ಸುರೇಶ ಚ.ಶೆಡಶ್ಯಾಳ, ಜಿಲ್ಲಾಧ್ಯಕ್ಷ  
ವಿಜಯಪುರ

ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳರಿಂದ ಮಹತ್ವದ ಮಾಹಿತಿ

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ರಾಜ್ಯ ಸಂಘಟನೆ ನೇತೃತ್ವ
  • ಜಿಲ್ಲಾ ಸಂಘದ ಸಹಯೋಗ
  • ರಾಣಿ ಚನ್ನಮ್ಮ ಭವನದಲ್ಲಿ ಕಾರ್ಯಕ್ರಮ
ವಿಜಯಪುರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಜು. 25 ರಂದು 2026ನೇ ಸಾಲಿನ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಸುರೇಶ ಚ. ಶೇಡಶ್ಯಾಳ ತಿಳಿಸಿದ್ದಾರೆ.
ಅಂದು ಮಧ್ಯಾಹ್ನ 2ಕ್ಕೆ ನಗರದ ಆಶ್ರಮ ರಸ್ತೆಯಲಿರುವ ಕಿತ್ತೂರ ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಈ ಸಮಾರಂಭ ನಡೆಯಲಿದ್ದು, ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳ ರಾಜ್ಯ ಸರ್ಕಾರಿ ನೌಕರರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮಕ್ಕಳಿಗೆ ಪುರಸ್ಕಾರ ನೆರವೇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಷಣ್ಮುಖಾರೂಢ ಮಠದ ಪರಮಪೂಜ್ಯ ಅಭಿನವ ಸಿದ್ಧಾರೂಢ ಮಹಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸುವರು. ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅಧ್ಯಕ್ಷತೆ ವಹಿಸುವರು. ಖ್ಯಾತ ವಾಗ್ಮಿ ಚಟ್ನಳ್ಳಿ ಮಹೇಶ ಮಕ್ಕಳಿಗೆ ಪ್ರೇರಣಾ ನುಡಿಗಳನ್ನಾಡಲಿದ್ದಾರೆ. ಜಿಲ್ಲಾಧಿಕಾರಿ ಡಾ. ಆನಂದ ಕೆ, ಸಿಇಒ ರಿಷಿ ಆನಂದ, ಎಸ್‌ಪಿ ಲಕ್ಷ್ಮಣ ನಿಂಬರಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅತಿಥಿಗಳಾಗಿ ರಾಜ್ಯ ಪದಾಧಿಕಾರಿಗಳಾದ ಎಸ್. ಬಸವರಾಜು, ವಿ.ವಿ. ಶಿವರುದ್ರಯ್ಯ, ಶಂಬುಗೌಡ ಎಸ್, ನಾಗರಾಜ ಜುಮ್ಮನ್ನವರ, ಆರ್. ಮೋಹನ ಕುಮಾರ, ಸೋಮಶೇಖರಯ್ಯ, ಮಲ್ಲಿಕಾರ್ಜುನ ಬಳ್ಳಾರಿ, ಸಂಜೀವ ವಿ. ಸತ್ಯರೆಡ್ಡಿ, ಶಿವಾನಂದ ಮಂಗಾನವರ, ವಿಜಯಕುಮಾರ ಹತ್ತಿ, ಜಿಲ್ಲಾ ಪದಾಧಿಕಾರಿಗಳಾದ ಶಿವರಾಜ ಬಿರಾದಾರ, ಸೈಯದ್ ಜುಬೇರ್ ಎಸ್. ಕೆರೂರ, ಬಿ.ಟಿ. ಗೊಂಗಡಿ, ವಿಶ್ವನಾಥ ಬೆಳ್ಳೆನ್ನವರ, ವಿಠ್ಠಲ ವಾಲಿಕಾರ, ಗೋಪಾಲ ನೀಲಾನಾಯಕ, ಬಿ.ಪಿ. ಅಜ್ಜನವರ, ಸುರೇಶ ಎಚ್. ಇಂಚಗೇರಿ ಭಾಗವಹಿಸುವರೆಂದು ಸುರೇಶ ಶೆಡಶ್ಯಾಳ ತಿಳಿಸಿದ್ದಾರೆ.
ಶೇ. 90 ರಷ್ಟು ಅಂಕ ಪಡೆದು ಉತ್ತಿರ್ಣರಾಗಿರುವ ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಯ 356 ಮಕ್ಕಳು ಹಾಗೂ ಪಿಯುಸಿಯ 361 ಮಕ್ಕಳು ಹೀಗೆ ಒಟ್ಟು 717 ಮಕ್ಕಳು ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಈ ಮಕ್ಕಳಿಗೆ ನೆನಪಿನ ಕಾಣಿಕೆ, ಬ್ಯಾಗ್ ಹಾಗೂ ಗೌರವಧನದೊಂದಿಗೆ ಸತ್ಕರಿಸಲಾಗುವುದು. ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾದ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮಧ್ಯಾಹ್ನ 12.30 ಕ್ಕೆ ಆಗಮಿಸಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧ್ಯಕ್ಷ ಸುರೇಶ ಚ. ಶೇಡಶ್ಯಾಳ ಪತ್ರಿಕೆ ಪ್ರಟಣೆಯಲ್ಲಿ ತಿಳಿಸಿದ್ದಾರೆ.