ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮAದಿರದಲ್ಲಿ ನಡೆದ ತನು -Ëಂಡೇಷನ್ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಅಪ್ಪಾಸಹೇಬ ಪಟ್ಟಣಶೆಟ್ಟಿ, ಮಂಜುನಾಥ ಜುನಗೊಂಡ, ಅಶೋಕ ಹಂಚಲಿ ಮತ್ತಿತರರಿದ್ದಾರೆ.
ವಿಜಯಪುರ: ಭವಿಷ್ಯದ ಭಾರತ ನಿರ್ಮಾಣಗೊಳಿಸುವ ನಿಟ್ಟಿನಲ್ಲಿ ಯುವಜನತೆಯಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ತನು -ಫೌಂಡೇಷನ್ ದಶಮಾನೋತ್ಸವ ಸಂಭ್ರಮ ಹಾಗೂ ತನು ಕನ್ನಡ ಮನ ಕನ್ನಡ ರಾಜ್ಯ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಅವರು
ಯುವಜನತೆಯಲ್ಲಿ ಆತ್ಮಸ್ಥೈರ್ಯ ಬೆಳೆಸುವ ಅನಿವಾರ್ಯತೆ ಇದೆ. ಮೊಬೈಲï ಯುಗದಲ್ಲಿ ಯುವಕರು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಯುವಜನತೆ ಶಾರೀರಿಕ ಸದೃಢತೆ ಜತೆಗೆ ದೇಶ, ಧರ್ಮದ ಅರಿವು ಮೂಡಿಸಿಕೊಂಡು ಭವ್ಯ ರಾಷ್ಟç ನಿರ್ಮಾಣದತ್ತ ಹೆಜ್ಜೆ ಹಾಕಬೇಕು. ತನು -ಫೌಂಡೇಷನ್ ನಿರಂತರ ಸಾಮಾಜಿಕ ಕಳಕಳಿ ಹೊಂದಿದ್ದು, ಮುಂಬರುವ ದಿನಗಳಲ್ಲಿ ಸಂಸ್ಥೆ ಇನ್ನಷ್ಟು ಉತ್ತುಂಗಕ್ಕೇರಲಿ ಎಂದು ಶುಭ ಹಾರೈಸಿದರು.
ಉಪನ್ಯಾಸಕ ಮಂಜುನಾಥ ಜುನಗೊಂಡ ಹಾಗೂ ಪ್ರಶಸ್ತಿ ಪುರಸ್ಕೃತ ಅಶೋಕ ಹಂಚಲಿ ಮಾತನಾಡಿದರು. ಯಶೋಧ ಆಸ್ಪತ್ರೆಯ ಸಿಇ ಡಾ. ರವೀಂದ್ರ ಮದ್ರಕಿ ಅಧ್ಯಕ್ಷತೆ ವಹಿಸಿದ್ದರು. ವಾಗ್ಮಿ ಮಂಜುನಾಥ ಜುನಗೊಂಡ ರಚಿಸಿದ ಅಂತರಾಗ್ನಿ ಕೃತಿ ಬಿಡುಗಡೆಗೊಳಿಸಲಾಯಿತು. ಕನ್ನಡ ಉಪನ್ಯಾಸಕ ಮುಸ್ತಾಕ್ ಮಲಘಾಣ ಕೃತಿ ಪರಿಚಯಿಸಿದರು.
ಡಾ. ಸುರೇಶ ಕನಮಡಿ, ಅಶೋಕ ಹಂಚಲಿ, ಪ್ರಕಾಶ ಅಂಗಡಿ, ಚಿದಾನಂದ ಸಂಗಪ್ಪ ಅವಟಿ, ಬುಳ್ಳಪ್ಪ ಡಿ., ವಿದ್ಯಾ ಪಿ., ಡಾ. ಸುನೀಲ ಹೆಬ್ಬಿ, ಅನಿತಾ ಅಯ್ಯರ, ಭಾರತಿ ದಾವಣಗೇರಿ, ಆನಂದ ಕಂಬಾರ, ಬಸಪ್ಪ ಕುಂಬಾರ ಅವರಿಗೆ ತನು ಕನ್ನಡ ಮನ ಕನ್ನಡ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ, ಶಹೀನ್ ಮೊಕಾಶಿ, ಅಶೋಕ ಯಡಳ್ಳಿ, ಸಚಿನ ತಳಕೇರಿ, ಸೌಮ್ಯ ಗಲಗಲಿ, ಧರು ಎಸ್.ಕೆ., ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಉದ್ಯಮಿ ಶಾಂತೇಶ ಕಳಸಗೊಂಡ, ಕಲ್ಮೇಶ ಆಸಂಗಿ, ಡಾ. ಸನ್ಮತಿ ಕುರುಂದವಾಡೆ, ಬಸವರಾಜ ಯಾದವಾಡ, ಸಚೀನ ಕಟ್ಟಿ, ರಾಜೇಶ್ವರಿ ಜುಗತಿ, ಚಿತ್ರಾ ಅಷ್ಟಪುತ್ರೆ, ತನು -ಫೌಂಡೇಷನ್‌ನ ಅಧ್ಯಕ್ಷ ವಿಜುಗೌಡ ಕಾಳಶೆಟ್ಟಿ, ಉಪಾಧ್ಯಕ್ಷೆ ಬಸಂತಿ ಕಾಳಶೆಟ್ಟಿ ಮತ್ತಿತರರಿದ್ದರು. ಸಂಗನಬಸವರಾಜ ಗೂಡಲಮನಿ ನಿರೂಪಿಸಿದರು. ರಾಹುಲ್ ಮರಳಿ ವಂದಿಸಿದರು.