ಲೋಕಾಪುರದ ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆ ಪಾಲಕರ ಸಭೆಯಲ್ಲಿ ಯಲ್ಲಟ್ಟಿಯ ಕೊಣ್ಣೂರು ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಬಸವರಾಜ ಕೊಣ್ಣೂರ ಅವರನ್ನು ಎಸ್.ಎಂ. ರಾಮದುರ್ಗ ಹಾಗೂ ಶಿಕ್ಷಕ ವೃಂದ ಸನ್ಮಾನಿಸಿದರು. 
ವಿಜಯಪುರ

ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವು ಮುಖ್ಯವಾಗಿದೆ. ಶೈಕ್ಷಣಿಕವಾಗಿ ವಿದ್ಯಾರ್ಥಿಗಳನ್ನು ಸದೃಢರನ್ನಾಗಿ ಬೆಳೆಸುವುದರ ಜೊತೆಯಲ್ಲಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವುದು ಅಗತ್ಯವಾಗಿದೆ ಎಂದು ಯಲ್ಲಟ್ಟಿಯ ಕೊಣ್ಣೂರು ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಬಸವರಾಜ ಕೊಣ್ಣೂರ ಹೇಳಿದರು.
ಪಟ್ಟಣದ ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆ ಜಾಡರ ಅರಳಿಕಟ್ಟಿ-ಲೋಕಾಪುರ ಶಾಲೆಯಲ್ಲಿ ಪಾಲಕರ ಸಭೆ ನಡೆಯಿತು.
ವಿದ್ಯಾ ಚೇತನ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಎಸ್.ಎಂ. ರಾಮಮರ್ಗ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ವಿವೇಕ ಮರಾಠಿ, ಶಿಕ್ಷಕರಾದ ಗಂಗಾ ಸಕ್ರಿ, ಚಿದಾನಂದ ಮುಂಡಾಸದ, ಬಿ.ಬಿ. ಹಾದಿಮನಿ. ಯಶೋಧಾ ಮರಾಠಿ, ಶಿಲ್ಪಾ ಗೌಡ, ಶಶಿಕಲಾ ವಾಟೀಲ, ಎಂ.ಬಿ. ಮುಜಾವರ, ಸರಸ್ವತಿ ಮಾದರ, ಗೀತಾ ನಾಯಕ, ಮಂಜುಳಾ ಪಾಟೀಲ, ಗಂಗಾ ಸಗರಿ, ಸುರೇಶ ಮರಾಠಿ, ವೆಂಕಟರಮಣ ಗೌಡ, ವಾಂಡುರಂಗ ಮುಗಳೊಳ್ಳಿ. ಮಲ್ಲೇಶ ಹಲಗಲಿ, ರಾಜೇಶ್ವರಿ ಗಂಗಣ್ಣವರ ಇತರರಿದ್ದರು.