ರೇಣುಕಾ ಪ್ರಸಾದ 
ವಿಜಯಪುರ

ವೃಕ್ಷಥಾನ್ ಹೆರಿಟೇಜ್ ರನ್‌ಗೆ ಉಚಿತ ತರಬೇತಿ

ವಿಜಯಪುರ: ಖ್ಯಾತ ಯೋಗ ತರಬೇತುದಾರ, ಮ್ಯಾರಾಥಾನ್ ಓಟಗಾರ ಹಾಗೂ ಅಲ್ಟಾç ರನ್ನರ್ ರೇಣುಕಾ ಪ್ರಸಾದ ಅವರು ಸೆಪ್ಟೆಂಬರ್ ಮೊದಲ ವಾರದಿಂದ ಡಿಸೆಂಬರ್ ಮೊದಲ ವಾರದವರೆಗೆ ಪ್ರತಿ ಶನಿವಾರ ಮತ್ತು ರವಿವಾರ ನಗರದಲ್ಲಿ ಓಟದ ಕುರಿತು ಉಚಿತ ತರಬೇತಿ ನೀಡಲಿz್ದÁರೆ.
ನಗರದ ಬಿಎಲ್‌ಡಿಇ ಸಂಸ್ಥೆಯ ಹೊಸ ಕ್ಯಾಂಪಸ್‌ನಲ್ಲಿರುವ ಎಎಸ್‌ಪಿ ಕಾಮರ್ಸ್ ಕಾಲೇಜಿನ ಕ್ರೀಡಾಂಗಣದಲ್ಲಿ ಶನಿವಾರ ಮತ್ತು ಭಾನುವಾರ ಬೆಳಗ್ಗೆ 6 ಗಂಟೆಗೆ ತರಬೇತಿ ನೀಡಲಿz್ದÁರೆ. ವೃಕ್ಷಥಾನ್ ಹೆರಿಟೇಜ್ ರನ್-2026ರಲ್ಲಿ 10 ಕಿಮೀ. ಮತ್ತು 21 ಕಿಮೀ. ಓಟಗಳಲ್ಲಿ ಪಾಲ್ಗೋಳ್ಳುವವರು ಇದರ ಪ್ರಯೋಜನ ಪಡೆಯಬಹುದಾಗಿದೆ.
ರೇಣುಕಾ ಪ್ರಸಾದ ಅವರು, ಭಾರತದಾದ್ಯಂತ ನಡೆದ ಹಲವು ಪ್ರತಿಷ್ಠಿತ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಬೆಂಗಳೂರು ಮ್ಯಾರಥಾನ್ ಮತ್ತು ಮುಂಬೈ ಮ್ಯಾರಥಾನ್ ಸೇರಿ ಹಲವು ಪ್ರಮುಖ ಮ್ಯಾರಥಾನ್‌ಗಳಲ್ಲಿ ಅಽಕೃತ ಪೇಸರ್ ಆಗಿ ಪಾಲ್ಗೊಂಡಿz್ದÁರೆ. ಅಲ್ಲದೆ, ಅವರ 18ಕ್ಕೂ ಅಽಕ ವರ್ಷಗಳ ಓಟದ ಅನುಭವದೊಂದಿಗೆ ಓಟಗಾರರಿಗೆ ಸರಿಯಾದ ವೇಗ, ತರಬೇತಿ ಮತ್ತು ಓಟದ ತಂತ್ರಗಳನ್ನು ಬೆಳೆಸಲು ಮಾರ್ಗದರ್ಶನ ನೀಡುತ್ತಿz್ದÁರೆ.
ಓಟವೆಂದರೆ ನಿರಂತರತೆ, ಶಿಸ್ತು, ದೈಹಿಕ ಸಾಮರ್ಥ್ಯ ಮತ್ತು ಸಂತೋಷದಿAದ ಸಾಗುವ ಒಂದು ಪಯಣವಾಗಿದೆ. ಓಡಲು ಸಾಧ್ಯವಾದಾಗ ಓಡಿ, ಸಾಧ್ಯವಾಗದಿದ್ದರೆ ನಡೆಯಿರಿ, ಅಗತ್ಯವಿದ್ದರೆ ತೆವಳಿಯಾದರೂ ಸರಿ, ಆದರೆ ಎಂದಿಗೂ ಕೈಬಿಡಬೇಡಿ. ಕ್ರಮಬದ್ಧ ಮತ್ತು ಹಂತ ಹಂತವಾಗಿ ಹೆಚ್ಚಿಸುವ ತರಬೇತಿ ಉತ್ತಮ ಓಟದ ಸಾಮರ್ಥ್ಯವನ್ನು ಬೆಳೆಸುವುದರ ಜತೆಗೆ ಗಾಯಗಳ ಅಪಾಯವನ್ನು ಕಡಿಮೆ ಮಾಡಿ, ಓಟದ ಪಯಣವನ್ನು ಹೆಚ್ಚು ಸಂತೋಷದಾಯಕವಾಗಿಸುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ.