ವಿಜಯಪುರದ ಬಿಎಲ್‌ಡಿಇ ಡೀಮ್ಡ್ ವಿವಿಯ ಕಾನೂನು ಶಾಲೆಯಲ್ಲಿ ಅಂತಾರಾಷ್ಟಿçÃಯ ಮಹಿಳಾ ದಿನದಂಗವಾಗಿ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಸಿಂಧು ಪೋತದಾರ, ರಘುವೀರ ಕುಲಕರ್ಣಿ ಮತ್ತಿತರರಿದ್ದಾರೆ. 
ವಿಜಯಪುರ

ಸಾಧನೆಗೈದ ಮಹಿಳೆಯರಿಗೆ ಸನ್ಮಾನ

ವಿಜಯಪುರ: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸೋಮವಾರ ನಗರದ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಕಾನೂನು ಮಹಾವಿದ್ಯಾಲಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸೆ ನ್ಯಾಯಾಧಿಶೆ ಸಿಂಧು ಪೋತದಾರ ಮಾತನಾಡಿ, ಮಹಿಳೆಯರು ಸಮಸ್ಯೆಗಳಿಗೆ ಧೃತಿಗೆಡದೇ ಧೈರ್ಯದಿಂದ ಮುನ್ನಡೆದು, ಪ್ರತಿಯೊಂದು ಕ್ಷೇತ್ರದಲ್ಲೂ ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು ಎಂದ ಸಲಹೆ ನೀಡಿ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನು ಸನ್ಮಾನಿಸುವ ಈ ಪ್ರಯತ್ನ ಶ್ಲಾಘನಾರ್ಹ ಎಂದರು.
ಪ್ರಾಚಾರ್ಯ ಡಾ. ರಘುವೀರ ಕುಲಕರ್ಣಿ ಮಾತನಾಡಿದರು. ಮಹಿಳಾ ಸಂಘದ ಸಂಯೋಜಕಿ ಸನಾ ಕೌಸರ ಮೊಗಲಾಯಿ ಮತ್ತಿತರರಿದ್ದರು.