8ರಂದು ರಾಷ್ಟ್ರೀಯ ಮಟ್ಟದ ತಾಂತ್ರಿಕ ಉತ್ಸವ
ವಿಜಯಪುರ: ನಗರದ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಪಿ.ಜಿ. ಹಳಕಟ್ಟಿ ಇಂಜಿನಿಯರಿAಗ್ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದಲ್ಲಿ ಮೇ 8ರಂದು ಇನ್ವಿಕ್ಟಸ್-2026 ಎಂಬ ರಾಷ್ಟಿçÃಯ ಮಟ್ಟದ ತಾಂತ್ರಿಕ ಉತ್ಸವ ನಡೆಯಲಿದೆ.
ಅಂದು ಬೆಳಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದ್ದು, ಕಾಲೇಜಿನ ಉನ್ನತ ಸ್ಥಾನದಲ್ಲಿರುವ ಹಳೆಯ ವಿದ್ಯಾರ್ಥಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಬಾರ್‌ಕೋಡ್ ನೆಟ್‌ವರ್ಕ್ಸ್ನ ವ್ಯವಸ್ಥಾಪಕ ನಿರ್ದೇಶಕ ರೋಹಿತ ಆರಾಧ್ಯ, ರಾಜ್ಯ ಸರ್ಕಾರದ ಎಡಿಎಲ್‌ಆರ್‌ನ ಪುನೀತ ಪಸೋಡೆ, ಟಿಸಿಎಸ್‌ನ ತಂಡದ ಮುಖ್ಯ ಇಂಜಿನಿಯರ್ ವಸುಂಧರಾ ಉಪಾಧ್ಯೆ ಉಪಸ್ಥಿತಿ ಹಾಗೂ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಮಂಜುನಾಥ ಪಿ., ಉಪ ಪ್ರಾಚಾರ್ಯೆ ಲೀನಾ ರಾಘ, ಪಿ.ವಿ. ಮಾಳಜಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.