ವಿಜಯಪುರದ ಗಣೇಶ ನಗರದಲ್ಲಿ ನಡೆದ ಅಖಿಲ ಕರ್ನಾಟಕ ಜ್ಯೋತಿಷಿಗಳ ಒಕ್ಕೂಟದ ಸಭೆಯಲ್ಲಿ ನೂತನ ರಾಜÁ್ಯಧ್ಯಕ್ಷ ವಿದ್ವಾನ್ ಗುರುರಾಜ ಆಚಾರ್ಯ ಹೆರಕಲ್ಲ ಅವರನ್ನು ಸನ್ಮಾನಿಸಲಾಯಿತು. ಉದಯ ದೌಲತರಾವ್ ಮುದ್ದೆಬಿಹಾಳ, ಎಸ್.ಆರ್. ಪಟ್ಟಣಶೆಟ್ಟಿ, ಗೋವಿಂದಭಟ್ಟ ಜೋಶಿ ಮತ್ತಿತರರಿದ್ದರು. 
ವಿಜಯಪುರ

ಶಸ್ತ್ರ ಮಾನವನ ಅಭ್ಯುದಯಕ್ಕೆ ಪೂರಕ

ವಿಜಯಪುರ: ಸನಾತನ ಕಾಲದಿಂದಲೂ ಬಂದಿರುವ ಕಾಲಗಣನೆಯ ಶಾಸö ಮಾನವನ ಅಭ್ಯುದಯಕ್ಕೆ ಪೂರಕವಾದ ವೇದಾಂಗ. ಜ್ಯೋತಿಷ್ಯಶಾಸö ಕೆಲವೊಮ್ಮೆ ಜ್ಯೋತಿಷಿ ಸುಳ್ಳು ಹೇಳಬಹುದು ಆದರೆ ಜ್ಯೋತಿಷ್ಯ ಶಾಸö ಸುಳ್ಳಲ್ಲ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.
ಇಲ್ಲಿನ ಗಣೇಶನಗರದಲ್ಲಿ ಶನಿವಾರ ನಡೆದ ಕರ್ನಾಟಕ ಜ್ಯೋತಿಷಿಗಳ ಒಕ್ಕೂಟದ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದೂ ಧರ್ಮದ ಮೇಲೆ ಅನ್ಯ ಧರ್ಮಗಳ ಆಕ್ರಮಣ ನಡೆಯುತ್ತಿದೆ. ಹಿಂದೂಗಳ ಧರ್ಮ ನಂಬಿಕೆ, ಸಂಸ್ಕಾರ, ಶ್ರದ್ಧೆಯನ್ನು ಕದಡುವ ಆ ಮೂಲಕ ಮತಾಂತರಗೊಳಿಸುವ ದೇಶ-ವಿದೇಶದ ಶಕ್ತಿಗಳು ಪ್ರಯತ್ನಿಸುತ್ತಲೇ ಇವೆ. ಅಂತವರ ಆಕ್ರಮಣಕ್ಕೆ ಮೊದಲು ಬಲಿಯಾಗುವುದು ಜ್ಯೋತಿಷಿಗಳು, ಜ್ಯೋತಿಷ್ಯದ ನಂಬಿಕೆಗಳನ್ನು ಬುಡಮೇಲು ಮಾಡುವ ಪ್ರಯತ್ನ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಜ್ಯೋತಿಷಿಗಳು ಒಗ್ಗಟ್ಟಾಗಿ ತಮ್ಮ ಜ್ಞಾನ ಪರಂಪರೆಯನ್ನು ರಕ್ಷಿಸಬೇಕು ಎಂದು ಅವರು ತಿಳಿಸಿದರು.
ನಿವೃತ್ತ ಡಿವೈಎಸ್‌ಪಿ ಬಿ.ಆರ್. ಚೌಕಿಮಠ ಮಾತನಾಡಿ, ಜ್ಯೋತಿಷಿಗಳು ತಮ್ಮಲ್ಲಿರುವ ಅಪರಿಮಿತ ಜÁ್ಞನವನ್ನು ತಮ್ಮಲ್ಲೇ ಇಟ್ಟುಕೊಳ್ಳದೆ ನಾಲ್ಕಾರು ಜನ ಶಿಷ್ಯರಿಗೆ ಕಲಿಸಿದರೆ ಜÁ್ಞನ ಪ್ರಸಾರವಾಗಲಿದೆ. ಒಕ್ಕೂಟ ಈ ಕಾರ್ಯವನ್ನು ನಿರಂತರವಾಗಿ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಡಾ. ಆನಂದ ಹಂದಿಗೋಳ, ವಿದ್ವಾನ್ ಗುರುರಾಜ ಆಚಾರ್ಯರಲ್ಲಿ ಕತೃತ್ವ ಶಕ್ತಿ ಇದೆ. ನೂತನ ಅಧ್ಯಕ್ಷರಾಗಿ ಆಚಾರ್ಯರು ಸಂಸ್ಥೆಯನ್ನು ಇನ್ನಷ್ಟು ಪ್ರಗತಿಪಥದಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ವಿದ್ವಾನ್ ಗುರುರಾಜ ಆಚಾರ್ಯ ಹೆರಕಲ್ಲ ಹಾಗೂ ನೂತನ ಉಪಾಧ್ಯಕ್ಷ ಭುಜಂಗಶರ್ಮಾ ವಿ. ಜೋಶಿ ಅವರನ್ನು ಸನ್ಮಾನಿಸಲಾಯಿತು. ಸುರೇಶ ಕೊಪ್ಪರ, ಶ್ರೀಕಾಂತ ಮಂಗಸುಳಿ, ನಾರಾಯಣ ಮಂಗಳೂರ, ರಮೇಶ ಬಡಂಕರ್, ಶಿವಪುತ್ರಯ್ಯ ಹಿರೇಮಠ, ವೆಂಕಟೇಶ ಕುಲಕರ್ಣಿ ಮಾತನಾಡಿದರು.
ಖ್ಯಾತ ಜ್ಯೋತಿಷಿಗಳಾದ ಉದಯ ದೌಲತರಾವ್ ಮುದ್ದೆಬಿಹಾಳ, ಎಸ್.ಆರ್. ಪಟ್ಟಣಶೆಟ್ಟಿ, ಗೋವಿಂದಭಟ್ಟ ಜೋಶಿ, ನೀಲಕಂಠಯ್ಯ ಹಿರೇಮಠ, ನಾರಾಯಣ ಘೋರ್ಪಡೆ, ಸಂಜೀವಭಟ್ಟ ಬೀಳಗಿ, ಕಲ್ಯಾಣ ಆಚಾರ್ಯ ಸಂಗಮ, ಅನೀಲ ಶರ್ಮಾ ಜೋಶಿ, ಗುರುಬಸಯ್ಯ ಶೀಲವಂತ ಮತ್ತಿತರರಿದ್ದರು.
ಅಚ್ಯುತ್ ಪುರೋಹಿತ ಸ್ವಾಗತಿಸಿದರು. ಮಹಾದೇವಿ ದೊಡಮನಿ ನಿರೂಪಿಸಿದರು. ಶ್ರೀಕಾಂತ ಆಚಾರ್ಯ ವಂದಿಸಿದರು.