ವಿಜಯಪುರದ ಬಿಎಲ್‌ಡಿಇ ಡೀಮ್ಡï ವಿವಿಯ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ ಜಠರದ ಕ್ಯಾನ್ಸರ್ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಎಚ್‌ಸಿಜಿ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ವೈದ್ಯ ಶ್ರೀಕಾಂತ ರವಿಚಂದ್ರನ್ ಅವರನ್ನು ಸನ್ಮಾನಿಸಲಾಯಿತು. ಮಂಜುನಾಥ ಕೋಟೆಣ್ಣವರ ಮತ್ತಿತರರಿದ್ದಾರೆ.
ವಿಜಯಪುರ : ಅತಿಯಾದ ಆಮ್ಲೀಯತೆ ಅಥವಾ ಗ್ಯಾಸ್ಟಿçಕ್ ಸಮಸ್ಯೆ ಜಠರದ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ಹುಬ್ಬಳ್ಳಿ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಸಂದರ್ಶಕ ತಜ್ಞ ವೈದ್ಯ ಡಾ. ಶ್ರೀಕಾಂತ ರವಿಚಂದ್ರನ್ ಹೇಳಿದರು.
ನಗರದ ಬಿಎಲ್‌ಡಿಇ ಡೀಮ್ಡï ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸö ಚಿಕಿತ್ಸೆ ವಿಭಾಗ ಮಂಗಳವಾರ ಹಮ್ಮಿಕೊಂಡಿದ್ದ ಜಠರದ ಕ್ಯಾನ್ಸರ್ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
40 ವರ್ಷ ದಾಟಿದ ವಯಸ್ಕರು ಗ್ಯಾಸ್ಟಿçಕ್ ಸಮಸ್ಯೆಯನ್ನು ನಿರ್ಲಕ್ಷಿಸಬಾರದು. ಔಷಧ ಅಂಗಡಿಗಳಲ್ಲಿ ಸ್ವಚಿಕಿತ್ಸೆಯನ್ನು ಪಡೆಯದೆ ಉದರದರ್ಶಕ ಯಂತ್ರದ (ಎಂಡೊಸ್ಕೋಪಿ) ತಪಾಸಣೆ ಮಾಡಿಸಿಕೊಂಡರೆ ಜಠರದ ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆಯ ಮೂಲಕ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ ಎಂದು ಅವರು ತಿಳಿಸಿದರಲ್ಲದೇ, ಜಠರದ ಕ್ಯಾನ್ಸರ್ ರೋಗದ ವಿವಿಧ ಗುಣಲಕ್ಷಣಗಳು ಮತ್ತು ತಪಾಸಣೆ ವಿಧಾನಗಳು ಹಾಗೂ ಲಭ್ಯವಿರುವ ಚಿಕಿತ್ಸೆ ಕ್ರಮಗಳನ್ನು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಬಿಎಲïಡಿಇ ಆಸ್ಪತ್ರೆಯ ಶಸöಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲ ಕ್ಯಾನ್ಸರ್‌ಗಳಂತೆ ಜಠರದ ಕ್ಯಾನ್ಸರ್ ಸಹ ತಂಬಾಕು, ಸಿಗರೇಟು, ಸಾರಾಯಿ ಸೇವನೆ ಅಂತಹ ದುಶ್ಟಟಗಳು, ಹೆಚ್ಚು ಹೊತ್ತಿಸಿದ ಎಣ್ಣೆ, ಮಸಾಲೆ ಆಹಾರ ಸೇವನೆ ಹಾಗೂ ಅನುವಂಶಿಕವಾಗಿಯೂ ಬರಬಹುದು. ದೀರ್ಘಕಾಲದ ಗ್ಯಾಸ್ಟಿçಕ್ ಸಮಸ್ಯೆಯೆಂದು ಸುಮ್ಮನಿರದೆ, ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಿ¯್ಲÁ ಶಸö ಚಿಕಿತ್ಸಕರ ಸಂಘದ ಕಾರ್ಯದರ್ಶಿ ರಮಾಕಾಂತ ಬಳೂರಕರ ಮಾತನಾಡಿದರು. ಶಸöಚಿಕಿತ್ಸೆ ವಿಭಾಗದ ಪ್ರಾಧ್ಯಾಪಕಿ ವಿಜಯಾ ಪಾಟೀಲ, ಗಿರೀಶ ಕು¯್ಲೆÆಳ್ಳಿ, ವಿಕ್ರಂ ಸಿಂದಗಿಕರ, ದೀಪಕ ಚವಾಣ್, ದಯಾನಂದ ಬಿರಾದಾರ, ಪ್ರದೀಪ ಜಾಜು ಮತ್ತಿತರರಿದ್ದರು.