ಸದ್ಗುರು ಸಮರ್ಥ ರಂಗರಾವ ಮಹಾರಾಜರ ಧ್ಯಾನ ಮಂದಿರ
- ವಾಸ್ತು ಶಾಂತಿ ಮತ್ತು ಕಲಶಾರೋಹಣ ಕಾರ್ಯಕ್ರಮ
- ಜ್ಞಾನಿಗಳಿಂದ ಪ್ರವಚನ ಕಾರ್ಯಕ್ರಮ
ವಿಜಯಪುರ: ಇಲ್ಲಿನ ಜಮಖಂಡಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಸದ್ಗುರು ಸಮರ್ಥ ರಂಗರಾವ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಧ್ಯಾನ ಮಂದಿರ, ವಾಸ್ತು ಶಾಂತಿ ಮತ್ತು ಕಲಶಾರೋಹಣ ಕಾರ್ಯಕ್ರಮ ಏ. 10 ರಿಂದ ಏ. 12ರವರೆಗೆ ಅದ್ದೂರಿಯಾಗಿ ನಡೆಯಲಿದೆ.
ಏ. 10ರಂದು ಬೆಳಗ್ಗೆ 7 ಗಂಟೆಗೆ ನಗರದ ಮುರಾಣಕೇರಿಯ ರಂಗರಾವ ಅವರ ನಿವಾಸದಿಂದ ಸಕಲ ವಾದ್ಯಗಳೊಂದಿಗೆ ರಂಗರಾವ ಮಹಾರಾಜರ ದಿವ್ಯ ಮೂರ್ತಿ ಹಾಗೂ ಪೂರ್ಣಕುಂಭ ಕಲಶ, ಭವ್ಯ ದಿಂಡಿ ಪಾದಯಾತ್ರೆ ಹೊರಟು ಜಮಖಂಡಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿದ ಧ್ಯಾನ ಮಂದಿರಕ್ಕೆ ತಲುಪಲಿದೆ. ಬೆಳಗ್ಗೆ 11.15 ಗಂಟೆಗೆ ಸಂತಪರಿ ಸಾಂಪ್ರದಾಯಿಕ ಭಜನೆ, ನಂತರ ಜ್ಞಾನಿಗಳಿಂದ ಪ್ರವಚನ ಕಾರ್ಯಕ್ರಮ ಜರುಗಲಿದೆ.
ಶಹಾಪೂರದ ಏಕದಂಡಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ, ಯಾದಗಿರಿ ಏಕದಂಡಗಿ ಮಠದ ಸುರೇಂದ್ರ ಸ್ವಾಮೀಜಿ, ವಿಜಯಪುರದ ಮೂರುಝಾವದ ಮಠದ ಮಹೇಂದ್ರ ಸ್ವಾಮೀಜಿ, ಅಳ್ಳಳ್ಳಿ ಗದ್ದುಗೆಮಠದ ನಾಗಪ್ಪಯ್ಯ ಸ್ವಾಮೀಜಿ ಸಾನ್ನಿಧ್ಯ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ಮೂರುಝಾವದ ಮಠದ ನಾಗೇಂದ್ರ ಸ್ವಾಮೀಜಿ ಅಧ್ಯಕ್ಷತೆ ಹಾಗೂ ಕನ್ನೂರ ಶಾಂತಿ ಕುಟೀರದ ಶ್ರೀಕೃಷ್ಣ ಸಂಪಗಾಂವಕರ ಗುರೂಜಿ, ಕೈವಲ್ಯ ಕುಟೀರದ ಪ್ರಣವ ಪ್ರಕಾಶ ಮಹಾರಾಜರು ಮತ್ತು ಬೆಂಗಳೂರಿನ ಪಿರಾಮಿಡ್ ಧ್ಯಾನ ಮಂದಿರದ ಗೂರೂಜಿಗಳಾದ ಮುತ್ತುರಾಜ ಕಲಬುರ್ಗಿ ಉಪಸ್ಥಿತಿ ವಹಿಸುವರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಡಾ. ಎಂ.ಬಿ. ಪಾಟೀಲ, ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ವಿಠ್ಠಲ ಕಟಕಟಧೋಂಡ, ಜಿಲ್ಲಾಧಿಕಾರಿ ಡಾ. ಆನಂದ ಕೆ., ಎಸ್‌ಪಿ ಲಕ್ಷ್ಮಣ ನಿಂಬರಗಿ, ಸುಜ್ಞಾನ ಮೂರ್ತಿ, ಮೇಯರ್ ಎಂ.ಎಸ್. ಕರಡಿ, ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ ಮತ್ತು ಶಿವರುದ್ರ ಬಾಗಲಕೋಟ ಆಗಮಿಸುವರು.
ಅಂದೇ ಸಂಜೆ ಮಹಾಗಣಪತಿ ಪೂಜೆ, ಪುಣ್ಯಾಹವಾಚನ, ಸರ್ಸಪ ವಿಕಿರಣ, ರಾಕ್ಷೋಘ್ನ ಹೋಮ, ಜಲಾಧಿವಾಸ, ಮಂಗಳಾರತಿ ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಜರುಗಲಿದೆ.
