿದಾನಂದ ಗುರುಸ್ವಾಮಿ ಕೃಷ್ಣಾ ಮುಖ್ಯ ಕಾಲುವೆಯಲ್ಲಿ ಹರಿಯುತ್ತಿರುವ ನೀರನ್ನು ವೀಕ್ಷಿಸಲು ಭೇಟಿ ನೀಡಿದರು. ಇಒ ಭೀಮಾಶಂಕರ ಕನ್ನೂರ, ಹೆಸ್ಕಾಂ ಎಇಇ ಎಸ್.ಆರ್. ಮೆಂಡೆಗಾರ, ಕೆಬಿಜೆಎನ್‌ಎಲ್ ಬೀರಪ್ಪ ಪೂಜಾರಿ ಮತ್ತಿತರರಿದ್ದರು.
ಇಂಡಿ: ತಾಲೂಕಿನಲ್ಲಿ ಹರಿಯುವ ಕೃಷ್ಣಾ ಮುಖ್ಯ ಕಾಲುವೆಗೆ ಒಂದು ಟಿಎಂಸಿ ನೀರು ಹರಿಬಿಡಲಾಗಿದೆ ಎಂದು ಕಂದಾಯ ಉಪ ವಿಭಾಗಽಕಾರಿ ಚಿದಾನಂದ ಗುರುಸ್ವಾಮಿ ತಿಳಿಸಿದರು.
ಬುಧವಾರ ಕೃಷ್ಣಾ ಕಾಲುವೆಗೆ ಭೇಟಿ ನೀಡಿ ಸಾಲೋಟಗಿಯಿಂದ ಮಾವಿನಹಳ್ಳಿಯವರೆಗೆ ಕಾಲುವೆ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕಲಬುರಗಿ, ಬೆಳಗಾವಿ ವಿಭಾಗಿಯ ಆಯುಕ್ತರ ಕೋರಿಯ ಮೇರೆಗೆ ನಾರಾಯಣ ಜಲಾಶಯದಿಂದ ಒಂದು ಟಿ.ಎಂ.ಸಿ ನೀರನ್ನು ಹರಿಸಲಾಗಿದೆ ಎಂದು ತಿಳಿಸಿದರು.
ಕೆಬಿಜೆಎನ್‌ಎಲ್ ಅರಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ, ಶಾಸಕ ಯಶವಂತರಾಯಗೌಡ ಪಾಟೀಲ, ಶಾಸಕ ವಿಠ್ಠಲ ಕಟಕಧೋಂಡ ಅವರ ಪ್ರಯತ್ನದಿಂದ ನೀರು ಹರಿಬಿಡಲಾಗಿದೆ. ನೀರು ಈಗಾಗಲೇ ಏ. 11ರಿಂದ ಕೃಷ್ಣಾ ಕಾಲುವೆಯಲ್ಲಿ ಹರಿಯುತ್ತಿದ್ದು ಒಂದು ಟಿಎಂಸಿ ಹೆಚ್ಚುವರಿ ನೀರಿನಿಂದ ಏ. 23ರವರೆಗೆ ನೀರು ಕಾಲುವೆಯಲ್ಲಿ ಹರಿಯುತ್ತದೆ ಮತ್ತು ಈ ನೀರು ಕೇವಲ ಕುಡಿಯಲು ಮತ್ತು ಜನ ಜಾನುವಾರುಗಳು ಮಾತ್ರ ಉಪಯೋಗಿಸಲು ತಿಳಿಸಿದರು.
ಇಒ ಭೀಮಾಶಂಕರ ಕನ್ನೂರ, ಹೆಸ್ಕಾಂ ಎಇಇ ಎಸ್.ಆರ್. ಮೆಂಡೆಗಾರ, ಕೆಬಿಜೆಎನ್‌ಎಲ್ ಬೀರಪ್ಪ ಪೂಜಾರಿ ಮತ್ತಿತರರಿದ್ದರು.