ವಿಜಯಪುರದ ಎಸ್.ಎಸ್. `ಎ' ಪ್ರೌಢ ಶಾಲೆಗೆ ಭಾರತ ಸ್ಕೌಟ್ಸ್ ಮತ್ತು ಗೈq್ಸï ಕರ್ನಾಟಕ ರಾಜ್ಯದ ಪದಾಽಕಾರಿಗಳು ಭೇಟಿ ನೀಡಿದರು. ಜಿ.ಬಿ. ಮನ್ನಿಕೇರಿ, ಮಂಜುಳಾ ಸಿ., ಸಿದ್ದಪ್ಪ ಕೂಡವಕ್ಕಲಿಗ ಮತ್ತಿತರರಿದ್ದಾರೆ. 
ವಿಜಯಪುರ

ಸ್ಕೌಟ್, ಗೈಡ್ ಕಾರ್ಯ ಚಟುವಟಿಕೆಗಳ ಪರಿಶೀಲನೆ

ವಿಜಯಪುರ : ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್.ಎಸ್. `ಎ' ಪ್ರೌಢ ಶಾಲೆಗೆ ಭಾರತ ಸ್ಕೌಟ್ಸ್ ಮತ್ತು ಗೈq್ಸï ಕರ್ನಾಟಕ ರಾಜ್ಯದ ಪದಾಽಕಾರಿಗಳು ಇತ್ತೀಚೆಗೆ ಭೇಟಿ ನೀಡಿ, ಶಾಲೆಯ ಸ್ಕೌಟ್ ಮತ್ತು ಗೈಡ್ ಘಟಕದ ಕಾರ್ಯ ಚಟುವಟಿಕೆಗಳ ಕುರಿತು ಪರಿಶೀಲನೆ ನಡೆಸಿದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ಡಿಸಿಸಿ ಜಿ.ಬಿ. ಮನ್ನಿಕೇರಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈq್ಸï ಚಳವಳಿಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಸೇವಾ ಮನೋಭಾವ, ನಾಯಕತ್ವ ಗುಣ, ಸಮಯ ಪಾಲನೆ ಹಾಗೂ ದೇಶ ಪ್ರೇಮವನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ ಎಂದರು.
ಭಾರತ ಸ್ಕೌಟ್ಸ್ ಮತ್ತು ಗೈq್ಸï ರಾಜ್ಯ ಸಂಘಟನಾ ಆಯುಕ್ತೆ (ಗೈq್ಸï) ಮಂಜುಳಾ ಸಿ. ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ಕೌಟ್ ಮತ್ತು ಗೈಡ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಭಾರತ ಸ್ಕೌಟ್ಸ್ ಮತ್ತು ಗೈq್ಸï ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸಿ.ಎಸ್. ಸಾವಳಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ತಂಡದ ಮನೋಭಾವ, ಪರಿಸರ ಸಂರಕ್ಷಣೆ, ಸ್ವಚ್ಛತೆ, ವಿಪತ್ತು ನಿರ್ವಹಣೆ ಹಾಗೂ ಸಾಮಾಜಿಕ ಜವಾಬ್ದಾರಿಯಂತಹ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಅಗತ್ಯತೆ ಕುರಿತು ತಿಳಿಸಿದರು.
ಮುಖ್ಯ ಗುರು ಸಿದ್ದಪ್ಪ ಕೂಡವಕ್ಕಲಿಗ ಮತ್ತಿತರರಿದ್ದರು.