ಏ. 11ರಂದು ಬೆಳಗ್ಗೆ 10 ಗಂಟೆಗೆ ಗುರು ಗಣಪತಿ ಪೂಜಾ ಪುಣ್ಯಹವಾಚನ ಮಾತೃತಾಪೂಜಾ, ದೇವನಾಂದೀ, ನವಗ್ರಾದಿ ವಾಸ್ತು ಪ್ರಧಾನ, ಕಲಶ ಸ್ಥಾಪನೆ ಅಗ್ನಿ ಪ್ರತಿಷ್ಟಾಪನೆ, ಕ್ಷೀರಾಧಿವಾಸ ನವಗ್ರಾದಿ ವಾಸ್ತು ಪ್ರಧಾನ ದೇವತಾ ಹೋಮ ತತ್ವನ್ಯಾಸಾದಿ ಕಲಾಹೋಮ ದಾನ್ಯಾದಿವಾಸ ಮಂತ್ರಪುಷ್ಟ ನಡೆಯಲಿವೆ. ಬೆಳಗ್ಗೆ 10.30 ಗಂಟೆಗೆ ಸಂತಪರಿ ಸಂಪ್ರದಾಯಿಕ ಭಜನೆ ಜರುಗಲಿದೆ.
ಬೆಳಗ್ಗೆ 11.45 ಗಂಟೆಗೆ ಪ್ರವಚನ ಜರುಗಲಿದ್ದು, ಶಿವಸುಜ್ಞಾನತೀರ್ಥ ಸ್ವಾಮೀಜಿ, ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ, ಪ್ರಣವಾನಂದ ಸ್ವಾಮೀಜಿ, ವೀರ ರಾಘವ ಶರ್ಮಾ ಸಾನ್ನಿಧ್ಯ ವಹಿಸುವರು. ಪ್ರಣವ ಪ್ರಕಾಶ ಮಹಾರಾಜರು ಅಧ್ಯಕ್ಷತೆ ಮತ್ತು ಕೃಷ್ಣ ಸಂಪಗಾಂವಕರ ಗುರೂಜಿ, ಶಶಿಕಾಕಾ (ಶಶಿಕಾಂತ) ಗಂಗಾರಾಮ ಅಟ್ಲೆ ಉಪಸ್ಥಿತಿ ವಹಿಸುವರು.
ಮುಖ್ಯ ಅತಿಥಿಗಳಾಗಿ ಅಯೋಧ್ಯೆ ರಾಮ ಮಂದಿರದ ಕೇಂದ್ರೀಯ ಕಾರ್ಯದರ್ಶಿ ಗೋಪಾಲಜೀ, ಸಂಸದ ರಮೇಶ ಜಿಗಜಿಣಗಿ, ಕೃಷಿ ಮಾರುಕಟ್ಡೆ ಸಚಿವ ಶಿವಾನಂದ ಪಾಟೀಲ, ಮುಖಂಡ ವಿಜುಗೌಡ ಪಾಟೀಲ, ನಾಗಪ್ಪ ಗುಗ್ಗರಿ ಆಗಮಿಸುವರು. ಸಂಜೆ ಆವಾಹಿತ ದೇವತಾಪೂಜಾ, ವೇದಪಾರಾಯಣ, ಪ್ರಾಕಾರಶುದ್ಧಿ, ಬಲಿಹರಣ, ಶಯ್ಯಧೀವಾಸ, ಮಂಗಳಾರತಿ, ಮಂತ್ರಪುಷ್ಪ ನಂತರ ಸಾಂಪ್ರದಾಯಿಕ ಭಜನೆ ನಡೆಯಲಿವೆ.
ಏ. 12 ರಂದು ಬೆಳಗ್ಗೆ 6.50 ರಿಂದ ಪ್ರಾಣ ಪ್ರತಿಷ್ಠಾಪನಾ ನೇತ್ರೋನ್ಮಿಲನ, ಕದಳಿಛೇದನ, ಧೇನುದರ್ಶನ, ಮೂರ್ತಿಹೋಮ, ಪ್ರಾಣಪ್ರತಿಷ್ಠಾಪನಾ ಹೋಮ, ಕಲಶಾರೋಹಣ, ಜಯಾದಿ ಪ್ರಾಯಶ್ಚಿತಹೋಮ, ಪಂಚಾಮೃತ ಅಭಿಷೇಕ, ಅಲಂಕಾರ ಪೂಜಾ, ಪೂರ್ಣಾಹುತಿ ಮಹಾಮಂಗಳಾರತಿ ತೀರ್ಥಪ್ರಸಾದ ವಿತರಣೆ ನಡೆಯಲಿದೆ.
ಬೆಳಗ್ಗೆ 11.45 ಗಂಟೆಗೆ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಡ್ಡನಹಾಳ ಜಗದ್ಗುರು ವಿಶ್ವಕರ್ಮ ಮಹಾಸಂಸ್ಥಾನ ಸಾವಿತ್ರಿ ಪೀಠ, ಕಾಶೀಮಠದ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ, ರಾಜರಾಜೇಶ್ವರ ಚೈತನ್ಯ ಸ್ವಾಮೀಜಿ, ಬ್ರಹ್ಮಾನಂದ ಸ್ವಾಮೀಜಿ, ವಿಶ್ವನಾಥ ಚಕ್ರವರ್ತಿ ಗುರುಗಳು, ಗುರುವರ್ಯ ಗೋಪಾಲ (ಅಣ್ಣಾ), ಕೃಷ್ಣ ಸಂಪಗಾಂವಕರ ಗುರೂಜಿ, ಸಂಗಮೇಶ ಮಹಾರಾಜರು ಸಾನ್ನಿಧ್ಯ ಹಾಗೂ ತಾಳಿಕೋಟಿ ಖಾಸ್ಗತೇಶ್ವರ ವಿರಕ್ತಮಠದ ಸಿದ್ಧಲಿಂಗ ದೇವರು ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಪುಂಡಲೀಕ ಬಡಿಗೇರ, ಚಂದ್ರಶೇಖರ ಕವಟಗಿ, ಸಂಗಮೇಶ ಬಬಲೇಶ್ವರ ಆಗಮಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.