ಝಳಕಿ ಗ್ರಾಮದ ಭೀರಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಝಳಕಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ಒಂದು ವಾರ ಎನ್‌ಎಸ್‌ಎಸ್ ವಾರ್ಷಿಕ ಸೇವಾ ಯೋಜನೆಯ ಶಿಬಿರವನ್ನು ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಪಂಗಡದ ರಾಜ್ಯ ಉಪಾಧ್ಯಕ್ಷ ಸಣ್ಣಪ್ಪ ತಳವಾರ ಉದ್ಘಾಟಿಸಿದರು.
ಹೊರ್ತಿ: ಸ್ವಚ್ಚತೆ, ಶಿಸ್ತು, ಬದ್ಧತೆ ಮಹತ್ವ ಅರಿವು ಮೂಡಿಸುವುದೇ ರಾಷ್ಟ್ರೀಯ ಸೇವಾ ಯೋಜನೆಯ ಒಂದು ವಾರದ ವಾರ್ಷಿಕ ವಿಶೇಷ ಶಿಬಿರದ ಉದ್ದೇಶವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಪಂಗಡದ ರಾಜ್ಯ ಉಪಾಧ್ಯಕ್ಷ ಸಣ್ಣಪ್ಪ ತಳವಾರ ಹೇಳಿದರು.
ಝಳಕಿ ಗ್ರಾಮದ ಭೀರಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ಒಂದು ವಾರದ ಎನ್‌ಎಸ್‌ಎಸ್ ವಾರ್ಷಿಕ ಸೇವಾ ಯೋಜನೆಯ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಝಳಕಿ ಗ್ರಾಮವನ್ನು ಶಿಕ್ಷಣ ಕಾಶಿಗೆ ದೂರದೃಷ್ಟಿಯ ಅಭಿವೃದ್ಧಿ ನಾಯಕ ಶಾಸಕ ಯಶವಂತರಾಯಗೌಡ ಪಾಟೀಲರ ಸತತ ಪರಿಶ್ರಮದ -ಬಲದಿಂದ ಇಂದು ವಿವಿಧ ಸರ್ಕಾರಿ ಶಾಲಾ, ಕಾಲೇಜು, ಡಿಪ್ಲೋಮಾ ಮತ್ತು ಪಾಲಿಟೆಕ್ನಿಕ್ ಕಾಲೇಜಿಗೆ, ಹೆಣ್ಣು ಮತ್ತು ಗಂಡು ಮಕ್ಕಳ ವಸತಿ ನಿಲಯ ತಂದು ಶೈಕ್ಷಣಿಕ ಅಭಿವೃದ್ಧಿಗೆ ಕಾರ್ಯ ಕೈಕೊಂಡಿರುವ ಅವರ ಕಾರ್ಯ ಮೆಚ್ಚುವಂತೆ ಮಾಡಿದ್ದಾರೆ ಎಂದು ಹೇಳಿದರು.
ಗ್ರಾಮದ ಹಿರಿಯ ನಾರಾಯಣ ಜಾಗೀರದಾರ ಮಾತನಾಡಿ, ವಿದ್ಯಾರ್ಥಿಗಳು ಈ ಎನ್‌ಎಸ್‌ಎಸ್ ಸೇವಾ ಯೋಜನೆಯಿಂದ ಗ್ರಾಮಸ್ಥರಲ್ಲಿ ಸ್ವಚ್ಚತೆ ಮಹತ್ವ ಅರಿವು ಮೂಡಿಸಬೇಕು ಎಂಬುದರ ತಿಳಿವಳಿಕೆ ನೀಡಿದರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ನೀಲಕಂಠ, ಎನ್‌ಎಸ್‌ಎಸ್ ಯೋಜನಾ ಅಽಕಾರಿ ಮುದ್ದಣ್ಣ ಭೀಮನಗರ ಗುರುಗಳು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸುವರ್ಣ ಕಟ್ಟಿಮನಿ, ಶಂಕರ ನಾಯಕ, ಅನೀಲ ಪಾಟೀಲ, ತಿರುಪತಿ ಬಂಡಿವಡ್ಡರ, ಅಜಯ ಚವಾಣ್, ಶ್ರೀಧರ ಬಂಡೆ, ಪಾಂಡುರAಗ ದೇಸಾಯಿ, ಜಂಗಮಶೆಟ್ಟಿ, ಹಾವಳಗಿ ಮತ್ತಿತರರಿದ್ದರು.