ವಿಜಯಪುರ ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್‌ಬಿ ಕಲಾ ಮತ್ತು ಕೆಸಿಪಿ ವಿe್ಞÁನ ಮಹಾವಿದ್ಯಾಲಯದಲ್ಲಿ ವಿಕಸಿತ ಭಾರತ್ ಯುವ ಸಂಪರ್ಕ ಹಾಗೂ ರಾಷ್ಟಿçÃಯ ಕ್ರೀಡಾ ದಿನದ ಅಂಗವಾಗಿ ವಿದ್ಯಾರ್ಥಿಗಳು ನಶಾ ಮುಕ್ತ ಯುವ ಪ್ರತಿe್ಞÉ ಸ್ವೀಕರಿಸಿದರು. ಅನೀಲ ನಾಯಕ, ಪಿ.ಎಸ್. ಪಾಟೀಲ, ಕುಶಾಲ್ ಕಲಗೊಂಡ ಮತ್ತಿತರರಿದ್ದಾರೆ. 
ವಿಜಯಪುರ

ಖೇಲೋ ಇಂಡಿಯಾ ಸಂವಾದ ಕಾರ್ಯಕ್ರಮ

ವಿಜಯಪುರ:

ವಿಕಸಿತ ಭಾರತ್ ಯುವ ಸಂಪರ್ಕ ಹಾಗೂ ರಾಷ್ಟಿçÃಯ ಕ್ರೀಡಾ ದಿನದ ಅಂಗವಾಗಿ ಖೇಲೋ ಇಂಡಿಯಾ ಸಂವಾದ -ಖೇಲï ಕಿ ಬಾತ್ ಪಿಎಂ ಮೋದಿ ಕೆ ಸಾಥ್ ಕಾರ್ಯಕ್ರಮವನ್ನು ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್‌ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಕಾಲೇಜಿನಲ್ಲಿ ನಡೆಯಿತು.

ಕಾಲೇಜಿನ ಎನ್‌ಎಸ್‌ಎಸ್ ಘಟಕ-1 ಮತ್ತು 2 ಹಾಗೂ ಐಕ್ಯೂಎಸಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚುವಲ್ ಭಾಷಣದ ನೇರ ಪ್ರಸಾರ ವೀಕ್ಷಿಸಲಾಯಿತು.
ಪ್ರಧಾನಿ ಮೋದಿ ಅವರು, ಕ್ರೀಡೆ, ಶಿಸ್ತು, ತಂಡದ ಕೆಲಸ ಮತ್ತು ರಾಷ್ಟç ನಿರ್ಮಾಣದಲ್ಲಿ ಯುವಕರ ಪಾತ್ರದ ಕುರಿತು ಯುವ ಜನತೆಗೆ ಕರೆ ನೀಡಿದರು. ಈ ವೇಳೆ ಮೈ ಭಾರತ್ ಉಪಕ್ರಮ, ಯುವ ಸಂವಾದ ವೇದಿಕೆ ಕುರಿತು ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳಿಂದ ನಶಾ ಮುಕ್ತ ಯುವ ಪ್ರತಿe್ಞೆ ಸ್ವೀಕರಿಸಲಾಯಿತು.
ಪ್ರಾಚಾರ್ಯ ಅನೀಲ ನಾಯಕ, ಐಕ್ಯೂಎಸಿ ಸಂಯೋಜಕ ಪಿ.ಎಸ್. ಪಾಟೀಲ, ತಾಲೂಕು ಮಟ್ಟದ ಎನ್‌ಎಸ್‌ಎಸ್ ನೋಡಲ್ ಅಽಕಾರಿ ರಾಜು ಕಪಾಲಿ, ಕಾರ್ಯಕ್ರಮದ ಮಾಡರೇಟರ್ ಕುಶಾಲ್ ಕಲಗೊಂಡ, ಮೈ ಭಾರತ್ ಅಽಕಾರಿ ಗಣೇಶ ರಾಠೋಡ, ರಾಷ್ಟಿçÃಯ ಯುವ ಸ್ವಯಂಸೇವಕ ಅವಿನಾಶ ನಾಯಕ, ಆಲ್ ಇಂಡಿಯಾ ರೇಡಿಯೋ ಜಿ¯್ಲÁ ವರದಿಗಾರ ಎನ್. ಗಂಗಾಧರ, ಕಾಲೇಜಿನ ಎನ್‌ಎಸ್‌ಎಸ್ ಘಟಕದ ಅಽಕಾರಿಗಳಾದ ಮಿಲನ ರಾಠೋಡ, ತರನ್ನುಮ ಜಬೀನ್ ಖಾನ್, ಕೃಷ್ಣ ಮಂಡ್ಲಾ, ಪವನಕುಮಾರ ಮಹೀಂದ್ರಕರ, ಧರಮಗುರು ಪ್ರಸಾದ ಎಂ.ಪಿ. ಶ್ವೇತಾ ಸವಣೂರ ಮತ್ತಿತರರಿದ್ದರು.