ವಿಜಯಪುರದಲ್ಲಿ ನೂತರನವಾಗಿ ಆರಂಭಿಸಿದ ಮೆಡ್‌ಚಿಕಿತ್ಸಾ ಡೈಗ್ನೋಸ್ಟಿಕ್ ಹೆಲ್ತಕೇರ್‌ನ ಮುಖ್ಯ ದ್ವಾರವನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು. ಕೇಂದ್ರದ ಅಧ್ಯಕ್ಷ ರಾಜು ಬಿಜ್ಜರಗಿ ಮತ್ತಿತರರಿದ್ದಾರೆ. 
ವಿಜಯಪುರ

ನೂತನ ಮೇಡ್ ಚಿಕಿತ್ಸಾ ಕೇಂದ್ರದ ವಿವಿಧ ಘಟಕಗಳ ಉದ್ಘಾಟನೆ

ವಿಜಯಪುರ: ನಗರದ ಹೊಸ ವಿಠ್ಠಲ ಮಂದಿರ ರಸ್ತೆಯಲ್ಲಿನ ಮಿಲನ ಕಮರ್ಶಿಯಲ್ ಕಾಂಪ್ಲೆಕ್ಸ್ನಲ್ಲಿ ಭಾನುವಾರ ನೂತನ ಮೆಡ್‌ಚಿಕಿತ್ಸಾ ಡೈಗ್ನೋಸ್ಟಿಕ್ ಹೆಲ್ತಕೇರ್‌ನ ವಿವಿಧ ಘಟಕಗಳ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆಯಿತು.
ಸಾನ್ನಿಧ್ಯಯ ವಹಿಸಿದ್ದ ಯರನಾಳ-ಉಕ್ಕಲಿ ಸಂಸ್ಥಾನ ವಿರಕ್ತಮಠದ ಗುರುಸಂಗನ ಬಸವ ಸ್ವಾಮೀಜಿ ಆಶೀರ್ವಚನ ನೀಡಿ, ಬೆಂಗಳೂರು, ಬೆಳಗಾವಿ, ಧಾರವಾಡ ಸೇರಿ ವಿವಿಧ ನಗರದಲ್ಲಿ ವೈದ್ಯಕೀಯ ಸಂಶೋಧನೆಯ ಸೌಲಭ್ಯ ಪಡೆಯುವ ಹಾಗೇ ಸದ್ಯ, ವಿಜಯಪುರ ನಗರದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಕೆಲವೇ ದಿನಗಳಲ್ಲಿ ಬೃಹತ್ ಪ್ರಮಾಣದ ವಿವಿಧ ರೋಗದ ಪ್ರಯೋಗಾಲಯಗಳು ಪ್ರಾರಂಭಗೊಳ್ಳುತ್ತಿವೆ. ಸಾರ್ವಜನಿಕರು ಗುಣಮಟ್ಟದ ತಪಾಸಣೆಗಾಗಿ ನೆರೆಯ ಮಹಾರಾಷ್ಟçದ ಜಿಲ್ಲೆಗಳನ್ನು ಅವಲಂಬಿಸಿರುವುದು ಗಮನಿಸಿ, ನಗರದಲ್ಲಿಯೇ ಮೇಡ್ ಚಿಕಿತ್ಸಾ ಕೇಂದ್ರ ಪ್ರಾರಂಭಿಸಿರುವ ಕಾರ್ಯ ಶ್ಲಾಘನಾರ್ಹ ಎಂದರು.
ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಪ್ರಥಮ ದ್ವಾರದ ಬಾಗಿಲು ಉದ್ಘಾಟಿಸಿ, ಮನುಷ್ಯನಿಗೆ ಸಂಪತ್ತು ಮುಖ್ಯವಲ್ಲ. ಬದಲಾಗಿ ಆರೋಗ್ಯ ಮುಖ್ಯ. ಕೇಂದ್ರದ ಸಿಬ್ಬಂದಿಗೆ ರೋಗಿಗಳು ತಪಾಸಣೆಗೆ ಬಂದಾಗ ಸಹನೆ, ಪ್ರೀತಿಯಿಂದ ವರ್ತಿಸುವ ಮೂಲಕ ಸಹಕರಿಸುವಂತೆ ಸಲಹೆ ನೀಡಿದರು.
ಕೇಂದ್ರದ ಅಧ್ಯಕ್ಷ ರಾಜು ಬಿಜ್ಜರಗಿ ಮತ್ತಿತರರಿದ್ದರು.