ಮುದ್ದೇಬಿಹಾಳ ಪಟ್ಟಣದ ವಿಬಿಸಿ ಹೈಸ್ಕೂಲ್‌ ಮೈದಾನದಲ್ಲಿ ಎಂಬಿಎಲ್‌ ಗ್ರೂಪ್ ಹಮ್ಮಿಕೊಂಡಿದ್ದ ಕ್ರಿಕೆಟ್ ಟೂರ್ನ್ಮೆಂಟ್‌ನ ಫೈನಲ್‌ ಪಂದ್ಯದಲ್ಲಿ ವಿಜೇತ ಬೂದಿಹಾಳ ತಂಡಕ್ಕೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು. ಸಿ.ಬಿ. ಅಸ್ಕಿ, ಕಾಮರಾಜ ಬಿರಾದಾರ, ಹುಸೇನ್ ಮುಲ್ಲಾ ಇತರರಿದ್ದರು. 
ವಿಜಯಪುರ

ಕ್ರೀಡಾಪಟುಗಳು ಉನ್ನತ ಸ್ಥಾನಕ್ಕೆ ಬೆಳೆಯಲಿ

ಮುದ್ದೇಬಿಹಾಳ: ಕ್ರೀಡೆಗಳನ್ನು ಕ್ರೀಡಾಪಟುಗಳು ಪರಸ್ಪರ ಸಹಕಾರ ಹಾಗೂ ಸೌಹಾರ್ಧತೆಯಿಂಲ ದ ಆಡಬೇಕು. ಕ್ರೀಡಾಪಟುಗಳು ಕೇವಲ ಸ್ಥಳೀಯ ಮಟ್ಟಕ್ಕೆ ಸೀಮಿತವಾಗದೆ ರಾಜ್ಯ ಮತ್ತು ರಾಷ್ಟ್ರ
ಮಟ್ಟದ ಎತ್ತರಕ್ಕೆ ಬೆಳೆದು ತಾಲೂಕಿಗೆ ಕೀರ್ತಿ ತರಲಿ ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ. ಅಸ್ಕಿ ಹೇಳಿದರು.
ಪಟ್ಟಣದ ವಿಬಿಸಿ ಹೈಸ್ಕೂಲ್‌ ಮೈದಾನದಲ್ಲಿ ಸೋಮವಾರ ಎಂಬಿಎಲ್‌ ಗ್ರೂಪ್ ವತಿಯಿಂದ ಹಮ್ಮಿಕೊಂಡಿದ್ದ ಹಾರ್ಡ್ ಟೆನ್ನಿಸ್ ಬಾಲ್‌ ಕ್ರಿಕೆಟ್ ಟೂರ್ನ್ಮೆಂಟ್‌ನ ಫೈನಲ್‌ ಪಂದ್ಯಾವಳಿಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಯುವಕರ ದೈಹಿಕ ಸಾಮರ್ಥ್ಯ ಸದೃಢವಾಗಿರಬೇಕು ಮತ್ತು ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬ ಸದುದ್ದೇಶದಿಂದ ಇಂತಹ ಕ್ರೀಡಾಕೂಟಗಳಿಗೆ ಧನ ಸಹಾಯ ಹಾಗೂ ಪ್ರಾಯೋಜಕತ್ವ ನೀಡಲಾಗುತ್ತದೆ ಎಂದರು.
ಕಾಮರಾಜ ಬಿರಾದಾರ ಮಾತನಾಡಿ, ಕಳೆದ ೨೦ ದಿನಗಳಿಂದ ನಿರಂತರವಾಗಿ ನಡೆದ ಈ ಕ್ರಿಕೆಟ್‌ ಪಂದ್ಯಾವಳಿಗೆ ಸ್ಥಳೀಯ ಕ್ರೀಡಾ ಅಭಿಮಾನಿಗಳು ಅತ್ಯುತ್ತಮ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ರಂಜಾನ್ ನದಾಫ್‌, ಪುರಸಭೆ ಮಾಜಿ ಅಧ್ಯಕ್ಷ ಮಹಿಬೂಬು ಗೊಳಸಂಗಿ, ಯಲ್ಲಪ್ಪ ಮ್ಯಾಗೇರಿ, ಸಂಗಣ್ಣ ಮೇಲಿನಮನಿ ಇತರರಿದ್ದರು.