ವಿಜಯಪುರ ಚೇತನಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಶ್ರಾವಣ ಮಾಸದ ಶುಕ್ರವಾರದ ಅಂಗವಾಗಿ ಸರಸ್ವತಿ ಪೂಜಾ ಕಾರ್ಯಕ್ರಮ ನಡೆಯಿತು. ರಾಜಶ್ರೀ ಜುಗತಿ, ಎ.ಎಚ್. ಕೊಳಮಲಿ, ಸಾಗರ ಕುಲಕರ್ಣಿ ಮತ್ತಿತರರಿದ್ದಾರೆ. 
ವಿಜಯಪುರ

ಜ್ಞಾನ ದೇಗುಲದ ಅಽದೇವತೆ ಸರಸ್ವತಿ

ವಿಜಯಪುರ:

ಸರಸ್ವತಿ ಮಾತೆಯನ್ನು ಆರಾಽಸುವ ಪೂಜಾ ಕಾರ್ಯಕ್ರಮವು ಭಾರತೀಯ ಶ್ರೇಷ್ಠ ಆರಾಧನೆಯಲ್ಲಿ ಒಂದು ಎಂದು ಚೇತನಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ರಾಜಶ್ರೀ ಜುಗತಿ ಹೇಳಿದರು.

ನಗರದ ಚೇತನಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಶ್ರಾವಣ ಮಾಸದ ಶುಕ್ರವಾರ ಹಮ್ಮಿಕೊಂಡ ಸರಸ್ವತಿ ಪೂಜಾ ಕಾರ್ಯಕ್ರಮದಲ್ಲಿ ಸರಸ್ವತಿ ಮಾತೆಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಎಲ್ಲರೂ ಆರಾಽಸುವ ಶ್ರೇಷ್ಠ ಮಾತೆ ಸರಸ್ವತಿ. ಜ್ಞಾನ ದೇಗುಲದ ಅಽದೇವತೆಯಾದ ತಾಯಿ ಸರಸ್ವತಿ ಜ್ಞಾನ, ಶಿಕ್ಷಣ, ಕಲಿಕೆ, ಕಲೆ, ಮಾತು, ಕಾವ್ಯ, ಸಂಗೀತ, ಭಾಷೆ ಮತ್ತು ಸೃಜನಶೀಲತೆಯ ದೇವತೆಯಾಗಿ ಪೂಜಿಸಲ್ಪಡುತ್ತಾಳೆ ಎಂದರು.
ಮುಖ್ಯ ಗುರು ಎ.ಎಚ್. ಕೊಳಮಲಿ ಮಾತನಾಡಿ, ಪುರಾಣ ಕಾಲದಿಂದಲೂ ಭಾರತೀಯರು ಅತ್ಯಂತ ಗೌರವ ಪೂರಕವಾಗಿ ಪೂಜಿಸುವ ದೇವತೆ ಸರಸ್ವತಿ ಮಾತೆ. ಸರಸ್ವತಿ ಮಾತೆಯನ್ನು ನಿತ್ಯ ಪೂಜಿಸಿದರೆ ಜೀವನ ಪಾವನವಾಗುತ್ತದೆ ಎಂದು ತಿಳಿಸಿದರು.
ಸಂಸ್ಥೆ ಉಪಾಧ್ಯಕ್ಷ ರೋಹಿತ ಜುಗತಿ, ನಿರ್ದೇಶಕ ನಾಗರಾಜ ಹೇರಲಗಿ, ಸಹಾಯಕ ಆಡಳಿತಾಽಕಾರಿ ಪ್ರಮೋದ ಕುಲಕರ್ಣಿ, ಸಿ.ಎಸ್. ವಾಲಿ, ಸಾಗರ ಕುಲಕರ್ಣಿ ಮತ್ತಿತರರಿದ್ದರು.