ವಿಜಯಪುರದ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಮಹೇಶ ಕ್ಯಾತನ, ಕವಿತಾ ಮುದಕವಿ, ಹಾಸಿಂಪೀರ ವಾಲಿಕಾರ ಮತ್ತಿತರರಿದ್ದಾರೆ. 
ವಿಜಯಪುರ

ಶರಣರ ಶುದ್ಧ ವಿಚಾರ ಜೀವನದಲ್ಲಿ ಅಳವಡಿಸಿಕೊಳ್ಳಲಿ

ವಿಜಯಪುರ: ನೀತಿ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಸೂಫಿ ಸಂತರು ಮತ್ತು ಶರಣರು ಮಾನವ ಜನಾಂಗ ಸೌಹಾರ್ದದಿಂದ ಕೂಡಿ ಬಾಳಲು ಸಂದೇಶ ಸಾರಿದ್ದರು ಎಂದು ಅರಣ್ಯ ಇಲಾಖೆಯ ವಿಶ್ರಾಂತ ಅಽಕಾರಿ ಮಹೇಶ ಕ್ಯಾತನ ಹೇಳಿದರು.
ನಗರದ ಕಸಾಪ ಸಭಾಂಗಣದಲ್ಲಿ ವಿವಿಧ ಮಹನೀಯರ ಸ್ಮರಣಾರ್ಥ ಶನಿವಾರ ಸಂಜೆ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರೂ ಶುದ್ಧ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಜತೆಗೆ ಸೂಫಿ ಸಂತರ ಹಾಗೂ ಶರಣರ ಕಾಯಕ ತತ್ವಗಳನ್ನು ಪಾಲನೆ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕವಿತಾ ಮುದಕವಿ ಸೂಫಿಗಳು ಹಾಗೂ ಶರಣರ ಚಿಂತನೆಗಳು ಕುರಿತು ಉಪನ್ಯಾಸ ನೀಡಿ, ಸೂಫಿಗಳ ಹಾಗೂ ಶರಣರ ತತ್ವಗಳು ಸಾರ್ವಕಾಲಿಕ. ಯಾವುದೇ ಧರ್ಮವು ಬೇದವಿಲ್ಲದೆ ಮಾನವೀಯ ಸದ್ಗುಣಗಳಿಂದ ಕೂಡಿದೆ. ನಾವು ಶರಣರಾಗಲು ಸೂಫಿಗಳಾಗಲು ಸಾಧ್ಯವಿಲ್ಲ. ಆದರೆ, ಅವರ ದಾರಿಯಲ್ಲಿ ಸಾಗೋಣ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಚಾರ್ಯ ಬಿ.ಎ. ಅಜೂರ ಮಾತನಾಡಿ, ಭಾವೈಕ್ಯತೆಯ ಜೀವನಕ್ಕೆ ಸೂಫಿ ಸಂತರು-ಶರಣರು ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಸಹೋದರತೆಯ ಪವಿತ್ರ ಬಾಂಧವ್ಯವನ್ನು ಗಟ್ಟಿಮಾಡುವ ಕಾಯಕ ಸಿದ್ಧಾಂತ ಮಾಡಿದ್ದಾರೆ ಎಂದು ಹೇಳಿದರು.
ನಂದರಗಿ ಸರ್ಕಾರಿ ಪ್ರೌಢ ಶಾಲೆಯ ವಿಶ್ರಾಂತ ಮುಖ್ಯ ಅಧ್ಯಾಪಕ ಜಿ.ಕೆ. ಪಟ್ಟಣದ, ನಾದ ಬಿಕೆ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಅಧ್ಯಾಪಕ ಬಿ.ವಿ. ಪಾಟೀಲ ಹಾಗೂ ಸರ್ಕಾರಿ ಪ್ರೌಢ ಶಾಲೆ ವಿಶ್ರಾಂತ ಶಿಕ್ಷಕಿ ಶಾಂತಾಬಾಯಿ ಸುರಕೋಡ ಮಾತನಾಡಿದರು. ಸುನಂದಾ ಕೋರಿ ಪ್ರಾರ್ಥಿಸಿದರು. ಜಯಶ್ರೀ ಹಿರೇಮಠ ಸ್ವಾಗತಿಸಿದರು. ಸಿದ್ದರಾಮ ಹತ್ತಳ್ಳಿ ನಿರೂಪಿಸಿದರು. ಶಿಲ್ಪಾ ಭಸ್ಮೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶೋಭಾ ಬಡಿಗೇರ ವಂದಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಬಸವರಾಜ ಬಿರಾದಾರ, ಲತಾ ಗುಂಡಿ, ಗಂಗಮ್ಮ ರಡ್ಡಿ, ಮಲ್ಲಿಕಾರ್ಜುನ ಕೆಳಗಡೆ, ವೈ.ಎಸ್. ನಾದ, ಸುನಂದಾ ಅವಟಿ, ಕೆ.ಎಸ್. ಹಣಮಾಣಿ, ಜಿ.ಎಸ್. ಬಳ್ಳೂರ, ಸರೋಜಿನಿ ತಮಗೊಂಡ, ಆಶಾ ಬಿರಾದಾರ, ಆರ್.ಬಿ. ದಾನಿ, ಸಹನಾ ಬಿರಾದಾರ, ಬಸನಗೌಡ ಬಿರಾದಾರ, ಯುವರಾಜ ಚೊಳಕೆ. ಬಸವರಾಜ ಎಕ್ಸಂಬೆ, ಲಕ್ಷಿ÷್ಮ ಬಿರಾದಾರ ಮತ್ತಿತರರಿದ್ದರು.