ಇಂಡಿ ಪಟ್ಟಣದ ಲಚ್ಯಾಣದ ಶ್ರೀ ಸಿದ್ಧಲಿಂಗ ಮಹಾಪ್ರಭುಗಳ ಕರ್ತೃ ಗದ್ದುಗೆಯ ಸನ್ನಿಧಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಲಕ್ಷ ಬಿಲ್ವಾರ್ಚನೆ, ಧರ್ಮಸಭೆಯಲ್ಲಿ ಡಾ. ಮುರಘರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಅಭಿನವ ಸಿದ್ಧಾರೂಢ ಮಹಾಸ್ವಾಮೀಜಿ, ಷಣ್ಮುಖಾರೂಢ ಮಠ ಹುಬ್ಬಳ್ಳಿ, ಅಭಿನವ ಮತ್ಯುಂಜಯ ಶ್ರೀಗಳು ಮಣಕವಾಡ ಮತ್ತಿತರರಿದ್ದರು. 
ವಿಜಯಪುರ

ಲಚ್ಯಾಣ ಶ್ರೀಮಠ ಆಧ್ಯಾತ್ಮಿಕವಾಗಿ ಬೆಳೆಯಲಿ

ಪ್ರಮುಖ ಮುಖ್ಯಾಂಶಗಳು

  • ಡಾ. ಮುರಘರಾಜೇಂದ್ರ ಮಹಾಸ್ವಾಮೀಜಿ ಆಶೀರ್ವಚನ
  • ಲಕ್ಷ ಬಿಲ್ವಾರ್ಚನೆ

ಇಂಡಿ:

ಲಚ್ಯಾಣದ ಸದ್ಗುರು ಶ್ರೀ ಸಿದ್ಧಲಿಂಗ ಮಹಾರಾಜರ ಪುಣ್ಯಭೂಮಿ ಅತ್ಯಂತ ಪವಿತ್ರವಾದದ್ದು. ಮುಗಳಖೋಡ ಮತ್ತು ಜಿಡಗಾ ಮಹಾಸಂಸ್ಥಾನ ಮಠಗಳಿಗಿಂತಲೂ ಲಚ್ಯಾಣದ ಶ್ರೀಮಠವು ಆಧ್ಯಾತ್ಮಿಕ ಮತ್ತು ಸಾಮಾಜಿಕವಾಗಿ ಎತ್ತರಕ್ಕೆ ಬೆಳೆಯಬೇಕು, ದೇಶದಾದ್ಯಂತ ಕೀರ್ತಿ ಪಸರಿಸಬೇಕು ಎಂಬುದೇ ನಮ್ಮ ಪರಮ ಆಶಯ ಎಂದು ಮುಗಳಖೋಡ-ಜಿಡಗಾ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ನುಡಿದರು.

