ಮುದ್ದೇಬಿಹಾಳ ತಾಲೂಕಿನ ರಕ್ಕಸಗಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಕಾರಕೂರ, ಬಲದಿನ್ನಿ, ರಕ್ಕಸಗಿ, ಹುನಕುಂಟಿ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು. ಸಂಗಣ್ಣ ನಾಡಗೌಡ, ಪೃಥ್ವಿರಾಜ್ ನಾಡಗೌಡ ಮತ್ತಿತರರಿದ್ದರು.
ಮುದ್ದೇಬಿಹಾಳ: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ರಾಜ್ಯದ ಜನರ ಆರ್ಥಿಕ ಬೆಳವಣಿಗೆಗೆ ಶಕ್ತಿ ನೀಡುತ್ತಿದೆ ಎಂದು ಕೆಎಸ್‌ಡಿಎಲ್ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್. ನಾಡಗೌಡ ಹೇಳಿದರು.
ತಾಲೂಕಿನ ರಕ್ಕಸಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಕಾರಕೂರ, ಬಲದಿನ್ನಿ, ರಕ್ಕಸಗಿ, ಹುನಕುಂಟಿ ಗ್ರಾಮಗಳಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ವಿರೋಧ ಪಕ್ಷ ಎಷ್ಟೇ ಟೀಕೆ ಮಾಡಿದರೂ, ಇಡೀ ದೇಶದಲ್ಲೇ ಕರ್ನಾಟಕ ರಾಜ್ಯದ ಆರ್ಥಿಕ ವ್ಯವಸ್ಥೆ ಎರಡನೇ ಸ್ಥಾನದಲ್ಲಿದೆ. ಕರ್ನಾಟಕ ಆರ್ಥಿಕತೆಯಲ್ಲಿ ಸದೃಢವಾಗಿದೆ ಎಂದು ಹೇಳಿ, ಮುದ್ದೇಬಿಹಾಳ ತಾಲೂಕಿನಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಸರ್ಕಾರ ೧೨೨ ಕೋಟಿ ರೂ. ಭರಿಸಿದೆ. ಗೃಹಲಕ್ಷಿ÷್ಮÃ ಯೋಜನೆಯಡಿ ಮಹಿಳೆಯರ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತಿದ್ದು, ಇದು ಅವರ ಸ್ವಾಭಿಮಾನದ ಬದುಕಿಗೆ ದಾರಿಯಾಗಿದೆ," ಎಂದರು.
ಹಿAದಿನ ಬಿಜೆಪಿ ಸರ್ಕಾರದÀ ವಿರುದ್ಧ ಕಿಡಿಕಾರಿದ ಶಾಸಕ ನಾಡಗೌಡರು, ಕೇವಲ ಸಿಸಿ ರಸ್ತೆ ಮಾಡಿದರೆ ಅದು ಅಭಿವೃದ್ಧಿಯಲ್ಲ. ಕಾರಕೂರ ಗ್ರಾಮದಲ್ಲಿ ಈ ಹಿಂದೆ ಮಾಡಿದ ಸಿಸಿ ರಸ್ತೆಗಳು ಈಗಲೇ ಹಾಳಾಗಿವೆ. ನಿಜವಾದ ಅಭಿವೃದ್ಧಿ ಎಂದರೆ ನೀರಾವರಿ ಯೋಜನೆಗಳಿಗೆ ಒತ್ತು ನೀಡುವುದು. ರೈತರ ಹೊಲಗಳಿಗೆ ಹೋಗುವ ದಾರಿಗಳನ್ನು ಸರಿಪಡಿಸುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಅನುದಾನದ ಹಂಚಿಕೆಯಲ್ಲಿನ ತಾರತಮ್ಯದ ನೀತಿ ಅನುಸರಿಸುತ್ತಿದೆ ಆದರೇ ಬಿಜೆಪಿ ಬಾಯಿ ಮುಚ್ಚಿಕೊಂಡು ಕುಳಿತಿದೆ. ಬಿಜೆಪಿಗೆ ಬರಿ ಅಽಕಾರದ ಹುಚ್ಚೇ ವಿನಃ ಜನರ ರೈತರ ಶ್ರೇಯೋಭಿವೃದ್ಧಿ ಬೇಕಾಗಿಲ್ಲ ಎಂದರು.
ರಕ್ಕಸಗಿ ಗ್ರಾಪಂ ಪಿಡಿಒ ಮಾಲಾಶ್ರಿ ಅಮ್ಮಣ್ಣವರು ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಎಂ ಆವಾಸ್ ಯೋಜನೆಯಡಿ ೧೦೮ ಮನೆಗಳು, ಬಸವ ವಸತಿ ಯೋಜನೆಯಡಿ ೫೬ ಮನೆಗಳು ಹಾಗೂ ಡಾ. ಅಂಬೇಡ್ಕರ್ ಯೋಜನೆಯಡಿ ೧೨ ಮನೆಗಳು ಮಂಜೂರಾಗಿವೆ. ಇದಲ್ಲದೆ ಹೆಚ್ಚುವರಿಯಾಗಿ ೧೨೦ ಮನೆಗಳು ಬಂದಿದ್ದು, ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪಂಚ ಗ್ಯಾರಂಟಿ ತಾಲೂಕು ಶಿವಶಂಕರಗೌಡ ಹಿರೇಗೌಡರ, ತಾಪಂ ಇಒ ವೆಂಕಟೇಶ್ ವಂದಾಲ, ನಿಡಗುಂದಿ ತಹಸೀಲ್ದಾರ್ ಎ.ಡಿ. ಅಮರವಾಡಿ, ಬಿಇಒ ಬಿ.ಎಸ್. ಸಾಳವಗಿ, ಸಿಡಿಪಿಒ ಶಿವಮೂರ್ತಿ ಕುಂಬಾರ, ಕೃಷಿ ಇಲಾಖೆ ಅಽಕಾರಿ ಎಸ್.ಡಿ. ಬಾವಿಕಟ್ಟಿ, ಶಿವಾಜಿ ಬಿರಾದಾರ, ನಾಲತವಾಡ ಕಂದಾಯ ನಿರೀಕ್ಷೆ ವೆಂಕಟೇಶ್ ಅಂಬಿಗೇರ, ಪೃಥ್ವಿರಾಜ್ ನಾಡಗೌಡ, ಸಂಗಣ್ಣ ನಾಡಗೌಡ, ಮತ್ತಿತರರಿದ್ದರು.