ವಿಜಯಪುರದ ಸಂತ ಅನ್ನಮ್ಮನವರ ದೇವಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಗೃಹ ಕಾರ್ಮಿಕರ ಹಾಗೂ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಗಣ್ಯರು ಉದ್ಘಾಟಿಸಿದರು. ಜಗನ್ನಾಥ ಖುದನಪುರ, ಸಿದ್ದು ಹೊನಕಟ್ಟಿ, ಗುರುನಾಥ ಉಪ್ಪಾರ, -Á. ಸುನೀಲ -Àರ್ನಾಂಡಿಸ್ ಮತ್ತಿತರಿದ್ದಾರೆ.
ವಿಜಯಪುರ : ಕಾರ್ಮಿಕರೆಲ್ಲರೂ ಒಟ್ಟಿಗೆ ಸಂಘಟಿತರಾಗುವ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉಚಿತ ಕಾನೂನು ಸೇವಾ ಸೇವೆಗಳ ಪ್ರಾಽಕಾರಿದ ಜಗನ್ನಾಥ ಖುದನಪುರ ಹೇಳಿದರು.
ಅನೌಪಚಾರಿಕ ಶಿಕ್ಷಣ ಸಂಸ್ಥೆ, ನಗರ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಯೂನಿಯನ್ ಹಾಗೂ ನಗರ ಗೃಹ ಕಾರ್ಮಿಕರ ಯೂನಿಯನ್‌ಗಳ ಸಂಯುಕ್ತಾಶ್ರಯದಲ್ಲಿ ನಗರದ ಸಂತ ಅನ್ನಮ್ಮನವರ ದೇವಾಲಯದ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವ ಗೃಹ ಕಾರ್ಮಿಕರ ಹಾಗೂ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತಾಡಿದರು.
ಕೆಲಸದ ಅವಽ ಹೊರತು ಪಡಿಸಿ ಔಪಚಾರಿಕವಾಗಿ 10 ರಿಂದ 15 ಗಂಟೆ ಕೆಲಸ ಮಾಡಿದರೂ ಅದಕ್ಕೆ ತಕ ್ಕಕೂಲಿ ಸಿಗುತ್ತಿಲ್ಲ. ಅಲ್ಲದೆ, ಕಾರ್ಮಿಕರಿಗೆ ಕಷ್ಠಕರವಾದ ಕೆಲಸವೇ ನೀಡುತ್ತಿದ್ದರೂ ಯಾವುದೇ ಸರ್ಕಾರಿ ಸೌಲಭ್ಯ ಒದಗಿಸುತ್ತಿಲ್ಲ. ಹೀಗಾಗಿ, ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಒಂದಾಗುವAತೆ ಅವರು ಸಲಹೆ ನೀಡಿದರು.
ಕಾರ್ಮಿಕ ಇಲಾಖೆ ಸಿಬ್ಬಂದಿ ಗುರುನಾಥ ಉಪ್ಪಾರ ಮಾತನಾಡಿ, ಕಾರ್ಮಿಕರೆಂದರೆ ಯಾರು? ಅವರಿಗೆ ಇಲಾಖೆಯಲ್ಲಿರುವ ಸೌಲಭ್ಯ, ಮದುವೆ ಸಹಾಯಧನ, ಶೈಕ್ಷಣಿಕ ಸಹಾಯಧನ, ಪಿಂಚಣಿ ಸೇರಿ ಮುಂತಾದ ಸೌಲಭ್ಯಗಳ ಕುರಿತು ವಿವರಿಸಿ, ಅವುಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಉಪನ್ಯಾಸಕ ಎಚ್.ಟಿ. ಭರತಕುಮಾರ ಮತ್ತು ಆನೌಪಚಾರಿಕ ಶಿಕ್ಷಣ ಸಂಸ್ಥೆ ನಿರ್ದೆಶಕ -Á. ಕೆವಿನ ಸಿಕ್ವೇರಾ ಮಾತನಾಡಿದರು. ರವಿ ದೊಡಮನಿ ಕಟ್ಟಡ ಕಾರ್ಮಿಕರ ವಾರ್ಷಿಕ ವರದಿ ಮತ್ತು ಮಾಲನ ಮುಜಾವರ ಗೃಹ ಕಾರ್ಮಿಕರ ಯೂನಿಯನ್‌ನ ವಾರ್ಷಿಕ ವರದಿ ವಾಚಿಸಿದರು.
ಕಾರ್ಮಿಕ ಯೂನಿಯನ್ ಅಧ್ಯಕ್ಷ ಸಿದ್ದು ಹೊನಕಟ್ಟಿ, -Àರಜಾನಾ ಜಮಾದಾರ, -Á. ಸುನೀಲ -Àರ್ನಾಂಡಿಸ್, -Á. ಸುಮನ ಬಾಲು, ಬ್ರದರ್ ನಿಖಿಲ, ಸಿಸ್ಟರ್ ಅಸುಂತಾ ಮತ್ತಿತರಿದ್ದರು.
ಸರೋಜಾ ಕಟ್ಟಿಮನಿ ಸ್ವಾಗತಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ರೇಣುಕಾ ಕೊಟ್ಯಾಳ ಬಹುಮಾನ ವಿತರಿಸಿದರು. ಸುಶ್ಮಿತಾ ಭಾಂಡೆಕರ ಸಂವಿಧಾನದ ಪೀಠಿಕೆ ಓದಿದರು. ಶೊಭಾ ವಾಲಿಕಾರ ನಿರೂಪಿಸಿದರು. ಸುನಂದಾ ನಾಯಕ ವಂದಿಸಿದರು.