ವಿಜಯಪುರ ಹೊರ ವಲಯದ ಅರಕೇರಿಯಲ್ಲಿ ಎಸ್‌ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಿಂದ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಹಿರಿಯ ಪಶುವೈದ್ಯಾಽಕಾರಿ ಡಾ. ವಸಂತಕುಮಾರ ಮೂಲಿಮನಿ ಅವರನ್ನು ಸನ್ಮಾನಿಸಲಾಯಿತು. ಮಿಲನ ರಾಠೋಡ, ತರನ್ನುಮ್ ಜಬೀನ್ ಖಾನ್, ಕೃಷ್ಣಾ ಮಂಡ್ಲಾ ಮತ್ತಿತರರಿದ್ದಾರೆ. 
ವಿಜಯಪುರ

ಪಶುಪಾಲನೆಯಲ್ಲಿ ಅಧಿಕ ಲಾಭ

ವಿಜಯಪುರ: ಬಿಎಲ್‌ಡಿಇ ಸಂಸ್ಥೆಯ ಎಸ್‌ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ ಘಟಕ ೧ ಮತ್ತು ೨ ರ ಸಹಯೋಗದಲ್ಲಿ ನಗರ ಹೊರ ವಲಯದ ಅರಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ನಡೆಯಿತು.
ಮುಖ್ಯ ಅತಿಥಿ ಕೂಡಗಿಯ ಪಶುವೈದ್ಯಕೀಯ ಆಸ್ಪತ್ರೆಯ ಹಿರಿಯ ಪಶುವೈದ್ಯಾಽಕಾರಿ ಡಾ. ವಸಂತಕುಮಾರ ಮೂಲಿಮನಿ ಮಾತನಾಡಿ, ಪಶುಪಾಲನೆ ಒಂದು ಪ್ರಮುಖ ಉದ್ಯಮವಾಗಿದೆ. ವೃತ್ತಿಕೌಶಲ ಕರಗತ ಮಾಡಿಕೊಳ್ಳುವ ಅದರಲ್ಲಿ ಹೆಚ್ಚಿನ ಲಾಭ ಪಡೆಯಬಹುದಾಗಿದೆ.
ಸ್ಥಳೀಯ ಪ್ರಾಣಿಗಳನ್ನು ಸಾಕುವುದು ಅಲ್ಲದೆ ಅವುಗಳ ಅಗತ್ಯತೆ ಮತ್ತು ಲಾಭಗಳು, ಉದ್ಯಮಶೀಲತೆ ಮತ್ತು ಪಶುವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಿ, ಜಾಗೃತಿ ಮೂಡಿಸಿದರು.
ಎನ್‌ಸಿಸಿ ಅಧಿಕಾರಿ ರಾಮಚಂದ್ರ ನಾಯಕ ಮಾತನಾಡಿ, ಸ್ವಯಂಸೇವಕರ ಮೊದಲ ಜವಾಬ್ದಾರಿ ಶಿಸ್ತು. ಸ್ವಯಂಸೇವಕರು ಎನ್‌ಸಿಸಿ ಜವಾಬ್ದಾರಿಗಳು, ಕರ್ತವ್ಯ ಮತ್ತು ಪ್ರಾಮುಖ್ಯ ಬಗ್ಗೆ ತಿಳಿಸಿದರು.
ಶಾಲೆಯ ಆವರಣದಲ್ಲಿ ಸಸಿ ನೆಟ್ಟು ಹಸಿರಿನ ಸಂಕಲ್ಪ ಮೂಡಿಸಲಾಯಿತು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಎನ್‌ಎಸ್‌ಎಸ್ ಅಽಕಾರಿಗಳಾದ ಮಿಲನ ರಾಠೋಡ, ತರನ್ನುಮ್ ಜಬೀನ್ ಖಾನ್, ಕೃಷ್ಣಾ ಮಂಡ್ಲಾ ಮತ್ತಿತರರಿದ್ದರು.