ಕನಕನಾಳ ಗ್ರಾಮದ ಔಜಗಿರಿ ಆಶ್ರಮದಲ್ಲಿ 5ನೇ ವರ್ಷದ ಸತ್ಸಂಗ ಮಹೋತ್ಸವ ಕಾರ್ಯಕ್ರಮದಲ್ಲಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು. ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಗಿರೀಶಾನಂದ ಮಹಾರಾಜರು, ಮನ್ನಿಕೇರಿ ವಿಜಯಮಹಾಂತ ಸ್ವಾಮೀಜಿ, ಹನಮನಹಳ್ಳಿ ಶಿವಾನಂದ ಮಠದ ಶಿವಬಸವ ಸ್ವಾಮೀಜಿ, ಲಮಾಣಿಹಟ್ಟಿ ಯೋಗಾನಂದ ಸ್ವಾಮೀಜಿ, ನಿಪ್ಪಾಣಿಯ ಪ್ರಾಣಲಿಂಗ ಸ್ವಾಮೀಜಿ ಇತರರಿದ್ದರು.
ಹೊರ್ತಿ : ಕನಕನಾಳ ಗ್ರಾಮದ ಔಜಗಿರಿ ಆಶ್ರಮದಲ್ಲಿ 5ನೇ ವರ್ಷದ ಸತ್ಸಂಗ ಮಹೋತ್ಸವವನ್ನು ಔಜೀಕರ ಮಹಾರಾಜರ ಭಾವಚಿತ್ರ ಮತ್ತು ದಾಸಬೋಧ ಪೂಜೆಯನ್ನು ಆಶ್ರಮದ ಗಿರೀಶಾನಂದ ಮಹಾರಾಜರು ಪೂಜೆ ಸಲ್ಲಿಸಿ, 5ನೇ ವರ್ಷದ ಸತ್ಸಂಗ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಧರ್ಮ ನಿಷ್ಠೆ ರಾಜಕಾರಣಿಯಾಗಿ, ನಾನು ಕೂಡ ದೇವರಲ್ಲಿ ಶ್ರದ್ಧಾ, ಭಕ್ತಿ, ಭಾವನೆ ಹೊಂದಿರುವ ಹುರಕಡ್ಲಿ ಅಜ್ಜ ಅವರ ಶಿಷ್ಯನಾಗಿದ್ದೇನೆ ಎಂದರು.
ಕೊ¯್ಲÁಪೂರ ಕನ್ನೇರಿ- ಮಹಾಸಂಸ್ಥಾನ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮನುಷ್ಯ ಜನ್ಮ ಶ್ರೇಷ್ಠವಾದದ್ದು, ಸಾರ್ಥಕ ಜೀವನಕ್ಕೆ ನಾವೆಲ್ಲರೂ ಒಂದು, ನಮ್ಮಲ್ಲಿ ಯಾವುದೇ ಜಾತಿ, ಧರ್ಮ, ಮೇಲು-ಕೀಳು ಇರಬಾರದು ಎಂಬುದನ್ನು ಬಸವಾದಿ ಶರಣರು ಸಾರಿ ಹೇಳಿz್ದÁರೆ. ಅದರ ಪಾಲನೆ ನಾವೆಲ್ಲರೂ ಅನುಸರಿಸಬೇಕು ಎಂದು ಹೇಳಿದರು.
ಗಿರೀಶಾನಂದ ಮಹಾರಾಜರು ಅಧ್ಯಕ್ಷತೆ ವಹಿಸಿದ್ದರು. ಕಾತ್ರಾಳ ಬಾಲಗಾಂವ ಗುರುದೇವಾಶ್ರಮ ಅಮೃತಾನಂದ ಶ್ರೀ ನೇತೃತ್ವ ವಹಿಸಿದ್ದರು.
ಕನ್ನೂರ ಸಂಗಮೇಶ್ವರ ಮಹಾರಾಜರು, ಬುದ್ನಿಯ ಸಿದ್ಧಾನಂದ ಸ್ವಾಮೀಜಿ, ಚಿಕ್ಕಾಲಗುಂಡಿ ಶಿವಶರಣಾನಂದ ಸ್ವಾಮೀಜಿ, ಜೈನಾಪುರದ ಸಿದ್ಧಲಿಂಗ ಸ್ವಾಮೀಜಿ, ಸಿದ್ಧಾಪೂರದ ಅರವಿಂದ ಮಹಾರಾಜರು, ಮಲ್ಲಿಕಾರ್ಜುನ ಲೋಣಿ, ಅಣ್ಣಪ್ಪ ಖೈನೂರ, ಅಮಸಿದ್ಧ ಬಳಗಾನೂರ ಇತರರಿದ್ದರು