ವಿಜಯಪುರದ ಸಂಗನಬಸವ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಜಿ.ಎಂ. ಬಿರಾದಾರ, ಎಚ್. ವೆಂಕಟೇಶ ಮತ್ತಿತರರಿದ್ದಾರೆ. 
ವಿಜಯಪುರ

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ

ಇಂದಿನ ದಿನಗಳಲ್ಲಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವುದು ಅತ್ಯಗತ್ಯವಾಗಿದೆ. ಮಕ್ಕಳು ತಮಗಿರುವ ಸೌಲಭ್ಯಗಳ ಸದುಪಯೋಗ ಪಡೆದು ಸಾಧನೆಗೈಯಬೇಕು ಎಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಜಿ.ಎಂ.ಬಿರಾದಾರ ಹೇಳಿದರು.
ನಗರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಗನಬಸವ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಯ ಸಿಇಒ ಎಚ್. ವೆಂಕಟೇಶ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಗುರಿ ಮತ್ತು ಸಾಧಿಸುವ ಛಲ ಇರಬೇಕು. ಜತೆಗೆ ಶ್ರಮಿಸುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.
ಪ್ರಾಚಾರ್ಯ ವೀರೇಶ ಪಿ., ಸುನೀತಾ ಕಟ್ಟಿಮನಿ, ಅರುಣಾ ತೆನ್ನಹಳ್ಳಿ, ಕಿರಣಕುಮಾರ ಬಿ.ಜಿ., ರಾಜಕುಮಾರ ಬಿರಾದಾರ, ಮಲ್ಲಿಕಾರ್ಜುನ ಹಿರೇಮಠ, ಪವನ ಹಿರೇಮಠ, ರಮೇಶ ಮೇತ್ರಿ, ಶಿವಾನಂದ ಪುಟಗಿ, ಪ್ರಭಂಜನ ಜೋಷಿ, ಯಲಮ್ಮ ಚವ್ಹಾಣ್, ಮಹಾನಟದ ಉಪ್ಪಿನ, ಸಿಂಧೂ ಬಿ., ಸಾವಿತ್ರಿ ಮಠದ, ಸರಸ್ವತಿ ಎಂ., ಪರಿದಾ ಉಕ್ಕಲಿ, ಜಗದೀಶ ಸಾತಿಹಾಳ ಉಪಸ್ಥಿತರಿದ್ದರು.
ಮನಮಿ ಸ್ವಾಗತಿಸಿದರು. ಲಕ್ರಾದಾರ ಮತ್ತು ಆರ್ಯನ್ ಗುಗ್ಗರಿ ನಿರೂಪಿಸಿದರು. ಅಪೇಕ್ಷ ಪತ್ತಾರ ವಂದಿಸಿದರು.