ಬಾಗಲಕೋಟೆಯಲ್ಲಿ ಬಿವಿವಿ ಸಂಘದಿಂದ ಉದ್ಘಾಟನೆಯಾಗಲಿರುವ ರಾಷ್ಟಿçÃಯ ರೆಫರನ್ಸ್ ಸಿಮ್ಯುಲೇಶನ್ ಸೆಂಟರ್ ಮತ್ತು ರಾಷ್ಟಿçÃಯ ಮೌಲ್ಯಮಾಪನ ಮತ್ತು ಪ್ರಮಾಣಿಕರಣ ಕೇಂದ್ರವನ್ನು ಗುರುವಾರ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ವೀಕ್ಷಿಸಿದರು. ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಇದ್ದರು. 
ವಿಜಯಪುರ

ರಾಷ್ಟ್ರೀಯ ರೆಫರನ್ಸ್ ಸಿಮ್ಯುಲೇಶನ್ ಕೇಂದ್ರ ಉದ್ಘಾಟನೆ

ಬಾಗಲಕೋಟೆ : ರಾಷ್ಟ್ರೀಯ ರೆಫರನ್ಸ್ ಸಿಮ್ಯುಲೇಶನ್ ಕೇಂದ್ರ ಮತ್ತು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಪ್ರಮಾಣೀಕರಣ ಕೇಂದ್ರದ ಉದ್ಘಾಟನೆ ಇಂದು ನಡೆಯಲಿದೆ. ಜೊತೆಗೆ ಇಂದಿನಿಂದ ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಸಮ್ಮೇಳನ ಜರುಗಲಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ತಿಳಿಸಿದರು.
ಬಿವಿವಿ ಸಂಘದ ಫಿಜಿಯೋಥೆರಪಿ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ಬೆಳಗ್ಗೆ ೯-೩೦ ಗಂಟೆಗೆ ಕೇಂದ್ರದ ಉದ್ಘಾಟನೆ ನಡೆಯಲಿದೆ. ಬಳಿಕ ಎಸ್. ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಶತಾಬ್ಧಿ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟನೆಯಾಗಲಿದೆ.
ನವದೆಹಲಿಯ ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಅಧ್ಯಕ್ಷ ಡಾ. ಟಿ. ದಿಲೀಪಕುಮಾರ ಅವರು ರಾಷ್ಟ್ರೀಯ ಸಿಮ್ಯುಲೇಶನ್ ಸೆಂಟರ್ ಹಾಗೂ ಸಮ್ಮೇಳನ ಉದ್ಘಾಟಿಸಲಿರುವರು. ರಾಜೀವ್‌ಗಾಂಽ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಭಗವಾನ ಬಿ.ಸಿ., ನವ ದೆಹಲಿಯ ಜೆಪ್ಯಾಗೊ ಡೆಪ್ಯೂಟಿಕಂಟ್ರಿ ಡೈರೆಕ್ಟರ್ ಡಾ. ಕಮಲೇಶ ಲಾಲಚಂದಾನಿ, ಲ್ಯಾರ್ಡಲ್ ಮೆಡಿಕಲ್ ಲಿ. ಮ್ಯಾನೇಜಿಂಗ್ ಡೈರಕ್ಟರ್ ಸಂಜಯ ಸಿಂಗ್ ಪಾಲ್ಗೊಳ್ಳಲಿದ್ದಾರೆ. ಡಿ. ೫ ರಿಂದ ೭ ರವರೆಗೆ ಮೂರು ದಿನಗಳ ಕಾಲ ಈ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದರು.
ನರ್ಸಿಂಗ್ ವಿಜ್ಞಾನದ ತಜ್ಞರಾದ ಇಂಗ್ಲೆಂಡ್‌ನ ಕ್ಯಾರಿ ಹ್ಯಾಮಿಲ್ಟನ್‌ನ, ಸಿಂಗಾಪುರದ ಲೌರಾ ಥಾಮ್, ಆಸ್ಟ್ರೇಲಿಯಾ ಜೇಮ್ಸ್ ನೈಸ್ಮಿಥ್ ಹೆಡ್ ಹೆಲ್ತ್ ಕೇರ್ ಹಾಗೂ ಅಲ್ವಿನ್ ಟಾಂಗ್ ಇವರು ಸಮ್ಮೇಳನದಲ್ಲಿ ವಿಶೇಷ ಉಪನ್ಯಾಸ ಮತ್ತು ಶಿಬಿರಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ಸಮ್ಮೇಳನದಲ್ಲಿ ತರಬೇತಿ ಪಡೆಯಲು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ೧೦೦೦ಕ್ಕೂ ಹೆಚ್ಚು ನರ್ಸಿಂಗ್ ವೃತ್ತಿಪರರು ಆಗಮಿಸಲಿದ್ದಾರೆ. ಶಿಬಿರಾರ್ಥಿಗಳು ಮತ್ತು ಸಂಪನ್ಮೂಲ ಪರಿಣಿತರ ನಡುವೆ ಚರ್ಚೆ ಹಾಗೂ ಸಂವಾದಗಳು ನಡೆಯಲಿವೆ ಎಂದು ಹೇಳಿದರು.
