ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂಕಾಂವಿಭಾಗದಡಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು. ಎಸ್.ಬಿ. ಕುಂಬಾರ, ಎ.ಐ. ಹಂಜಗಿ, ಎಂ.ಎಸ್. ಖೊದ್ನಾಪೂರ ಮತ್ತಿತರರಿದ್ದಾರೆ. 
ವಿಜಯಪುರ

ವಿದ್ಯಾರ್ಥಿಗಳು ಅಗತ್ಯ ಕೌಶಲ ಬೆಳಸಿಕೊಳ್ಳಲಿ

Mallamma K.P
ವಿಜಯಪುರ : ವಿದ್ಯಾರ್ಥಿಗಳು ಬದಲಾಗುತ್ತಿರುವ ಕಾರ್ಪೊರೇಟ್ ಜಗತ್ತಿಗೆ ಅಗತ್ಯವಾಗಿರುವ ಕೌಶಲಗಳನ್ನು ಬೆಳೆಸಿಕೊಂಡಾಗಲೇ ಬ್ಯಾಂಕಿಗ್‌ನಂತಹ ಕ್ಷೇತ್ರಗಳಲ್ಲಿ ಅರ್ಹತೆ ಪಡೆಯಲು ಸಾಧ್ಯ ಎಂದು ದರಬಾರ ಪದವಿ ಕಾಲೇಜಿನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಎಸ್.ಬಿ. ಕುಂಬಾರ ಹೇಳಿದರು.
ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂಕಾಮ್‌ ವಿಭಾಗದಡಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಇವೋಕ್-೨ಕೆ೨೬ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮೀಣ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಲ್ಲಿ ಸಂದರ್ಶನ ಕಲೆ, ಸಂವಹನ ಕೌಶಲ ಮತ್ತು ಕಾರ್ಯತತ್ಪರತೆ ಮತ್ತು ಸೃಜನಾತ್ಮಕತೆ ಬ್ಯಾಂಕಿಂಗ್, ಫೈನಾನ್ಸ್, ಮಾರ್ಕೆಟಿಂಗ್, ವಿಮೆ ಮತ್ತು ಸ್ಟಾಕ್ ಮಾರುಕಟ್ಟೆ, ವ್ಯವಹಾರ ನಿರ್ವಹಣೆ, ಅಕೌಂಟಿಂಗ್ ಮತ್ತು ವ್ಯವಸ್ಥಾಪನಾ ಕ್ಷೇತ್ರದಲ್ಲಿ ವಿವಿಧ ಹುದ್ದೆಗಳಿಗೆ ನಡೆಯುವ ಲಿಖಿತ ಪರೀಕ್ಷೆ, ಸಂದರ್ಶನ ಕಲೆ, ಉದ್ಯೋಗ-ಮಾರ್ಗದರ್ಶನ ಹಾಗೂ ತರಬೇತಿ ನೀಡುವುದು. ಆ ಮೂಲಕ ಅವರು ಉದ್ಯೋಗ ಕಂಡಕೊಂಡು ಆರ್ಥಿಕ ಸ್ವಾವಲಂಬಿಯಾಗುವುಂತೆ ಮಾಡುವ ವಾಣಿಜ್ಯ ಶಿಕ್ಷಣ ಇಂದಿನ ಅಗತ್ಯತೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎ.ಐ. ಹಂಜಗಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸಾಫಲ್ಯ ಪಡೆಯಬೇಕಾದರೆ ಕೌಶಲಗಳು ಅತ್ಯಗತ್ಯ ಎಂದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಎಸ್. ಖೊದ್ನಾಪೂರ ಮಾತನಾಡಿದರು. ಎಸ್.ಬಿ. ಕಬಾಡೆ, ಮಮತಾ ಬನ್ನೂರ, ಶಿವಾನಂದ ಜಮಾದಾರ, ಸುರೇಖಾ ಪಾಟೀಲ ವೇದಿಕೆಯಲಿದ್ದರು. ಪ್ರಶಾಂತ ಸ್ವಾಗತಿಸಿದರು. ವೀರೇಶ ಪತ್ತಾರ ನಿರೂಪಿಸಿದರು.
ಚಂದ್ರಕಾಂತ ಬಿ., ವಿಶಾಲಾಕ್ಷೀ ಹೊನ್ನಾಕಟ್ಟಿ, ಬಿ.ಎನ್. ಶಾಡದಳ್ಳಿ, ಪ್ರಕಾಶ ಹಾವೇರಿಪೇಠ, ಶ್ರೀಶೈಲ ಹೆಬ್ಬಿ ಮತ್ತಿತರರಿದ್ದರು.