ಬಬಲೇಶ್ವರ ತಾಲೂಕಿನ ಮಂಗಳೂರು ಬಳಿ ಕಬ್ಬಿನ ಗದ್ದೆಗೆ ಬಿದ್ದ ಜೆಟ್ ವಿಮಾನ. 
ವಿಜಯಪುರ

ಬಬಲೇಶ್ವರದಲ್ಲಿ ಧರೆಗುರುಳಿದ ಜೆಟ್ ವಿಮಾನ, ಹೇಗಾಯಿತು? ಏನಾಯಿತು ಗೊತ್ತಾ?

ಪ್ರಮುಖ ಮುಖ್ಯಾಂಶಗಳು

  • ಕಬ್ಬಿನ ಗದ್ದೆಗೆ ಬಿದ್ದ ಜೆಟ್ ವಿಮಾನ
  • ಇಂಧನ ಖಾಲಿಯಾಗಿ ಪತನ
  • ಬಬಲೇಶ್ವರ ಮಂಗಳೂರು ಬಳಿ ಅವಘಡ
  • ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು
ವಿಜಯಪುರ: ಇಂಧನ ಖಾಲಿಯಾಗಿ ಹಾರುತ್ತಿದ್ದ ಜೆಟ್ ವಿಮಾನವೊಂದು ಧರೆಗುರುಳಿದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಬಳಿ ನಡೆದಿದೆ.
ಕಲಬುರಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ಸೆಸ್ನಾ ಟ್ಯಾಂಗೋ ಚಾರ್ಲಿ ಎಂಬ ಪ್ರೈವೆಟ್ ಜೆಟ್ ವಿಮಾನ ಕಬ್ಬಿನ ಜಮೀನಿನಲ್ಲಿ ಏಕಾಏಕಿ ಬಿದ್ದಿದೆ. ವಿಮಾನ ನುಜ್ಜುಗುಜ್ಜಾಗಿದೆ. ವಿಮಾನದಲ್ಲಿದ್ದ ಇಬ್ಬರು ಗಾಯಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಬಬಲೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.