ಆಲಮಟ್ಟಿ ಸಮೀಪದ ಮುಕರ್ತಿಹಾಳ, ಹುಣಶ್ಯಾಳ ಪಿ.ಸಿ ಹಾಗೂ ಬೀರಲದಿನ್ನಿ ಪ್ರದೇಶಗಳ ಇಟ್ಟಿಗೆ ಭಟ್ಟಿಗಳ ಮೇಲೆ ಅನಿರೀಕ್ಷಿತ ದಾಳಿನಡೆಸಿ ಕಾರ್ಮಿಕರು ಮತ್ತು ಮಾಲೀಕರಿಗೆ ಬಾಲ ಕಾರ್ಮಿಕ ಕಾಯ್ದೆಯ ಬಿತ್ತಿ ಪತ್ರಗಳನ್ನು ಹಂಚಿ ಅರಿವು ಮೂಡಿಸಿದರು. ಸಲೀಮ ಯಲಗೋಡ, ಆರ್.ಬಿ. ಮಾಶೆಟ್ಟಿ ಮತ್ತಿತರರಿದ್ದರು. 
ವಿಜಯಪುರ

ಬಾಲಕಾರ್ಮಿಕರ ಕೆಲಸಕ್ಕೆ ನೇಮಿಸುವುದು ಕಾನೂನು ಬಾಹಿರ

ಆಲಮಟ್ಟಿ: ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸುವುದು ಕಾನೂನುಬಾಹಿರವಾಗಿದ್ದು, ತಪ್ಪಿತಸ್ಥರಿಗೆ ರೂ.50 ಸಾವಿರದವರೆಗೆ ದಂಡ ಹಾಗೂ 2 ವರ್ಷಗಳವರೆಗೆ ಜೈಲು ಶಿಕ್ಷೆ ವಿಽಸಲಾಗುವುದು ಎಂದು ಕಾರ್ಮಿಕ ನಿರೀಕ್ಷಕ ಐ.ಎಚ್. ಇನಾಂದಾರ್ ಎಚ್ಚರಿಕೆ ನೀಡಿದ್ದಾರೆ.
ಸಮೀಪದ ಮುಕರ್ತಿಹಾಳ, ಹುಣಶ್ಯಾಳ ಪಿ.ಸಿ ಹಾಗೂ ಬೀರಲದಿನ್ನಿ ಪ್ರದೇಶಗಳ ಇಟ್ಟಿಗೆ ಭಟ್ಟಿಗಳ ಮೇಲೆ ಅನಿರೀಕ್ಷಿತ ಸೋಮವಾರ ದಾಳಿ ನಡೆಸಿ ಕಾರ್ಮಿಕರು ಮತ್ತು ಮಾಲೀಕರಿಗೆ ಬಾಲ ಕಾರ್ಮಿಕ ಕಾಯ್ದೆ ಕುರಿತು ಬಿತ್ತಿ ಪತ್ರಗಳನ್ನು ಹಂಚಿ ಅರಿವು ಮೂಡಿಸಿದರು.
ಐ.ಎಚ್. ಇನಾಂದಾರ್ ಮಾತಾನಾಡಿ, 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕೆಲಸದಲ್ಲಿ ನೇಮಿಸುವುದು ಸಂಪೂರ್ಣ ನಿಷೇಽತವಾಗಿದೆ. 14 ರಿಂದ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಕೆಲಸಗಳಲ್ಲಿ ನೇಮಿಸುವುದು ಕಾನೂನು ಬಾಹಿರವಾಗಿದ್ದು, ಕಾಯ್ದೆ ಉಲ್ಲಂöಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಂದಾಯ ನಿರೀಕ್ಷಕÀ ಸಲೀಮ ಯಲಗೋಡ, ಆರೋಗ್ಯಾಽಕಾರಿ ಆರ್.ಬಿ. ಮಾಶೆಟ್ಟಿ, ತಾಲೂಕು ಪಂಚಾಯತಿ ಅಽಕಾರಿಗಳು, ಪೊಲೀಸ್ ಸಿಬ್ಬಂದಿ ಕುಂಬಾರ ಹಾಗೂ ಕಾರ್ಮಿಕ ಇಲಾಖೆಯ ಸಿಬ್ಬಂದಿ ಅನಿಲï ಸುಭಾಂಜಿ ಉಪಸ್ಥಿತರಿದ್ದರು.
ಬಾಲಕಾರ್ಮಿಕತೆ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ಎಲ್ಲಿಯಾದರೂ ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿರುವುದು ಕಂಡುಬAದಲ್ಲಿ ತಕ್ಷಣ ಸಂಬAಽತ ಇಲಾಖೆಗೆ ಮಾಹಿತಿ ನೀಡುವಂತೆ ಅಽಕಾರಿಗಳು ಮನವಿ ಮಾಡಿದ್ದಾರೆ.