ವಿಜಯಪುರ: ಮೇದಾರ ಕೇತಯ್ಯ ಕಲ್ಯಾಣದಲ್ಲಿ ಒಬ್ಬ ಮಹಾನ್ ಶರಣನಾಗಿದ್ದುಕೊಂಡು ತಾನು ಮಾಡುವ ಕಾಯಕದಿಂದಲೇ ಭಗವಂತನನ್ನು ಒಲಿಸಿಕೊಂಡವನು ಎಂದು ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಮಾಧವ ಗುಡಿ ಹೇಳಿದರು.
ನಗರದ ಡಾ. -À.ಗು. ಹಳಕಟ್ಟಿ ಸಂಶೋಧನ ಕೇಂದ್ರದ ಹಾಗೂ ಚಿಂತನ ಸಾಂಸ್ಕೃತಿಕ ಬಳಗದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ 20ನೇ ಅನುಭಾವಿಗಳ ಮರುಭೇಟಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಬಸವಣ್ಣನವರ ಆದರ್ಶಗಳನ್ನು ಮೆಚ್ಚಿ ಶರಣ ಕೇತಯ್ಯನವರ ಹೆಂಡತಿ ಸಾತವ್ವೆಯೊಂದಿಗೆ ಕಲ್ಯಾಣಕ್ಕೆ ಬಂದು ಕಾಯಕ ನಿಷ್ಠೆಯ ಮೂಲಕ ಬಿದಿರು ಕಡಿದುಕೊಂಡು ಅದರಿಂದ ವಿವಿಧ ವಸ್ತುಗಳನ್ನ ತಯಾರಿಸಿ, ಕಲ್ಯಾಣದ ರಾಜಬೀದಿಯಲ್ಲಿ ಮಾರಿಕೊಂಡು ಬಂದು ಆ ಹಣದಿಂದಲೇ ಪ್ರಸಾದ ಮಾಡಿ ಜಂಗಮ ಸೇವೆ ಮಾಡುತ್ತಿದ್ದ ಶರಣ ದಂಪತಿ ಆದರ್ಶ ಬದುಕು ನಮಗೆಲ್ಲ ಮಾದರಿ ಎಂದರು.
ಕೇತಯ್ಯನವರು ಶರಣ ಗವರೇಶ್ವರ ಎಂಬ ಅಂಕಿತನಾಮದಡಿ ಸುಮಾರು 11 ರಿಂದ 18 ವಚನಗಳನ್ನು ರಚಿಸಿದ್ದಾನೆ. ಬಸವತತ್ವ ರತ್ನಾಕರದಲ್ಲಿ ಬರುವ ಪವಾಡದ ಕಥೆ, ಕರುಣೆ, ದಯೆ, ದಾನ, ಧರ್ಮಗಳಲ್ಲಿ ಕೇತಯ್ಯನದು ಎತ್ತಿದ ಕೈ. ಅಷ್ಟಾವರಣ, ಕಾಯಕ ತತ್ವ, ಏಕದೇವೋಪಾಸನೆ, ಭಕ್ತಿ, ದಾಸೋಹ ಇವುಗಳಿಗೆ ಪ್ರಾಧಾನ್ಯತೆ ನೀಡಿದ ಲೋಕಾನುಭವ, ಶಿವಾನುಭವಗಳನ್ನು ಅನೇಕ ವಚನಗಳನ್ನು ಮೂಲಕ ವಿಶ್ಲೇಷಿಸಿದರು.
ಎಂ.ಎಸ್. ಮದಭಾವಿ, ಸೋಮಶೇಖರ ವಾಲಿ, ಸುಭಾಸ ಯಾದವಾಡ, ಅರವಿಂದ ಕಂಚ್ಯಾಣಿ, ಎಂ.ಎಸ್. ಝಳಕಿ, ಎಸ್.ಎನ್. ಶಿವಣಗಿ, ಅಂಬಾದಾಸ ಜೋಶಿ, ವಿ.ಎಸ್. ತೇಲಿ, ಆರ್.ಜಿ. ಬ್ಯಾಕೋಡ, ಪ್ರಭಾವತಿ ದೇಸಾಯಿ, ಎಸ್.ಎಂ. ಶೇಖ, ಎನ್.ಆರ್. ಕುಲಕರ್ಣಿ, ಸವಿತಾ ಕಟ್ಟಿ, ಬಿ.ಟಿ. ಈಶ್ವರಗೊಂಡ, ಎಸ್.ಬಿ. ದೊಡಮನಿ, ಜಿ.ಬಿ. ಸಾಲಕ್ಕಿ, ವಿ.ಎಸ್. ಖಾಡೆ, ಸವಿತಾ ಕಟ್ಟಿ, ನಾಗಮ್ಮ ಚೋಳಕೆ, ಎಂ.ಎಸ್. ಚಾಂದಕವಟೆ, ಸಿ.ಎಂ. ಭಂಡಗರ, ಅಂಜುA ಖಾದ್ರಿ ಮತ್ತಿತರರಿದ್ದಾರೆ.
ಬಿ. ಎಂ. ಪಾಟೀಲ ಪ್ರಾರ್ಥಿಸಿದರು, ವಿ.ಡಿ. ಐಹೊಳ್ಳಿ ಸ್ವಾಗತಿಸಿ, ಪರಿಚಯಿಸಿದರು. ಸುಭಾಸ ಕನ್ನೂರ ನಿರೂಪಿಸಿದರು. ಅಮರೇಶ ಸಾಲಕ್ಕಿ ವಂದಿಸಿದರು.