ಭಾನುವಾರ ಇಂಡಿ ತಾಲೂಕಿನ ಸುಕ್ಷೇತ್ರ ಲಚ್ಯಾಣದ ಶ್ರೀ ಸಿದ್ಧಲಿಂಗ ಮಹಾಪ್ರಭುಗಳ ಕರ್ತೃ ಗದ್ದುಗೆಯ ಸನ್ನಿಧಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಲಕ್ಷ ಬಿಲ್ವಾರ್ಚನೆ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಧರ್ಮಸಭೆಯ ಪಾವನ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಅಪಾರ ಶಿಷ್ಯರನ್ನು ಹೊಂದಿರುವ ಲಚ್ಯಾಣ ಮಠದ ಕೀರ್ತಿ ರಾಜ್ಯಾದ್ಯಂತ ಬೆಳೆಯಬೇಕು. ಲಚ್ಯಾಣ ಮಠ ಪ್ರಗತಿ ಹೊಂದಿ ಬೆಳೆಯ ಬೇಕು, ಸಿದ್ಧಲಿಂಗ ಗುರುಗಳ ಶಕ್ತಿ ಎತ್ತರಕ್ಕೆ ಬೆಳೆಯಬೇಕು ಎಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಲಚ್ಯಾಣ ಬಂಥನಾಳದ ಸಂಗನಬಸವ ಶ್ರೀಗಳು ವಿಜಯಪುರ ಜಿಲ್ಲೆ ಶೈಕ್ಷಣಿಕ ಕ್ರಾಂತಿ ಮಾಡಿದ್ದು ವಿಜಯಪುರ ಜಿಲ್ಲೆಯ ಜನರಿಗೆ ಶಿಕ್ಷಣ ನೀಡುವಲ್ಲಿ ಶ್ರಮಿಸಿದ್ದಾರೆ. ಲಚ್ಯಾಣ ಮಠ ಭವ್ಯ ಪರಂಪರೆ ಹೊಂದಿದೆ. ಸರ್ಕಾರ ಮಾಡದ ಕೆಲಸ ಬಂಥನಾಳ ಶ್ರೀಗಳು ಮಾಡಿದ್ದು ಆ ಪರಂಪರೆ ಉಳಿಸಿಕೊಂಡು ಹೋಗಬೇಕಾಗಿದೆ. ಮಠದ ಏಳ್ಗೆಗಾಗಿ ಎಲ್ಲರ ಅಭಿಪ್ರಾಯ ಪಡೆದು ಜಿಡಗಾ-ಮುಗಳಖೇಡ ಪೂಜ್ಯರ ನೇತೃತ್ವದಲ್ಲಿ ಗೊಂದಲ ನಿರ್ಮೂಲನೆ ಮಾಡಬೇಕು ಎಂದರು.
ಅಭಿನವ ಸಿದ್ಧಾರೂಢ ಮಹಾ ಸ್ವಾಮೀಜಿ, ಷರ್ಣಮುಖಾರೂಢ ಮಠ ಹುಬ್ಬಳ್ಳಿ, ಅಭಿನವ ಮತ್ಯುಂಜಯ ಶ್ರೀಗಳು ಮಣಕವಾಡ, ವೀರ ಮಹಾಂತ ಶ್ರೀಗಳು ಚಿನ್ಮಯಗಿರಿ, ನಿರಂಜನ ಶ್ರೀಗಳು ಅಜಲಪೂರ, ಶ್ರೀ ಅಮರನಾಥ ಮಹಾದೇವ ಮಠ ಕುಷ್ಟಗಿ, ಶಿರಶ್ಯಾಡದ ಆಭಿನವ ಮುರಘೇಂದ್ರ ಶ್ರೀಗಳು, ಧನರಾಜ ಮುಜಗೊಂಡ ಮಾತನಾಡಿದರು.
ಹಳಿಂಗಳಿ ಶಿವಾನಂದ ಶ್ರೀಗಳು, ಜುನಾಗಡದ ಮಹಾಂತ ಸಹದೇವಾನಂದ ಗಿರಿ ಶ್ರೀಗಳು, ಹುಣಸಿಹಾಳದ ನಿಜಗುಣ ದೇವರು, ಜಕನೂರದ ಸಿದ್ಧಲಿಂಗ ದೇವರು, ಸುಲೇಪೇಠದ ದೊಡ್ಡೆಂದ್ರ ಶ್ರೀ, ಕಲಬುರಗಿಯ ಚರಲಿಂಗ ಶ್ರೀ, ಮಾಶ್ಯಾಳದ ಮರುಳಾರಾಧ್ಯ ಶ್ರೀ, ನಿಂಬರ್ಗದ ಶಿವಲಿಂಗೇಶ್ವರ ಶ್ರೀ, ಜೋಗುರದ ಶಂಕರಾನಂದ ಶ್ರೀ, ರೂಗಿಯ ಸುಗಲಾತಾಯಿ, ತುಂಗಳದ ಅನುಸೂಯಾ ಮಾತಾಜಿ, ಚಿಕ್ಕ ಪಡಸಲಗಿಯ ಅಕ್ಕಮಹಾದೇವಿ, ಶಶಿಕಾಂತ ಗುರೂಜಿ, ದಯಾಸಾಗರ ಪಾಟೀಲ, ಕಾಸುಗೌಡ ಬಿರಾದಾರ ಮತ್ತಿತರರಿದ್ದರು.