ಆರೋಗ್ಯ ವ್ಯವಸ್ಥೆಯಲ್ಲಿ ೩೦.೫ರಷ್ಟು ಪ್ರತಿಶತದಷ್ಟಿರುವ ನರ್ಸಿಂಗ್ ಸಿಬ್ಬಂದಿ ಭಾರತದ ಆರೋಗ್ಯ ರಕ್ಷಣಾ ವ್ಯವಸ್ಥೆಯ ಆಧಾರಸ್ಥಂಭವಾಗಿದ್ದಾರೆ. ಕರೊನಾ ನಂತರ ಜಾಗತಿಕ ಮಟ್ಟದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ತರಬೇತಿ ಹೊಂದಿದ ನರ್ಸಿಂಗ್ ಸಿಬ್ಬಂದಿ ಬೇಡಿಕೆ ಹೆಚ್ಚುತ್ತಿದೆ ಎಂದು ತಿಳಿಸಿದರು.
ಬಿವಿವಿ ಸಂಘದಿAದ ೧೯೯೮ರಲ್ಲಿ ಸಜ್ಜಲಶ್ರೀ ನರ್ಸಿಂಗ್ ಕಾಲೇಜನ್ನು ಸ್ಥಾಪಿಸಲಾಗಿದೆ. ಬಳಿಕ ಬಿವಿವಿಎಸ್ ನರ್ಸಿಂಗ್ ಕಾಲೇಜ್ ಮತ್ತು ಶಾರದಾಂಬಾ ನರ್ಸಿಂಗ್ ಕಾಲೇಜ್ ಆರಂಭಿಸಲಾಗಿದೆ. ಒಟ್ಟು ೨೦೦೦ ವಿದ್ಯಾರ್ಥಿಗಳು ನರ್ಸಿಂಗ್ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.
ಬಿವಿವಿ ಸಂಘದ ಸಜ್ಜಲಶ್ರೀ ನರ್ಸಿಂಗ್ ಕಾಲೇಜಿನ ಅಡಿಯಲ್ಲಿ ಭಾರತೀಯ ನರ್ಸಿಂಗ್ ಪರಿಷತ್ತಿನಿಂದ ಮಾನ್ಯತೆಪಡೆದ ಭಾರತದ ಎರಡನೇ ರಾಷ್ಟ್ರೀಯ ರೆಫರನ್ಸ್ ಸಿಮ್ಯುಲೇಶನ್ ಸೆಂಟರ್ ಜೊತೆಗೆ ಭಾರತೀಯ ನರ್ಸಿಂಗ್ ಪರಿಷತ್ತು ಇವರ ಮಾನ್ಯತೆ ಹಾಗೂ ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯಾದ ಜೆಪ್ಯಾಗೊ ಇವರ ತಾಂತ್ರಿಕ ಸಹಾಯದೊಂದಿಗೆ ಭಾರತದಲ್ಲಿಯೇ ಪ್ರಥಮವಾದ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಪ್ರಮಾಣಿಕರಣ ಕೇಂದ್ರವನ್ನು ಕೂಡ ಸ್ಥಾಪಿಸಲಾಗಿದೆ. ೧೬ ಕೋಟಿ ರೂ. ವೆಚ್ಚದಲ್ಲಿ ೨೨ ಸಾವಿರ ಚದುರಡಿ ವಿಸ್ತೀರ್ಣದಲ್ಲಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದು ನರ್ಸಿಂಗ್ ತರಬೇತಿಗೆ ಸಂಬಂದಿಸಿದಂತೆ ಭಾರತದಲ್ಲಿ ಎರಡನೇ ರಾಷ್ಟ್ರೀಯ ರೆಫರನ್ಸ್ ಸಿಮ್ಯೂಲೇಶನ್ ಸೆಂಟರ್ ಎನ್ನುವುದು ಗಮನಾರ್ಹ.
ಸುದ್ದಿಗೋಷ್ಠಿಯಲ್ಲಿ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಪ್ರಾಚಾರ್ಯ ದಿಲೀಪ್ ನಾಟೆಕರ ಉಪಸ್ಥಿತರಿದ್ದರು.