ವಿಜಯಪುರದ ಗುರುದೇವ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ವೀರೇಶಾನಂದ ಸ್ವಾಮೀಜಿ, ಶಿವರುದ್ರ ಬಾಗಲಕೋಟ, ರಾಹುಲ್ ಜಾಧವ ಮತ್ತಿತರರಿದ್ದಾರೆ.
- ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸ್ವಾಮೀಜಿ
- ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ
ವಿಜಯಪುರ: ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವ ಕಾರ್ಯ ಶಿಕ್ಷಕರು ಮತ್ತು ಪಾಲಕರು ಮಾಡಬೇಕು. ಮಕ್ಕಳು ಆಸಕ್ತಿಯ ವಿಷಯದಲ್ಲಿ ಅವರಿಗೆ ಪ್ರೋತ್ಸಾಹ ನೀಡಿದರೇ ಅವರು ಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಏರಲು ಸಾಧ್ಯ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸ್ವಾಮೀಜಿ ಹೇಳಿದರು.
ನಗರ ಹೊರ ವಲಯದ ಗುರುದೇವ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವ ಜತೆಗೆ ಪ್ರೇರಣೆ ನೀಡಬೇಕೆಂದು ಸಲಹೆ ನೀಡಿದರು.
ಮುಖ್ಯ ಅತಿಥಿ ಪಾಲಿಕೆಯ ಸದಸ್ಯ ಶಿವರುದ್ರ ಬಾಗಲಕೋಟ ಮಾತನಾಡಿ, ಗುರುದೇವ ಅಂತಾರಾಷ್ಟ್ರೀಯ ವಸತಿ ಶಾಲೆ ಗುಣಮಟ್ದ ಶಿಕ್ಷಣದಿಂದಾಗಿ ಆರಂಭಗೊಂಡ ಅಲ್ಪ ಸಮಯದಲ್ಲಿ ಸಾಕಷ್ಟು ಖ್ಯಾತಿ ಪಡೆದಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.
ವೈದ್ಯಾಧಿಕಾರಿ ಡಾ. ದೀಪಮಾಲಾ ಪಾಟೀಲ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಪಾಲಿಕೆ ಸದಸ್ಯ ರಾಹುಲ್ ಜಾಧವ, ಅನುರಾಧ ಕಂಗೋಣಿ, ಸುಭಾಂಗಿ ಕುಲಕರ್ಣಿ, ರಾಮಚಂದ್ರ ಭೋಸಲೆ, ವಿಜಯ ಚವಾಣ್, ಬಿ.ಟಿ. ತರಸೆ, ಸಿಆರ್‌ಪಿ ಬಸವರಾಜ ಪಡಗಾನೂರ, ಶಾಂತಾಬಾಯಿ ಭೋಸಲೆ, ನಾಗೇಶ ಡೋಣೂರ, ಉಮಾ ಬೋಸಲೆ, ರವೀಂದ್ರ ಬೋಸಲೆ, ಲಕ್ಷ್ಮೀ ಕಾಟೆ, ಪರಶುರಾಮ ಬಜಂತ್ರಿ, ಜಗದೀಶ ಕಾಟೆ ಮತ್ತಿತರರಿದ್ದರು.
ವರ್ಷಿಣಿ ಕುಲಕರ್ಣಿ ಪ್ರಾರ್ಥಿಸಿದರು. ದತ್ತಾತ್ರೇಯ ಹಾದಿಮನಿ ಸ್ವಾಗತಿಸಿದರು. ರವೀಂದ್ರ ಬೋಸಲೆ ಪ್ರಾಸ್ತಾವಿಕ ನುಡಿಗಳನ್ನನಾಡಿದರು. ತನ್ಸಿನ್ ದಫೇದಾರ ವಂದಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.