ವಿಜಯಪುರ ತಾಲೂಕಿನ ಕತಕನಹಳ್ಳಿ ಗ್ರಾಮದಲ್ಲಿ ಸದಾಶಿವ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಜಾನುವಾರು ಜಾತ್ರೆಯನ್ನು ಗಣ್ಯರು ಉದ್ಘಾಟಿಸಿದರು. ಸುನಿಲಗೌಡ ಪಾಟೀಲ, ಗಂಗಾಧರ ಸಂಬಣ್ಣಿ, ಸಂಗಮೇಶ ಬಬಲೇಶ್ವರ ಮತ್ತಿತರರಿದ್ದಾರೆ.
ವಿಜಯಪುರ: ತಾಲೂಕಿನ ಸುಕ್ಷೇತ್ರ ಕತಕನಹಳ್ಳಿ ಗ್ರಾಮದಲ್ಲಿ ಶ್ರೀ ಗುರು ಚಕ್ರವರ್ತಿ ತ್ರಿಕಾಲಜ್ಞಾನಿ ಸದಾಶಿವ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಜಾನುವಾರು ಜಾತ್ರೆಯ ಉದ್ಘಾಟನೆ ಗುರುವಾರ ನೆರವೇರಿತು.
ಬಬಲಾದಿ-ಚಮಕೇರಿ-ಕತ್ನಳ್ಳಿ ಶಿವಯ್ಯ ಸ್ವಾಮೀಜಿ ಚಕ್ರವರ್ತಿ ಸದಾಶಿವ ಶಿವಯೋಗಿಗಳ ದೇವಾಲಯದ ಆವರಣದಲ್ಲಿ ಗೋಮಾತೆ ಹಾಗೂ ಜಾನುವಾರು ಪೂಜೆ ಸಲ್ಲಿಸಿ, ಆಶೀರ್ವಚನ ನೀಡಿ, ಜೀವಸಂಕುಲನ ಬಹಳ ಕಷ್ಟದಲ್ಲಿರುತ್ತವೆ.
ಮಾನವರಾದ ನಾವು ಅದನ್ನು ಅರಿತು ಕಷ್ಟದಲ್ಲಿರುವ ಜೀವ ಸಂಕುಲನಗಳಿಗೆ ನೀರು, ಅನ್ನ ನೀಡಿ ಅವುಗಳ ಸೇವೆ ಮಾಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಬಿಸಿಲು ಹೆಚ್ಚಾಗಿರುವದರಿಂದ ಪ್ರತಿಯೊಬ್ಬರು ಗಿಡಮರಗಳನ್ನು ಬೆಳೆಸಬೇಕು ಮುಂದಾಗಬೇಕು ಎಂದು ಸಲಹೆ ನೀಡಿದರು.
ವಿ.ಪ. ಸದಸ್ಯ ಸುನಿಲಗೌಡ ಪಾಟೀಲ, ಬಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ ಜಾನುವಾರ ಜಾತ್ರೆಗೆ ಚಾಲನೆ ನೀಡಿದರು.
ಎಕ್ಸಲಂಟ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ, ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಉದ್ಯಮಿ ಬಾಬುಗೌಡ ಬಿರಾದಾರ, ಸಂಗಮೇಶ ಬಬಲೇಶ್ವರ, ಅಪ್ಪಸಾಹೇಬ ಕೋಟ್ಯಾಳ, ಶರಣಪ್ಪ ಬಬಲೇಶ್ವರ, ಬಸನಗೌಡ ಬಿರಾದಾರ, ಪ್ರಕಾಶಗೌಡ ಪಾಟೀಲ (ಹಾಲಹಳ್ಳಿ), ಅಶೋಕ ಪಾಟೀಲ, ಸಿದ್ಧಾಂತ ಪಾಟೀಲ, ರಾಜುಗೌಡ ಪಾಟೀಲ, ಕಲ್ಲನಗೌಡ ಹರನಾಳ, ನಾಗರಾಜ್ ಲಂಬು, ರಾಜು ಗುಡ್ಡೋಡಗಿ, ಉಮೇಶ ವಂದಾಲ, ಮಹಾದೇವ ಗಚ್ಚಿನಮಠ, ರೂಪಸಿಂಗ ಲೋನಾರಿ, ಈರಪ್ಪ ಮೋದಿ, ಹೊನ್ನಪ್ಪ ಬಿಸನಾಳ, ಕುಮಾರ ಮೋದಿ, ಶಂಕರ ಕಕಮರಿ, ಗೋಪಾಲ ಘಟಕಾಂಬಳೆ, ಸುರೇಶ ಸಿಂಗರಡ್ಡಿ, ಸಿದ್ದು ಮಲ್ಲಿಕಾರ್ಜುನಮಠ ಮತ್ತಿತರರಿದ್ದರು.