ವಿಜಯಪುರದ ವಿ.ಪಿ. ಡಾ. ಪಿ.ಜಿ. ಹಳಕಟ್ಟಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಮಹಾವಿದ್ಯಾಯದಲ್ಲಿ ಐಟಿ ಕೌಶಲಗಳ ರಾಜ್ಯಮಟ್ಟದ ಕಾರ್ಯಾಗಾರ ನಡೆಯಿತು. ಮಂಜುನಾಥ ಪಿ., ಅನೀಲ ಕನ್ನೂರ, ದಾನೇಶ್ವರಿ ನೂಲಾ ಮತ್ತಿತರರಿದ್ದರು. 
ವಿಜಯಪುರ

ಬೋಧಕೇತರ ಸಿಬ್ಬಂದಿಗೆ ಐಟಿ ಜ್ಞಾನ ಅಗತ್ಯ

ಮಾರುತಿ ತಳ್ಳಳ್ಳಿ

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯ ಮಂಜುನಾಥ ಪಿ. ಅಭಿಮತ
  • ಕೌಶಲಗಳ ಐದು ದಿನದ ಕಾರ್ಯಾಗಾರ ಆಯೋಜನೆ
ವಿಜಯಪುರ : ನಗರದ ಬಿಎಲ್‌ಡಿಇ ಸಂಸ್ಥೆಯ ವಿ.ಪಿ. ಡಾ. ಪಿ.ಜಿ. ಹಳಕಟ್ಟಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದಲ್ಲಿ ಐದು ದಿನಗಳ ಕಾಲ ಹಮ್ಮಿಕೊಂಡಿರುವ ಮೂಲ ಐಟಿ ಕೌಶಲಗಳ ಕುರಿತು ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟನೆ ಮಂಗಳವಾರ ನೆರವೇರಿತು.
ಇನ್ಸಿಟ್ಯೂಟ್ ಐಟಿ ಸೆಲ್, ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್, ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಸಂಯುಕ್ತಾಶ್ರಯದಲ್ಲಿ ಬೋಧಕೇತರ ಸಿಬ್ಬಂದಿ ಸದಸ್ಯರಿಗೆ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಾಚಾರ್ಯ ಮಂಜುನಾಥ ಪಿ. ಮಾತನಾಡಿ, ಕಾರ್ಯಾಗಾರವು ಬೋಧಕೇತರ ಸಿಬ್ಬಂದಿಗೆ ಅಗತ್ಯವಾದ ಐಟಿ ಜ್ಞಾನ ಒದಗಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಕಂಪ್ಯೂಟರ್ ಹಾರ್ಡ್ವೇರ್, ಸಾಫ್ಟ್‌ವೇರ್ ಸ್ಥಾಪನೆಗಳು, ಮೂಲ ಪದ ಸಂಸ್ಕರಣಾ ಪರಿಕರಗಳು- ಎಂಎಸ್ ವರ್ಡ್, ಎಕ್ಸೆಲ್ ಮತ್ತು ಪವರ್ ಪಾಯಿಂಟ್, ಗೂಗಲ್ ಪರಿಕರಗಳು, ಕೃತಿ ಚೌರ್ಯ ಪರಿಶೀಲನಾ ಪರಿಕರಗಳು, ಎಐ ಪರಿಕರಗಳು ಮತ್ತು ಪ್ರೋಗ್ರಾಮಿಂಗ್ ವಿಚಾರಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಮಾಹಿತಿ ಒದಗಿಸಲಿದೆ.
ವಿವಿಧ ಸಂಸ್ಥೆಗಳಿಂದ ಸಂಬಂದಿತ ಕ್ಷೇತ್ರದ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ.
ವಿಭಾಗದ ಮುಖ್ಯಸ್ಥ ಡಾ. ಅನೀಲ ಕನ್ನೂರ, ದಾನೇಶ್ವರಿ ನೂಲಾ, ಮಹಾವಿದ್ಯಾಲಯದ ಐಟಿ ಮುಖ್ಯಸ್ಥ ಸಂಜೀವ ಚಡಚಣ, ಆನಂದ ಹಿರೇಮಠ, ದಯಾನಂದ ಮೇಟಿ ಮತ್ತಿತರರಿದ್ದರು.
ಭಾಗ್ಯಶ್ರೀ ಪಾಟೀಲ ನಿರೂಪಿಸಿದರು. ಆನಂದ ಹಿರೇಮಠ ವಂದಿಸಿದರು.