ವಿಜಯಪುರದ ಖೇಡ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಲೈಂಗಿಕ ದೌರ್ಜನ್ಯ ತಡೆ ಗಟ್ಟುವಲ್ಲಿ ಸಮಾಜದ ಪಾತ್ರ ಕುರಿತು ವಿಶೇಷ ಉಪನ್ಯಾಸದಲ್ಲಿ ರಾಘು ಅಣ್ಣಿಗೇರಿ ಮಾತನಾಡಿದರು. ವಿಜಯಲಕ್ಷಿ÷್ಮÃ ಹಿಪ್ಪರಗಿ, ವಿನೋದ ಖೇಡ ಮತ್ತಿತರರಿದ್ದಾರೆ. 
ವಿಜಯಪುರ

ವಿದ್ಯಾರ್ಥಿಗಳು ಸಹೋದರತ್ವ ಭಾವನೆ ಬೆಳೆಸಿಕೊಳ್ಳಲಿ

ವಿಜಯಪುರ : ನಗರದ ಖೇಡ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಮತ್ತು ಲೈಂಗಿಕ ದೌರ್ಜನ್ಯ ನಿವಾರಣಾ ಘಟಕದಡಿ ಇತ್ತೀಚೆಗೆ ಲೈಂಗಿಕ ದೌರ್ಜನ್ಯ ತಡೆ ಗಟ್ಟುವಲ್ಲಿ ಸಮಾಜದ ಪಾತ್ರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಮಹಾವಿದ್ಯಾಲಯದ ಪ್ರಾಚಾರ್ಯೆ ವಿಜಯಲಕ್ಷಿ÷್ಮÃ ಹಿಪ್ಪರಗಿ ಮಾತನಾಡಿ, ವಿದ್ಯಾರ್ಥಿಗಳು ಸಹೋದರತ್ವ ಭಾವನೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವಿನೋದ ಖೇಡ ಮಾತನಾಡಿ, ನಮ್ಮ ಮಹಾವಿದ್ಯಾಲಯಕ್ಕೆ ಹೆಚ್ಚಾಗಿ ಗ್ರಾಮೀಣ ವಿದ್ಯಾರ್ಥಿಗಳೇ ಆಗಮಿಸುತ್ತಾರೆ, ಸತತ ಅಧ್ಯಯನ ಕೈಗೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಯುವ ಮುಖಂಡ ರಾಘು ಅಣ್ಣಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಲೈಂಗಿಕ ದೌರ್ಜನ್ಯ ನಿವಾರಣಾ ಘಟಕದ ಮುಖ್ಯಸ್ಥೆ ಅಂಕಿತಾ ಪಾಟೀಲ, ಅಪ್ಪು ಇಂಡಿ, ಡೇನ್ನಿಸ್ ಕುಂದರಗಿ, ಪ್ರಕಾಶ ರುದ್ರಮನಿ ಮತ್ತಿತರರಿದ್ದರು.
ಎಸ್.ಎಚ್ ಗಬಸವಳಗಿ ಸ್ವಾಗತಿಸಿದರು. ಬಿ.ಎಂ. ಮದರಂಖAಡಿ ನಿರೂಪಿಸಿದರು. ಎಲ್.ಎಸ್. ಮು¯್ಲÁ ವಂದಿಸಿದರು.