ಸಿಂದಗಿ ನಗರದಲ್ಲಿನ ಪಿಇಎಸ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಾತೃವಂದನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ತಂದೆ-ತಾಯAದಿರ ಪಾದಪೂಜೆ ಮೂಲಕ ಗೌರವಿಸಿದರು. ವಿಶ್ರಾಂತ ಉಪನ್ಯಾಸಕ ಪ್ರೊ. ಶಾಂತೂ ಹಿರೇಮಠ, ಪ್ರೊ. ಚಂದ್ರಶೇಖರ ವಸ್ತçದ, ಅಫಜಲಪುರ ಹಿರೇಮಠದ ಷ.ಬ್ರ. ಮಳೇಂದ್ರ ಶಿವಾಚಾರ್ಯರು, ಹಿರಿಯ ಉಪನ್ಯಾಸಕ ಎಸ್.ವೈ. ಬೀಳಗಿ ಮತ್ತಿತರರಿದ್ದರು. 
ವಿಜಯಪುರ

ಭಾರತೀಯರ ಸಂಸ್ಕೃತಿ ವಿಶ್ವಕ್ಕೆ ಮಾದರಿ

ಸಿಂದಗಿ: ಹೆಣ್ಣನ್ನು ಪೂಜಿಸುವ, ಗೌರವಿಸುವ ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ವಿಶ್ರಾಂತ ಉಪನ್ಯಾಸಕ ಪ್ರೊ. ಶಾಂತೂ ಹಿರೇಮಠ ಹೇಳಿದರು.
ನಗರದ ಆಲಮೇಲ ರಸ್ತೆಯಲ್ಲಿನ ಪಿಇಎಸ್ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾತೃ ವಂದನಾ ಹಾಗೂ ವಾರ್ಷಿಕ ಸಮ್ಮಿಲನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳೆಲ್ಲರೂ ತಮ್ಮ ತಂದೆ-ತಾಯಿ ಸೇರಿ ಕುಟುಂಬದ ಹಿರಿಯರಿಗೆ ಗೌರವ ತೋರಬೇಕು. ಈ ದಿಸೆಯಲ್ಲಿ ಪಿಇಎಸ್ ಕಾಲೇಜು ಮಾತೃವಂದನೆ ಮೂಲಕ ಹೊಸದಾದ ಹೆಜ್ಜೆಯನ್ನಿಟ್ಟು ಮಾದರಿ ಕಾಲೇಜು ಆಗಿದೆ. ವಿದ್ಯಾರ್ಥಿ ಸದಾ ಜ್ಞಾನದಾಹಿ, ಶಿಸ್ತು, ಸಂಯಮ ರೂಢಿಸಿಕೊಂಡು ಶೈಕ್ಷಣಿಕ ಸಾಧನೆ ತೋರಬೇಕು ಎಂದು ಸಲಹೆ ನೀಡಿದರು
ಗದುಗಿನ ಹಿರಿಯ ಸಾಹಿತಿ, ನಾಟಕಕಾರ ಪ್ರೊ. ಚಂದ್ರಶೇಖರ ವಸ್ತçದ ಮಾತನಾಡಿ, ದೈವ, ದೇವರು ಎನ್ನುವದಕ್ಕಿಂತಲೂ ಮನೆಯ ಮಾತೆಯೇ ದೇವರು ಎಂಬುದನ್ನು ನಾವುಗಳು ಮರೆಯಬಾರದು. ಆಗಲೇ ಈ ಭಾವಪೂರ್ಣ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು.
ಅಫಜಲಪುರ ಹಿರೇಮಠದ ಷ.ಬ್ರ. ಮಳೇಂದ್ರ ಶಿವಾಚಾರ್ಯರು, ಹಿರಿಯ ಉಪನ್ಯಾಸಕ ಎಸ್.ವೈ. ಬೀಳಗಿ ಮಾತನಾಡಿದರು.
ಸಂಸ್ಥೆ ಕಾರ್ಯದರ್ಶಿ ಬಿ.ಪಿ. ಕರ್ಜಗಿ, ಮಾರ್ಗದರ್ಶಕ ಕೆ.ಎಚ್. ಸೋಮಾಪೂರ, ಆಡಳಿತಾಽಕಾರಿ ಐ.ಬಿ. ಬಿರಾದಾರ, ಪ್ರೇಮಾ ಕರ್ಜಗಿ, ಡಾ. ಅಶ್ವಿನಿ ಕರ್ಜಗಿ, ಶಕುಂತಲಾ ಬಿರಾದಾರ, ಪ್ರಾಚಾರ್ಯ ಆರ್.ಬಿ. ಗೋಡ್ಕರ, ವಿದ್ಯಾರ್ಥಿ ಪ್ರತಿನಿಽ ಕು. ಶಾಹಿನ ಮುಲ್ಲಾ, ಪ್ರಾಚಾರ್ಯ ಜಿ.ಎಸ್. ಕಡಣಿ, ಪ್ರೊ. ಆರ್.ಎಸ್. ಧರಿಗೊಂಡ, ಪ್ರೊ. ರಾಜು ಯಂಕAಚಿ, ಪ್ರೊ. ಅಮೀರ್ ಮೋಪಗಾರ ಮತ್ತಿತರರಿದ್ದರು.
ನೂರಾರು ವಿದ್ಯಾರ್ಥಿಗಳ ತಂದೆ-ತಾಯಿಗಳು ಹಾಗು ಪೋಷಕರು ಮಕ್ಕಳಿಂದ ಮಾತೃವಂದನೆ ಪೂಜಾವಿಽ ಸ್ವೀಕರಿಸಿ, ಶುಭಾಶೀರ್ವದಿಸಿದರು.