SUNITA-CHOUHAN 
ವಿಜಯಪುರ

ಡಾ.ಸುನಿತಾ ಚವಾಣ್‌ಗೆ ಉತ್ತಮ ಅವಕಾಶ, ಮಿನಿಸ್ಟರಿ ಆಫ್ ಸ್ಟೀಲ್‌ನ ಸದಸ್ಯೆಯಾಗಿ ನಾಮ ನಿರ್ದೇಶನ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ದೇವಾನಂದ ಅವರ ಧರ್ಮಪತ್ನಿ
  • ಡಾ.ಸುನಿತಾ ಚವಾಣ್‌ಗೆ ಒಲಿದು ಬಂದ ಅವಕಾಶ
  • ಕೇಂದ್ರದ ಇಲಾಖೆಗೆ ನಾಮ ನಿರ್ದೇಶನ
ವಿಜಯಪುರ: ಕೇಂದ್ರ ಸರ್ಕಾರದ ‘ಮಿನಿಸ್ಟರಿ ಆಫ್ ಸ್ಟೀಲ್’ನ ಸದಸ್ಯರಾಗಿ ಜೆಡಿಎಸ್ ಕೋರ್ ಕಮೀಟಿ ಸದಸ್ಯೆ ಡಾ.ಸುನೀತಾ ಚವಾಣ್ ನಾಮನಿರ್ದೇಶನಗೊಂಡಿದ್ದಾರೆ.
ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಅಡಿಯಲ್ಲಿ ಬರುವ ಈ ಇಲಾಖೆಗೆ 15 ಸದಸ್ಯರು ನಾಮನಿರ್ದೇಶನಗೊಂಡಿದ್ದು, ಅದರಲ್ಲಿ ಡಾ.ಸುನಿತಾ ಚವಾಣ್ ಕೂಡ ಒಬ್ಬರು. ಮಾಜಿ ಶಾಸಕ ಡಾ.ದೇವಾನಂದ ಚವಾಣ್ ಅವರ ಧರ್ಮಪತ್ನಿಯಾಗಿರುವ ಸುನಿತಾ ಅವರು ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವಿಜಯಪುರ ಲೋಕ ಸಭೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಸದ್ಯ ಜೆಡಿಎಸ್‌ನಲ್ಲಿ ಕೋರ್ ಕಮಿಟಿ ಸದಸ್ಯೆಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಇವರು ಇದೀಗ ಕೇಂದ್ರದ ಇಲಾಖೆಯೊಂದಕ್ಕೆ ನಾಮ ನಿರ್ದೇಶನಗೊಂಡಿರುವುದರ ಹಿಂದೆ ಬರುವ ವಿಧಾನ ಸಭೆ ಚುನಾವಣೆಯ ದೂರದೃಷ್ಠಿಯೂ ಅಡಗಿದೆ ಎಂದು ವಿಶ್ಲೇಷಿಸಲಾಗಿದೆ.