ಹೂವಿನಹಿಪ್ಪರಗಿ ಗ್ರಾಮದ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿದ ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ ಎಸ್‌ಐಆರ್ ಪ್ರಕ್ರಿಯೆ ವೀಕ್ಷಿಸಿದರು. ಉಪ ತಹಸೀಲ್ದಾರ್ ಎಸ್.ಎಸ್. ತಾವರಖೇಡ, ಪಿಡಿಒ ಬಿ.ಬಿ. ಕಮತ, ಬಿಎಲ್‌ಒ ಮೇಲ್ವಿಚಾರಕ ಮಲ್ಲಿಕಾರ್ಜುನ ರಾಜನಾಳ, ಬಿಎಲ್‌ಒ ಶಾರದಾ ಮತ್ತಿತರರಿದ್ದರು. 
ವಿಜಯಪುರ

ಎಸ್‌ಐಆರ್ ಪ್ರಕ್ರಿಯೆ ಅಭಿಯಾನ ಯಶ್ವಸಿಗೊಳಿಸಿ

ಹೂವಿನಹಿಪ್ಪರಗಿ: ವಿಶೇಷ ಸಮಗ್ರ ಮತದಾರ ಪಟ್ಟಿ ಪರಿಷ್ಕರಣೆ ಪ್ರಸ್ತುತ ಅವಶ್ಯವಾಗಿದ್ದು, ಚುನಾವಣಾ ಆಯೋಗ ಕೈಗೊಂಡಿರುವ ಈ ಮಹತ್ವದ ಕೆಲಸದಲ್ಲಿ ಬಿಎಲ್‌ಒಗಳು ಕಡ್ಡಾಯವಾಗಿ ಪ್ರತಿ ಮನೆ ಮನೆಗೆ ತೆರಳಿ ಪ್ರತಿಯೊಬ್ಬ ಮತದಾರರಿಗೆ ದ್ವಿಪ್ರತಿಯಲ್ಲಿ ಗಣತಿ ನಮೂನೆ ನೀಡಿ ಭರ್ತಿ ಮಾಡಿ ಮತದಾರ ಪಟ್ಟಿ ಪರಿಷ್ಕರಣೆ ಅಭಿಯಾನ ಯಶ್ವಸಿಗೊಳಿಸುವಂತೆ ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ ಹೇಳಿದರು.
ಗ್ರಾಮದ ವಿವಿಧ ವಾರ್ಡ್ಗಳಿಗೆ ಸೋಮವಾರ ಭೇಟಿ ನೀಡಿ, ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಹಿನ್ನೆಲೆಯಲ್ಲಿ ಬಿಎಲ್‌ಒಗಳು ಮನೆ ಮನಗೆ ತೆರಳಿ ಗಣತಿ ನಮೂನೆ ವಿತರಣೆ ಮಾಡುತ್ತಿರುವುದನ್ನು ವೀಕ್ಷಿಸಿ, ಅವರು ಮಾತನಾಡಿದರು.
ತಾಲೂಕಿನ ಪ್ರತಿ ಬೂತ್‌ಗೆ ಬಿಎಲ್‌ಒಗಳನ್ನು ನೇಮಕ ಮಾಡಲಾಗಿದ್ದು, ಅವರು ಮನೆ ಮನಗೆ ಭೇಟಿ ನೀಡಿ, ದ್ವಿಪ್ರತಿಯಲ್ಲಿ ಅರ್ಜಿ ನೀಡಲಿದ್ದಾರೆ. ಚುನಾವಣಾ ಆಯೋಗ ಕೈಗೊಂಡಿರುವ ಮತದಾರ ಪಟ್ಟಿ ಪರಿಷ್ಕರಣೆ ಬಗ್ಗೆ ಮತದಾರರು ಯಾವುದೇ ಗೊಂದಲಗೊಳಗಾಗದೇ ಅರ್ಜಿ ಭರ್ತಿ ಮಾಡಬೇಕು ಎಂದು ಹೇಳಿದರು. ಉಪ ತಹಸೀಲ್ದಾರ್ ಎಸ್.ಎಸ್. ತಾವರಖೇಡ, ಪಿಡಿಒ ಬಿ.ಬಿ. ಕಮತ, ಬಿಎಲ್‌ಒ ಮೇಲ್ವಿಚಾರಕ ಮಲ್ಲಿಕಾರ್ಜುನ ರಾಜನಾಳ, ಬಿಎಲ್‌ಒ ಶಾರದಾ ಭಜಂತ್ರಿ ಇದ್ದರು.