ವಿಜಯಪುರ : ನಗರ ಮತಕ್ಷೇತ್ರ ವ್ಯಾಪ್ತಿಯ ತೊರವಿ ಗ್ರಾಮ ಪಂಚಾಯಿತಿಯಲ್ಲಿ ಅತೀ ಹೆಚ್ಚು ಪರಿಶಿಷ್ಟ ಜಾತಿ ಜನಾಂಗದವರು ವಾಸಿಸುವ ಕಾಲನಿಗಳಲ್ಲಿ ಹೈಮಾ¸್ಟï ಅಳವಡಿಸುವ ಕಾಮಗಾರಿಗೆ 2026-27ನೇ ಸಾಲಿನ ಕಾಲನಿ ಅಭಿವೃದ್ಧಿ/ಪ್ರಗತಿ ಕಾಲನಿ ಯೋಜನೆಯಡಿ 1 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಶೀಘ್ರದ¯್ಲೆÃ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಶಾಸಕರು, ತೊರವಿ ಗ್ರಾಮದ ಅತಾಲಟ್ಟಿ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದ ಹತ್ತಿರ, ಎಸ್‌ಸಿ ಕಾಲನಿಯ ಹನುಮಾನ ದೇವಸ್ಥಾನ ಹತ್ತಿರ, ಇಂದಿರಾ ನಗರದ ಝೆಂಡಾ ಕಟ್ಟಿ ಹತ್ತಿರ, ಪರಿಶಿಷ್ಟ ಜಾತಿಯ ಸ್ಮಶಾನದಲ್ಲಿ, ಹರಳಯ್ಯ ಸಮಾಜದ ಮರಗಮ್ಮ ದೇವಸ್ಥಾನದ ಹತ್ತಿರ, ಹರಳಯ್ಯ ಸಮಾಜದ ಸಾರ್ವಜನಿಕ ಜಾಗೆಯಲ್ಲಿ, ತೊರವಿ ಮುಖ್ಯ ರಸ್ತೆಯ ತಾಂಡಾ ನಂ. 1 ರ ಕ್ರಾಸ್ ಹತ್ತಿರ, ತಾಂಡಾ ನಂ. 1ರ ಸ್ಮಶಾನದಲ್ಲಿ, ಗೋವಿಂದ ಹುಬ್ಬು ಜಾಧವ ಅವರ ಮನೆ ಹತ್ತಿರದ ಸಾರ್ವಜನಿಕ ಜಾಗೆಯಲ್ಲಿ ಹೈಮಾ¸್ಟï ದೀಪ ಅಳವಡಿಕೆ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ.
ಅಲ್ಲದೆ, ಅಕ್ಕುಬಾಯಿ ದೇವಸ್ಥಾನದ ಹತ್ತಿರ, ತಾಂಡಾ ನಂ. 2 ರ ಪ್ರತೀಕ ಬಾಸು ರಾಠೋಡ ಅವರ ಮನೆಯ ಹತ್ತಿರದ ಸಾರ್ವಜನಿಕ ಜಾಗೆಯಲ್ಲಿ, ಹುಬ್ಬು ಹುನ್ನು ಜಾಧವ ಅವರ ಮನೆಯ ಹತ್ತಿರದ ಸಾರ್ವಜನಿಕರ ಸ್ಥಳದಲ್ಲಿ, ಗುಲಾಬಚಂದ ಮಕಾದಾಮ ಅವರ ಮನೆಯ ಹತ್ತಿರದ ಸಾರ್ವಜನಿಕರ ಸ್ಥಳದಲ್ಲಿ, ತೊರವಿ ತಾಂಡಾ ನಂ. 3 ರ ಸೇವಾಲಾಲ ವೃತ್ತದ ಹತ್ತಿರ, ತಾಂಡಾ ನಂ. 4 ರ ಏಳು ಮಕ್ಕಳ ತಾಯಿ ದೇವಸ್ಥಾನದ ಹತ್ತಿರ, ನವರಸಪುರ ಡಾ. ಬಿ.ಆರ್. ಅಂಬೇಡ್ಕರ್ ಕಾಲನಿಯಲ್ಲಿ, ನವರಸಪುರ ಎನ್‌ಜಿಒ ಕಾಲನಿ ಮತ್ತು ಲೋಕನಾಥ ಕಾಲನಿಯ ಬಸ್ ನಿಲ್ದಾಣದ ಹತ್ತಿರ, ನವರಸಪುರ ಕಬಾಡೆ ಕಾಲನಿಯ ಹನುಮಾನ ದೇವಸ್ಥಾನ ಹತ್ತಿರ ಮತ್ತು ನವರಸಪುರ ಸಿದ್ಧೇಶ್ವರ ಬಡಾವಣೆಯ ಸಾರ್ವಜನಿಕ ಸ್ಥಳದಲ್ಲಿ ತಲಾ 4.99 ಲಕ್ಷ ರೂ. ಮೊತ್ತದಲ್ಲಿ ಹೈಮಾ¸್ಟï ದೀಪ ಅಳವಡಿಕೆ ಕಾಮಗಾರಿಗೆ ಅನುದಾನ ಬಿಡುಗೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸದರಿ ಸ್ಥಳಗಳಲ್ಲಿ ಶೀಘ್ರದಲ್ಲೇ ಕಾಮಗಾರಿ ಅನುಷ್ಠಾನಗೊಳಿಸಿ ಅಲ್ಲಿನ ಜನರಿಗೆ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ನಗರ ಶಾಸಕರ ಸಾರ್ವಜನಿಕ ಸಂಪರ್ಕ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.