ದೇವರಹಿಪ್ಪರಗಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಇಲಾಖೆಯ ಮಿಂಚಿನ ಸಂಚಾರ ತಂಡ ಭೇಟಿ ನೀಡಿ, ಪರಿಶೀಲಿಸಿದ ನಂತರ ಅವರನ್ನು ಸನ್ಮಾನಿಸಲಾಯಿತು. ತಂಡದ ಮುಖ್ಯಸ್ಥ ರಾಘವೇಂದ್ರ ಹೊಸೂರ, ಪ್ರಕಾಶ ನಾಲತವಾಡ, ವಿಜಯಲಕ್ಷ್ಮೀ ನವಲಿ ಮತ್ತಿತರರಿದ್ದರು. 
ವಿಜಯಪುರ

ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆಯಲಿ

ಪ್ರಮುಖ ಮುಖ್ಯಾಂಶಗಳು

  • ಗುಣಾತ್ಮಕ ಶಿಕ್ಷಣ ನಮ್ಮ ಆದ್ಯ ಕೆಲಸವಾಗಬೇಕು
  • ಸಮಗ್ರವಾಗಿ ಪರಿಶೀಲಿಸಿ
ದೇವರಹಿಪ್ಪರಗಿ: ಗುಣಾತ್ಮಕ ಶಿಕ್ಷಣ ನಮ್ಮ ಆದ್ಯ ಕೆಲಸವಾಗಬೇಕು. ಪ್ರತಿಯೊಂದು ಮಗು ಶಾಲೆಗೆ ದಾಖಲಾಗಬೇಕು. ದಾಖಲಾದ ಮಗು ಗುಣಾತ್ಮಕ ಶಿಕ್ಷಣ ಪಡೆಯಬೇಕು. ಈ ನಿಟ್ಟಿನಲ್ಲಿ ಸತತ ಪ್ರಯತ್ನ ಸಾಗಬೇಕೆಂದು ವಿಜಯಪುರ ನಗರ ವಲಯದ ಕ್ಷೇತ್ರಶಿಕ್ಷಣಾಧಿಕಾರಿ ರಾಘವೇಂದ್ರ ಹೊಸೂರ ಹೇಳಿದರು.
ಇಲ್ಲಿನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಇಲಾಖೆ ಮಿಂಚಿನ ಸಂಚಾರ ಜಿಲ್ಲಾ ತಂಡದ ಮುಖ್ಯಸ್ಥರಾಗಿ ಆಗಮಿಸಿ ಮಂಗಳವಾರ ಶಾಲಾ ವ್ಯವಸ್ಥೆಯನ್ನು ಸಮಗ್ರವಾಗಿ ಪರಿಶೀಲಿಸಿ, ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಬೇಕು. ಉತ್ತಮ ಯೋಜನೆಗಳು ನಮ್ಮ ಶಾಲೆಗಳಲ್ಲಿ ಇದ್ದು, ಈ ವರ್ಷದಿಂದ ಇಂಗ್ಲಿಷ ಮಾಧ್ಯಮ ಪ್ರಾರಂಭವಾಗಿದ್ದು, ಸ್ಪರ್ಧಾತ್ಮಕ ಜಗತ್ತಿಗೆ ಅನುಕೂಲವಾಗಲಿದೆ. ದಿನನಿತ್ಯ ಮಕ್ಕಳು ಚಟುವಟಿಕೆಯುಕ್ತ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಶಿಕ್ಷಕರು ನಿರಂತರ ಕ್ರಿಯಾಶೀಲತೆಯಿಂದ ಉತ್ತಮ ಶಿಕ್ಷಣ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸೂಚಿಸಿದರು.
ಶಾಲಾ ದಾಖಲಾತಿಗಳು, ಶಿಕ್ಷಕರು ಸಿದ್ಧಪಡಿಸಿದ ದಾಖಲೆಗಳನ್ನು ಪರಿಶೀಲಿಸಿ ಮಾರ್ಗದರ್ಶನ ಮಾಡಿದರು.
ಮಿಂಚಿನ ಸಂಚಾರ ಜಿಲ್ಲಾ ತಂಡದ ಶಿಕ್ಷಣ ಸಂಯೋಜಕ ಪ್ರಕಾಶ ನಾಲತವಾಡ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಂ.ಎಂ. ಗುರಾಡಿ, ಸಮೂಹ ಸಂಪನ್ಮೂಲ ವ್ಯಕ್ತಿ ವಿಜಯಲಕ್ಷ್ಮೀ ನವಲಿ, ಮುಖ್ಯ ಶಿಕ್ಷಕ ಪಿ.ಸಿ. ತಳಕೇರಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.