ಸಿಂದಗಿ ತಾಲೂಕಿನ ಕನ್ನೊಳ್ಳಿ ಹಿರೇಮಠದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ದಾರುಕಾಚಾರ್ಯರ ನೂತನ ರಥೋತ್ಸವÀ ಹಾಗೂ ಲಿಂ. ಮರುಳಾರಾಧ್ಯ ಶಿವಾಚಾರ್ಯರ 112ನೇ ಜಯಂತ್ಯುತ್ಸವ ನಿಮಿತ್ತ ನಡೆದ ಜನಜಾಗೃತಿ ಧರ್ಮಸಭೆಯ ಸಾನ್ನಿಧ್ಯವಹಿಸಿ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಶಿವಾಚಾರ್ಯ ಆಶೀರ್ವಚನ ನೀಡಿದರು. ಯರಡೋಣಿ ಅಮರೇಶ ಶಾಸಿö, ಸಿದ್ಧಲಿಂಗ ಶಿವಾಚಾರ್ಯ, ವೀರ ಮಹಾಂತ ಶಿವಾಚಾರ್ಯ ಮತ್ತಿತರರಿದ್ದರು.
ಸಿಂದಗಿ; ಅಧ್ಯಾತ್ಮ ಅರಿಯಲು ಪರಿಶುದ್ಧ ಮನಸ್ಸು ಬೇಕು. ಜಾತಿ-ಮತ-ಪಂಥಗಳನ್ನು ಬದಿಗೊತ್ತಿ, ಸರ್ವರೂ ಸರ್ವದೊಳು ಒಂದಾಗಿ ಅಂತರAಗ ಮತ್ತು ಬಹಿರಂಗದ ಒಳಗೊಳ್ಳುವಿಕೆಯೊಂದಿಗೆ ಮನಸ್ಸನ್ನು ಭಕ್ತಿಯಿಂದ ಹದಗೊಳಿಸಿ, ಗುರುವಿನ ಸನ್ಮಾರ್ಗದಲ್ಲಿ ನಡೆದಾಗ ಮಾತ್ರ ಎಲ್ಲರ ಜೀವನ ಮುಕ್ತಿ ಸಾಧ್ಯ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಶಿವಾಚಾರ್ಯ ಹೇಳಿದರು.
ತಾಲೂಕಿನ ಕನ್ನೊಳ್ಳಿ ಹಿರೇಮಠದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ದಾರುಕಾಚಾರ್ಯರ ನೂತನ ರಥೋತ್ಸವÀ ಹಾಗೂ ಲಿಂ. ಮರುಳಾರಾಧ್ಯ ಶಿವಾಚಾರ್ಯರ 112ನೇ ಜಯಂತ್ಯುತ್ಸವ ನಿಮಿತ್ತ ಸೋಮವಾರ ಜರುಗಿದ ಜನಜಾಗೃತಿ ಧರ್ಮಸಭೆಯ ಪಾವನ ಸಾನಿಧ್ಯವಹಿಸಿ ಆಶೀರ್ವಚನ ನೀಡಿ, ಭಾರತೀಯ ಸಂಸ್ಕೃತಿಯಲ್ಲಿನ ಸಾಮರಸ್ಯ ಮತ್ತು ಮಾನವೀಯತೆ ಸಮಾಜದಲ್ಲಿ ಶಾಂತಿ ಸಹೋದರತ್ವ ಬಿಂಬಿಸುತ್ತದೆ. ಮನಸ್ಸು ಮತ್ತು ಆತ್ಮ ಪಾವಿತ್ರ‍್ಯವನ್ನು ಸಾಕ್ಷೀಕರಿಸುವ ಅಧ್ಯಾತ್ಮದತ್ತ ಭಕ್ತರ ಗಮನ ಹರಿದರೆ ಬದುಕು ಪಾವನವಾಗುತ್ತದೆ ಎಂದು ಹೇಳಿದರು.
ಯರಡೋಣಿ ಅಮರೇಶ ಶಾಸಿö ಪ್ರವಚನ ನೀಡಿ, ಬಾಲ್ಯದಲ್ಲಿಯೇ ಮಕ್ಕಳಿಗೆ ಸಂಸ್ಕಾರ ನೀಡಬೇಕು ಎಂದರು. ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿದರು.
ದೇವರಹಿಪ್ಪರಗಿ ವೀರ ಮಹಾಂತ ಶಿವಾಚಾರ್ಯರು, ಕನ್ನೂರ ಸೋಮನಾಥ ಶಿವಾಚಾರ್ಯರು, ಯಂಕAಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಮತ್ತಿತರರಿದ್ದರು.
ಸಂಗೀತ ಶಿಕ್ಷಕ ರೇಣುಕ ಗವಾಯಿಗಳು, ಕೆರುಟಗಿ ಮಹಾಂತೇಶ ಕಾಳಗಿ ಜೇವರ್ಗಿ ಅವರು ಸಂಗೀತೆ ಸೇವೆ ನಡೆಸಿದರು.